ಸಾಂದರ್ಭಿಕ ಚಿತ್ರ 
ದೇಶ

ಛತ್ತೀಸ್‌ಗಢ: ಬಿಜಾಪುರದಲ್ಲಿ ಎನ್‌ಕೌಂಟರ್‌ಗೆ ಐವರು ನಕ್ಸಲರು ಬಲಿ; ಒಬ್ಬ ಪೊಲೀಸ್ ಹುತಾತ್ಮ

ಗುಂಡಿನ ಚಕಮಕಿಯಲ್ಲಿ ಮತ್ತೊಬ್ಬ ಜವಾನ್ ಗಾಯಗೊಂಡಿದ್ದು, ಕಾರ್ಯಾಚರಣೆ ಇನ್ನೂ ಮುಂದುವರೆದಿದೆ ಎಂದು ಅವರು ಹೇಳಿದ್ದಾರೆ.

ಬಿಜಾಪುರ: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಬುಧವಾರ ನಡೆದ ಎನ್‌ಕೌಂಟರ್‌ನಲ್ಲಿ ಐವರು ನಕ್ಸಲರನ್ನು ಹತ್ಯೆ ಮಾಡಲಾಗಿದೆ. ಗುಂಡಿನ ಕಾಳಗದಲ್ಲಿ ಜಿಲ್ಲಾ ಮೀಸಲು ಪೊಲೀಸ್ ಪಡೆ(ಡಿಆರ್‌ಜಿ)ಯ ಒಬ್ಬ ಜವಾನ್ ಹುತಾತ್ಮರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುಂಡಿನ ಚಕಮಕಿಯಲ್ಲಿ ಮತ್ತೊಬ್ಬ ಜವಾನ್ ಗಾಯಗೊಂಡಿದ್ದು, ಕಾರ್ಯಾಚರಣೆ ಇನ್ನೂ ಮುಂದುವರೆದಿದೆ ಎಂದು ಅವರು ಹೇಳಿದ್ದಾರೆ.

ದಂತೇವಾಡ ಜಿಲ್ಲೆಯ ಪಕ್ಕದಲ್ಲಿರುವ ಗಂಗಲೂರು ಪ್ರದೇಶದ ಕಾಡಿನಲ್ಲಿ ಭದ್ರತಾ ಸಿಬ್ಬಂದಿಯ ಜಂಟಿ ತಂಡ ನಕ್ಸಲ್ ವಿರೋಧಿ ಕಾರ್ಯಾಚರಣೆಗೆ ಹೊರಟಿದ್ದಾಗ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜ್ಯ ಪೊಲೀಸರ ಎರಡೂ ಘಟಕಗಳಾದ ಡಿಆರ್‌ಜಿ ಮತ್ತು ವಿಶೇಷ ಕಾರ್ಯಪಡೆ ಹಾಗೂ ಕೋಬ್ರಾ(ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್) ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಇಲ್ಲಿಯವರೆಗೆ, ಸ್ಥಳದಿಂದ ಐದು ನಕ್ಸಲರ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

"ಕಾರ್ಯಾಚರಣೆಯಲ್ಲಿ ಒಬ್ಬ ಡಿಆರ್‌ಜಿ ಸಿಬ್ಬಂದಿ ಹುತಾತ್ಮರಾಗಿದ್ದು, ಮತ್ತೊಬ್ಬ ಜವಾನ್ ಗಾಯಗೊಂಡಿದ್ದಾರೆ. ಗಾಯಗೊಂಡ ಜವಾನ್‌ನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ" ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಂಚಾರ್ ಸಾಥಿಯಿಂದ Snooping ಅಸಾಧ್ಯ; ಪ್ರೀ-ಇನ್ಸ್ಟಾಲ್ ಕಡ್ಡಾಯ ಆದೇಶ ವಾಪಸ್: ಸಚಿವ ಸಿಂಧಿಯಾ

ದರ್ಶನ್ ಪ್ರಕರಣ: ಡಿ. 17ರಿಂದ ಸಾಕ್ಷ್ಯ ವಿಚಾರಣೆಗೆ ಕೋರ್ಟ್ ನಿರ್ಧಾರ; ರೇಣುಕಾಸ್ವಾಮಿ ತಂದೆ, ತಾಯಿಗೂ ಸಮನ್ಸ್

Anantapur: ಶಾಸಕನ ರಾಸಲೀಲೆ Video ವೈರಲ್, ಶಿಕ್ಷಕಿ ಜೊತೆಗಿನ ಖಾಸಗಿ ಕ್ಷಣಗಳ ವಾಟ್ಸಪ್ ನಲ್ಲಿ ಹರಿಬಿಟ್ಟ MLA!

ದೆಹಲಿಯಲ್ಲಿ ಮಿತಿ ಮೀರಿದ ಮಾಲಿನ್ಯ: ಸಂಸತ್ ಅಧಿವೇಶನ ಮುಂದುವರೆಸುವ ಬಗ್ಗೆ ಮರುಪರಿಶೀಲಿಸಿ; DMK ಸಂಸದ

ಯಾವುದೇ ಕಾರಣಕ್ಕೂ ಅಂತಹವರನ್ನು ಬಿಡಬಾರದು: 2 ಸಿನಿಮಾಗಳ ಹೀನಾಯ ಸೋಲು ಬೆನ್ನಲ್ಲೇ ರಶ್ಮಿಕಾ ಮಂದಣ್ಣ ಆಕ್ರೋಶ

SCROLL FOR NEXT