ನವದೆಹಲಿ: ಸಮಾಜವಾದಿ ಪಕ್ಷದ ಸಂಸದೆ ಡಿಂಪಲ್ ಯಾದವ್ ಮೇಲೆ ತನಗೆ ಕ್ರಶ್ ಇದೆ ಎಂದು ಸ್ವರಾ ಭಾಸ್ಕರ್ ನೀಡಿರುವ ಹೇಳಿಕೆ ತೀವ್ರ ಸಂಚಲನ ಮೂಡಿಸಿದೆ. ನಟಿ ಸ್ವರಾ ಭಾಸ್ಕರ್ ತಮ್ಮ ಅಭಿಪ್ರಾಯಗಳಿಗಾಗಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಇತ್ತೀಚಿಗೆ ಸ್ಕ್ರೀನ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಎಲ್ಲಾ ಜನರು ಮೂಲಭೂತವಾಗಿ ದ್ವಿಲಿಂಗಿಗಳು ಎಂದಿದ್ದಾರೆ ನಾವೆಲ್ಲರೂ ದ್ವಿಲಿಂಗಿಗಳು ಎಂದು ಹೇಳಿಕೊಂಡಿದ್ದಾರೆ. ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್ ಅವರ ಮೇಲೆ ನನಗೆ ಅಪಾರ ಕ್ರಶ್ ಇದೆ ಎಂದು ಸ್ವರಾ ಹೇಳಿದ್ದಾರೆ.
ಜನರನ್ನು ಅವರವರ ವಿವೇಚನೆಗೆ ಬಿಟ್ಟರೆ, ಅವರೆಲ್ಲರೂ ದ್ವಿಲಿಂಗಿಗಳು, ಆದರೆ ಭಿನ್ನಲಿಂಗೀಯತೆ ಎಂಬುದು ಸಾವಿರಾರು ವರ್ಷಗಳಿಂದ ನಮ್ಮಲ್ಲಿ ಬೇರೂರಿರುವ ಒಂದು ಸಿದ್ಧಾಂತ. ಏಕೆಂದರೆ ಮಾನವ ಜನಾಂಗವು ಹೀಗೆಯೇ ಶಾಶ್ವತವಾಗಿ ಉಳಿಯುತ್ತದೆ ಎಂದು ಅವರು ಹೇಳಿದರು.
ಸ್ವರಾ ಭಾಸ್ಕರ್ ಪ್ರಸ್ತುತ ನಡೆಯುತ್ತಿರುವ ರಿಯಾಲಿಟಿ ಶೋ ಪತಿ ಪತ್ನಿ ಔರ್ ಪಂಗಾ - ಜೋಡಿಯೋಂ ಕಾ ರಿಯಾಲಿಟಿ ಚೆಕ್‌ನಲ್ಲಿ ತಮ್ಮ ಪತಿ ಮತ್ತು ರಾಜಕಾರಣಿ ಫಹಾದ್ ಅಹ್ಮದ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಇನ್ನೂ ಸ್ವರಾ ಭಾಸ್ಕರ್ ಹೇಳಿಕೆಗೆ ನೆಟಿಜನ್ಸ್ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಆಕೆಗೆ ಬ್ರೈನ್ ವಾಶ್ ಮಾಡಲಾಗಿದೆ ಎಂದಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ, ನೆಟ್ಟಿಗರು ಸ್ವರಾ ಭಾಸ್ಕರ್ ಅವರನ್ನು ತೀವ್ರವಾಗಿ ಟ್ರೋಲ್ ಮಾಡುತ್ತಿದ್ದಾರೆ. ಕೆಲವರು ಸ್ವರಾ ಭಾಸ್ಕರ್ ಅವರ ಹೇಳಿಕೆಯಿಂದ ಅವರ ಪತಿ ಅಖಿಲೇಶ್ ಯಾದವ್ ಅವರಿಗೆ ಎಷ್ಟು ನೋವಾಗಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಅವರ ಹಿಂದಿನ ಕೆಲವು ಸಿನಿಮಾಗಳನ್ನು ಉಲ್ಲೇಖಿಸಿ "ಅವರು ಸಿನಿಮಾಗಳಲ್ಲಿ ಮಾತ್ರವಲ್ಲ ನಿಜ ಜೀವನದಲ್ಲೂ ಹೀಗೆಯೇ ಇದ್ದಾರಾ?" ಎಂದು ಕೇಳುವ ಮೂಲಕ ಅವರನ್ನು ಟೀಕಿಸುತ್ತಿದ್ದಾರೆ.