ಪ್ರಧಾನಿ ಮೋದಿ, ಡೊನಾಲ್ಡ್ ಟ್ರಂಪ್ ಸಾಂದರ್ಭಿಕ ಚಿತ್ರ 
ದೇಶ

US tariff deadline: ಅಮೆರಿಕದ ಶೇ. 50 ರಷ್ಟು ಸುಂಕ ಆಗಸ್ಟ್ 27 ರಿಂದ ಜಾರಿ; ಮಂಗಳವಾರ ಮಹತ್ವದ PMO ಸಭೆ; ಮೋದಿ ಹೇಳಿದ್ದೇನು? Video

ಅಮೆರಿಕದಿಂದ ಎಷ್ಟೇ ಒತ್ತಡವಿದ್ದರೂ ತಮ್ಮ ಸರ್ಕಾರ ಒಂದು ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ನವದೆಹಲಿ: ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲಿನ ಶೇ. 50 ರಷ್ಟು ಅಮೆರಿಕದ ಸುಂಕಗಳು ಆಗಸ್ಟ್ 27 ರಿಂದ ಜಾರಿಗೆ ಬರಲಿವೆ.

ಈ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿಗಳ ಕಾರ್ಯಾಲಯದಲ್ಲಿ ನಾಳೆ ಉನ್ನತ ಮಟ್ಟದ ಸಭೆ ಕರೆಯಲಾಗಿದೆ. ಸಭೆಯಲ್ಲಿ ಅಮೇರಿಕಾದ ಹೆಚ್ಚುವರಿ ಸುಂಕದಿಂದ ಭಾರತೀಯ ರಫ್ತುದಾರರ ಮೇಲಾಗುವ ಪರಿಣಾಮಗಳ ಕುರಿತು ಚರ್ಚಿಸಲಾಗುತ್ತದೆ. ಪ್ರಧಾನ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ ವಹಿಸುವ ಅಧ್ಯಕ್ಷತೆ ವಹಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

ಈ ಮಧ್ಯೆ ಅಮೆರಿಕದಿಂದ ಎಷ್ಟೇ ಒತ್ತಡವಿದ್ದರೂ ತಮ್ಮ ಸರ್ಕಾರ ಒಂದು ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಅಹಮದಾಬಾದ್ ನಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, "ಇಂದು ಜಗತ್ತಿನಲ್ಲಿ ಆರ್ಥಿಕ ಸ್ವಾರ್ಥವನ್ನು ಆಧರಿಸಿದ ನೀತಿಗಳನ್ನು ನಾವೆಲ್ಲರೂ ನೋಡುತ್ತಿದ್ದೇವೆ. ಅಂತಹ ರಕ್ಷಣಾ ಕ್ರಮಗಳ ವಿರುದ್ಧ ಭಾರತ ದೃಢವಾಗಿ ನಿಲ್ಲುತ್ತದೆ. ತನ್ನ ನಾಗರಿಕರ ಹಿತಾಸಕ್ತಿಗಳಿಗೆ ಆದ್ಯತೆ ನೀಡುತ್ತದೆ ಎಂದು ಅವರು ರಾಷ್ಟ್ರಕ್ಕೆ ಭರವಸೆ ನೀಡಿದರು.

ಗಾಂಧಿ ನೆಲದಿಂದ ನಾನು ಮತ್ತೆ ಮತ್ತೆ ಭರವಸೆ:

ಸಣ್ಣ ಅಂಗಡಿಯವರು, ರೈತರು, ಜಾನುವಾರು ಸಾಕಣೆದಾರರು ಮತ್ತು ಸಣ್ಣ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದ ಮೋದಿ, "ಗಾಂಧಿ ನೆಲದಿಂದ ನಾನು ಮತ್ತೆ ಮತ್ತೆ ಭರವಸೆ ನೀಡುತ್ತೇನೆ. ಮೋದಿಯವರಿಗೆ ನಿಮ್ಮ ಹಿತಾಸಕ್ತಿಯೇ ಮುಖ್ಯ, ನನ್ನ ಸರ್ಕಾರವು ಸಣ್ಣ ಉದ್ಯಮಿಗಳು, ಜಾನುವಾರು ಸಾಕಣೆದಾರರು ಅಥವಾ ರೈತರಿಗೆ ಯಾವುದೇ ಹಾನಿ ಮಾಡಲು ಎಂದಿಗೂ ಬಿಡುವುದಿಲ್ಲ" ಎಂದು ಘೋಷಿಸಿದರು.

ಈ ವರ್ಷದ ಆಗಸ್ಟ್‌ನಲ್ಲಿ ಟ್ರಂಪ್ ಆಡಳಿತವು ಭಾರತೀಯ ರಫ್ತು ಸರಕುಗಳ ಮೇಲೆ ಶೇ. 25 ರಷ್ಟು ಹೆಚ್ಚುವರಿ ಸುಂಕ ವಿಧಿಸಿತ್ತು. ತದನಂತರ ಭಾರತ ರಷ್ಯಾದಿಂದ ತೈಲ ಖರೀದಿಸುತ್ತಿದೆ ಎಂಬ ಕಾರಣಕ್ಕೆ ಒಟ್ಟಾರೇ ಶೇ. 50 ರಷ್ಟು ಸುಂಕವನ್ನು ಹೇರಿದೆ.

BTA ಮೇಲೆ ಅನುಮಾನ: ಈ ಅನಿರೀಕ್ಷಿತ ಕ್ರಮ ಭಾರತದಲ್ಲಿನ ವ್ಯಾಪಾರ ಮಾತುಕತೆಯನ್ನು ಮುಂದೂಡಿದೆ. ಸೆಪ್ಟೆಂಬರ್-ಅಕ್ಟೋಬರ್ ಆಸುಪಾಸಿನಲ್ಲಿ ನಿರೀಕ್ಷಿಸಲಾಗಿದ್ದ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ (BTA)ಮೇಲೆ ಅನುಮಾನ ಉಂಟಾಗಿದೆ.

ಟ್ರಂಪ್ ಘೋಷಿಸಿದ ಈ ಕ್ರಮವು ಭಾರತೀಯ ನಾಯಕರು ಮತ್ತು ವ್ಯಾಪಾರ ಸಮುದಾಯಗಳಿಂದ ತೀಕ್ಷ್ಣವಾದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಮೆರಿಕದಿಂದ ಹೆಚ್ಚುತ್ತಿರುವ ಒತ್ತಡದ ಹೊರತಾಗಿಯೂ, UK, EU, EFTA ಮತ್ತು ASEAN ಸೇರಿದಂತೆ ಮತ್ತಿತರ ರಾಷ್ಟ್ರಗಳೊಂದಿಗೆ ಭಾರತ ವ್ಯಾಪಾರ ಮಾತುಕತೆ ಮುಂದುವರೆಸಿದೆ.

ಅಮೆರಿಕದೊಂದಿಗೆ ಇಂಧನ ಸಂಬಂಧ ಬಲಪಡಿಸುವ ಮೂಲಕ ಮತ್ತು ಸಕ್ರಿಯ ಮಾತುಕತೆ ಮೂಲಕ ಸುಂಕ ವಿಚಾರವಾಗಿ ಪ್ರಸ್ತುತವಾಗಿ ಉಂಟಾಗಿರುವ ಬಿಕ್ಕಟ್ಟು ಶಮನಗೊಳಿಸಲು ಭಾರತವೂ ಪ್ರಯತ್ನಿಸುತ್ತಿದೆ.

ಭಾರತ- ಫಿಜಿ ರಕ್ಷಣಾ ಸಹಕಾರ ಕ್ರಿಯಾ ಯೋಜನೆ ಸಿದ್ಧ: ಇಂಡೋ ಪೆಸಿಫಿಕ್‌ ವಲಯದಲ್ಲಿ ಚೀನಾದ ಪ್ರಾಬಲ್ಯ ತಡೆಗೆ ಮಾಸ್ಟರ್ ಪ್ಲಾನ್!

ಕಾರುಗಳ ಬೆಲೆಯಲ್ಲಿ ಆಗಲಿದೆ ಭಾರಿ ಇಳಿಕೆ: GST ಪರಿಷ್ಕರಣೆಗಾಗಿ ಕಾದು ಕುಳಿತ ಗ್ರಾಹಕರು!

IADWS: ಭಾರತೀಯ ಸೇನೆ ಬತ್ತಳಿಕೆಗೆ 'ಲೇಸರ್ ನಿರ್ದೇಶಿತ ಹೊಸ ಅಸ್ತ್ರ': ದಂಗಾದ ಚೀನಾ, ಹೇಳಿದ್ದು ಏನು?

ಗೌರಿ-ಗಣೇಶ ಹಬ್ಬ: ಪರಿಸರ ಕಾಳಜಿ ಮರೆಯದಿರೋಣ, ಜನತೆಗೆ ಸಿಎಂ ಸಿದ್ದರಾಮಯ್ಯ ಕರೆ! Video

Guruvayur ದೇವಸ್ಥಾನದ ಕೊಳದಲ್ಲಿ ಪಾದ ತೊಳೆದ ಜಾಸ್ಮಿನ್ ಜಾಫರ್: ಮಂಗಳವಾರ 'ಶುದ್ಧೀಕರಣ' ; ಭಕ್ತರ ಪ್ರವೇಶಕ್ಕೆ ನಿರ್ಬಂಧ!

SCROLL FOR NEXT