ಸಾಂದರ್ಭಿಕ ಚಿತ್ರ 
ದೇಶ

ಗುಜರಾತ್‌: ಪ್ರಯೋಗಾಲಯದ ಉಪಕರಣದಿಂದ 10ನೇ ತರಗತಿ ವಿದ್ಯಾರ್ಥಿ ಕೊಂದ 8ನೇ ತರಗತಿ ಬಾಲಕ!

ತೀಕ್ಷ್ಣವಾದ ಪ್ರಯೋಗಾಲಯದ ಉಪಕರಣವನ್ನು ಹೊಂದಿದ್ದ ಆರೋಪಿ, 8ನೇ ತರಗತಿ ವಿದ್ಯಾರ್ಥಿ, ಶಾಲೆಯಿಂದ ಸ್ವಲ್ಪ ದೂರದಲ್ಲಿ 10ನೇ ತರಗತಿ ವಿದ್ಯಾರ್ಥಿಯ ಹೊಟ್ಟೆಗೆ ಇರಿದಿದ್ದಾನೆ.

ಅಹಮದಾಬಾದ್: ಗುಜರಾತ್‌ನ ಅಹಮದಾಬಾದ್ ನಗರದ ಖೋಖ್ರಾದ ಸೆವೆಂತ್ ಡೇ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಯೊಬ್ಬ ಅದೇ ಶಾಲೆಯ 10ನೇ ತರಗತಿಯ ವಿದ್ಯಾರ್ಥಿಯನ್ನು ಇರಿದು ಕೊಲೆ ಮಾಡಿರುವ ಆಘಾತಕಾರಿ ಘಟನೆ ಮಂಗಳವಾರ ನಡೆದಿದೆ.

ಶಾಲೆ ಬಿಟ್ಟ ನಂತರ ಇಬ್ಬರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ತೀಕ್ಷ್ಣವಾದ ಪ್ರಯೋಗಾಲಯದ ಉಪಕರಣವನ್ನು ಹೊಂದಿದ್ದ ಆರೋಪಿ 8ನೇ ತರಗತಿ ವಿದ್ಯಾರ್ಥಿ, ಶಾಲೆಯಿಂದ ಸ್ವಲ್ಪ ದೂರದಲ್ಲಿ ಮನಿಯಾಶಾ ಸೊಸೈಟಿಯ ಗೇಟ್ ಬಳಿ 10ನೇ ತರಗತಿ ವಿದ್ಯಾರ್ಥಿ ಹೊಟ್ಟೆಗೆ ಇರಿದಿದ್ದಾನೆ.

ಘೋಡಾಸರ್ ನಿವಾಸಿಯಾದ ಮೃತ ಬಾಲಕ, ಕುಸಿದು ಬೀಳುವ ಮೊದಲು ಕಾಂಪೌಂಡ್‌ನ ಹಿಂಭಾಗಕ್ಕೆ ಓಡಿಹೋಗಿದ್ದು, ಆತನನ್ನು ಸಹ ವಿದ್ಯಾರ್ಥಿಗಳು ಸರ್ದಾರ್ ಪಟೇಲ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಬುಧವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಮೂಲಗಳು ಒಂದು ಆತಂಕಕಾರಿ ಹಿನ್ನೆಲೆಯನ್ನು ಬಹಿರಂಗಪಡಿಸಿದ್ದು, ದಾಳಿಗೆ ಒಂದು ವಾರ ಮೊದಲು, ಹಲ್ಲೆಕೋರನು ಮೃತ ಬಾಲಕನ ಸೋದರಸಂಬಂಧಿ, ಅದೇ ಶಾಲೆಯ ವಿದ್ಯಾರ್ಥಿ ಜತೆ ಮೆಟ್ಟಿಲುಗಳ ಮೇಲೆ ಜಗಳವಾಡಿದ್ದನು. ಈ ಕೊಲೆಯು ಐದರಿಂದ ಏಳು ಇತರ ವಿದ್ಯಾರ್ಥಿಗಳ ಮುಂದೆ ಅತ್ಯಂತ ನಿಖರವಾಗಿ ನಡೆಸಲಾದ ಸೇಡಿನ ಪೂರ್ವಯೋಜಿತ ಕೃತ್ಯವಾಗಿರಬಹುದು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.

ಮೃತ ಬಾಲಕನ ಕುಟುಂಬ, ಸುದ್ದಿ ತಿಳಿಯುತ್ತಿದ್ದಂತೆ ಶಾಲಾ ಆವರಣಕ್ಕೆ ನುಗ್ಗಿ, ಪಿಠೋಪಕರಣಗಳನ್ನು ಧ್ವಂಸ ಮಾಡಿ ಆಕ್ರೋಶ ವ್ಯಕ್ತಪಡಿಸಿದರು ಮತ್ತು ಶಾಲಾ ಸಿಬ್ಬಂದಿಯ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದರು.

ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್