ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ವಿಮಾನದಲ್ಲಿ ಮಹಿಳಾ ಸಿಬ್ಬಂದಿಗೆ ಅನುಚಿತವಾಗಿ ಸ್ಪರ್ಶಿಸಿದ ವೃದ್ಧ ಪ್ರಯಾಣಿಕನ ವಿರುದ್ಧ ಕೇಸ್ ದಾಖಲು!

ವಿಮಾನ ಇಲ್ಲಿಗೆ ಬಂದ ನಂತರ, ಕ್ಯಾಬಿನ್ ಸಿಬ್ಬಂದಿ ಡಿಸೆಂಬರ್ 13 ರಂದು ಸುಮಾರು 60 ವರ್ಷ ವಯಸ್ಸಿನ ಪ್ರಯಾಣಿಕನ ವಿರುದ್ಧ ಆರ್‌ಜಿಐ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸಾಂದರ್ಭಿಕ ಚಿತ್ರ
Lingaraj Badiger
Updated On : 16 Dec 2025, 4:21 pm

ಹೈದರಾಬಾದ್: ಸೌದಿ ಅರೇಬಿಯಾದ ದಮ್ಮಾಮ್ ನಿಂದ ಹೈದರಾಬಾದ್ ಗೆ ಆಗಮಿಸುತ್ತಿದ್ದ ವಿಮಾನದಲ್ಲಿ ಮಹಿಳಾ ಸಿಬ್ಬಂದಿಯೊಬ್ಬರಿಗೆ ಅನುಚಿತವಾಗಿ ಸ್ಪರ್ಶಿಸಿದ ಆರೋಪದ ಮೇಲೆ ವೃದ್ಧ ಪ್ರಯಾಣಿಕರೊಬ್ಬರ ವಿರುದ್ಧ ಹೈದರಾಬಾದ್ ನಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ವಿಮಾನ ಇಲ್ಲಿಗೆ ಬಂದ ನಂತರ, ಕ್ಯಾಬಿನ್ ಸಿಬ್ಬಂದಿ ಡಿಸೆಂಬರ್ 13 ರಂದು ಸುಮಾರು 60 ವರ್ಷ ವಯಸ್ಸಿನ ಪ್ರಯಾಣಿಕನ ವಿರುದ್ಧ ಆರ್‌ಜಿಐ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಆದಾಗ್ಯೂ, ಪ್ರಯಾಣಿಕ ತಾನು ಉದ್ದೇಶಪೂರ್ವಕವಾಗಿ ಈ ದುಷ್ಕೃತ್ಯವನ್ನು ಎಸಗಿಲ್ಲ. ಆಕಸ್ಮಿಕವಾಗಿ ಟಚ್ ಆಗಿದೆ ಎಂದು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

Advertisement

Also Read

ದೆಹಲಿಯಲ್ಲಿ ಕಡಿಮೆ ಗೋಚರತೆ; 120ಕ್ಕೂ ಹೆಚ್ಚು ವಿಮಾನ ರದ್ದು

ಮಹಿಳಾ ಸಿಬ್ಬಂದಿಯ ದೂರಿನ ಆಧಾರದ ಮೇಲೆ, ಬಿಎನ್‌ಎಸ್‌ನ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ಆ ಪ್ರಯಾಣಿಕರಿಗೆ ನೋಟಿಸ್ ನೀಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement