ಪ್ರಧಾನಿ ಮೋದಿ 
ದೇಶ

'ರಾಷ್ಟ್ರೀಯ ಪ್ರೇರಣಾ ಸ್ಥಳ' ಲೋಕಾರ್ಪಣೆ: ಭಾರತದಲ್ಲಿ ಟೆಲಿಕಾಂ ಕ್ರಾಂತಿಯ ವೇಗ ಹೆಚ್ಚಿಸಿದ ಶ್ರೇಯಸ್ಸು ಅಟಲ್ ಜಿಗೆ ಸಲ್ಲುತ್ತದೆ- ಪ್ರಧಾನಿ ಮೋದಿ

ಅತ್ಯಾಧುನಿಕ ವಸ್ತುಸಂಗ್ರಹಾಲಯವನ್ನು ಕಮಲದ ಆಕಾರದ ರಚನೆಯಲ್ಲಿ ವಿನ್ಯಾಸಗೊಳಿಸಲಾಗಿದ್ದು, 98,000 ಚದರ ಅಡಿ ಪ್ರದೇಶದಲ್ಲಿದೆ. ದೇಶ-ನಿರ್ಮಾಣಕ್ಕೆ ಈ ನಾಯಕರ ಕೊಡುಗೆಗಳನ್ನು ತಿಳಿಯಲು ಪ್ರವಾಸಿಗರಿಗೆ ಅವಕಾಶ ನೀಡುತ್ತದೆ.

ಲಖನೌ: ಭಾರತ ರತ್ನ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 101ನೇ ಜನ್ಮ ದಿನವಾದ ಇಂದು ಅವರ ಜೀವನ ಮತ್ತು ಆದರ್ಶಗಳನ್ನು ಬಿಂಬಿಸುವ 'ರಾಷ್ಟ್ರೀಯ ಪ್ರೇರಣಾ ಸ್ಥಳ' ವನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ಲೋಕಾರ್ಪಣೆಗೊಳಿಸಿದರು. ವಿಸ್ತಾರವಾದ ಸಂಕೀರ್ಣವು ವಾಜಪೇಯಿ ಅವರೊಂದಿಗೆ ಬಿಜೆಪಿಯ ಸಂಸ್ಥಾಪಕರಾದ ಶ್ಯಾಮ ಪ್ರಸಾದ್ ಮುಖರ್ಜಿ ಮತ್ತು ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ 65 ಅಡಿ ಎತ್ತರದ ಕಂಚಿನ ಪ್ರತಿಮೆಗಳನ್ನು ಒಳಗೊಂಡಿದೆ.

ಅತ್ಯಾಧುನಿಕ ವಸ್ತುಸಂಗ್ರಹಾಲಯವನ್ನು ಕಮಲದ ಆಕಾರದ ರಚನೆಯಲ್ಲಿ ವಿನ್ಯಾಸಗೊಳಿಸಲಾಗಿದ್ದು, 98,000 ಚದರ ಅಡಿ ಪ್ರದೇಶದಲ್ಲಿದೆ. ದೇಶ-ನಿರ್ಮಾಣಕ್ಕೆ ಈ ನಾಯಕರ ಕೊಡುಗೆಗಳನ್ನು ತಿಳಿಯಲು ಪ್ರವಾಸಿಗರಿಗೆ ಅವಕಾಶ ನೀಡುತ್ತದೆ.

ರಾಷ್ಟ್ರೀಯ ಪ್ರೇರಣಾ ಸ್ಥಳ ಉದ್ಘಾಟನೆ ನಂತರ ಇತರ ನಾಯಕರೊಂದಿಗೆ ಸಂಕೀರ್ಣದೊಳಗೆ ಇರುವ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ, ವಾಜಪೇಯಿ, ಶ್ಯಾಮ ಪ್ರಸಾದ್ ಮುಖರ್ಜಿ ಮತ್ತು ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜೀವನ ಮತ್ತು ಕೊಡುಗೆಗಳನ್ನು ಬಿಂಬಿಸುವ ಪ್ರದರ್ಶನವನ್ನು ವೀಕ್ಷಿಸಿದರು.

230 ಕೋಟಿ ವೆಚ್ಚದಲ್ಲಿ ನಿರ್ಮಾಣ: ರಾಷ್ಟ್ರೀಯ ಪ್ರೇರಣಾ ಸ್ಥಳವನ್ನು 230 ಕೋಟಿ ಅಂದಾಜು ವೆಚ್ಚದಲ್ಲಿ 65 ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿದೆ. ಈ ಸ್ಮಾರಕ ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಪೂರ್ತಿದಾಯಕ ಸಂಕೀರ್ಣವಾಗಿದ್ದು, ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗೆ ಪ್ರೇರಣೆಯ ಸ್ಥಳ ಎನ್ನಲಾಗಿದೆ. ಇದು ಭಾರತದ ರಾಜಕೀಯ ಚಿಂತನೆ ಮತ್ತು ಸಾರ್ವಜನಿಕ ಜೀವನವನ್ನು ರೂಪಿಸುವಲ್ಲಿ ವಾಜಪೇಯಿ, ಮುಖರ್ಜಿ ಮತ್ತು ಉಪಾಧ್ಯಾಯರ ಪ್ರಮುಖ ಪಾತ್ರವನ್ನು ಪ್ರತಿಬಿಂಬಿಸುತ್ತದೆ.

ಪ್ರತಿಮೆಗಳು ರಾಷ್ಟ್ರಕ್ಕೆ ಸ್ಪೂರ್ತಿದಾಯಕ: ನಂತರ ಜನತೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಪ್ರೇರಣಾ ಸ್ಥಳ ಭಾರತವನ್ನು ಸ್ವಾಭಿಮಾನ, ಏಕತೆ ಮತ್ತು ಸೇವೆಯ ಹಾದಿಯಲ್ಲಿ ಮುನ್ನಡೆಸುವ ದೃಷ್ಟಿಯನ್ನು ಪ್ರತಿನಿಧಿಸುತ್ತದೆ. ಡಾ ಶ್ಯಾಮ ಪ್ರಸಾದ್ ಮುಖರ್ಜಿ, ಪಂಡಿತ್ ದೀನದಯಾಳ್ ಉಪಾಧ್ಯಾಯ ಮತ್ತು ಅಟಲ್ ಬಿಹಾರಿ ಅವರ ಅತ್ಯುನ್ನತ ಪ್ರತಿಮೆಗಳು ರಾಷ್ಟ್ರಕ್ಕೆ ಸ್ಪೂರ್ತಿದಾಯಕವಾಗಿವೆ.ನಮ್ಮ ಪ್ರತಿಯೊಂದು ಹೆಜ್ಜೆ, ಪ್ರತಿ ದಾಪುಗಾಲು, ಪ್ರತಿ ಪ್ರಯತ್ನವೂ ರಾಷ್ಟ್ರ ನಿರ್ಮಾಣಕ್ಕೆ ಸಮರ್ಪಿತವಾಗಿರಬೇಕು ಎಂಬ ಸಂದೇಶವನ್ನು ಸ್ಪೂರ್ತಿ ತಾಣವು ನಮಗೆ ನೀಡುತ್ತದೆ. ಈ ಆಧುನಿಕ ಸ್ಪೂರ್ತಿಯ ತಾಣಕ್ಕೆ ನಾನು ಲಕ್ನೋ, ಉತ್ತರ ಪ್ರದೇಶ ಮತ್ತು ಇಡೀ ದೇಶವನ್ನು ಅಭಿನಂದಿಸುತ್ತೇನೆ ಎಂದರು.

ಈ ಪ್ರೇರಣಾ ಸ್ಥಳವನ್ನು ನಿರ್ಮಿಸಿರುವ 30 ಎಕರೆಗೂ ಹೆಚ್ಚಿನ ಜಾಗ ಹಲವು ದಶಕಗಳಿಂದ ಕಸದಿಂದ ತುಂಬಿತ್ತು. ಕಳೆದ ಮೂರು ವರ್ಷಗಳಲ್ಲಿ ಇದನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ. ಈ ಯೋಜನೆಗೆ ಸಂಬಂಧಿಸಿದ ಎಲ್ಲಾ ಕಾರ್ಮಿಕರು, ಕುಶಲಕರ್ಮಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಭಾರತದಲ್ಲಿ ಎರಡು ಸಂವಿಧಾನಗಳು, ಎರಡು ಧ್ವಜಗಳು ಮತ್ತು ಇಬ್ಬರು ಮುಖ್ಯಸ್ಥರನ್ನು ಡಾ.ಶ್ಯಾಮ್ ಪ್ರಶಾದ್ ಮುಖರ್ಜಿ ತಿರಸ್ಕರಿಸಿದ್ದರು. ಸ್ವಾತಂತ್ರ ನಂತರವೂ ಜಮ್ಮು ಮತ್ತು ಕಾಶ್ಮೀರದಲ್ಲಿ ಈ ವ್ಯವಸ್ಥೆ ಇದದ್ದು, ಭಾರತದ ಸಮಗ್ರತೆಗೆ ದೊಡ್ಡ ಸವಾಲಾಗಿತ್ತು. ಬಿಜೆಪಿ ಸರ್ಕಾರ 370 ನೇ ವಿಧಿಯ ಗೋಡೆಯನ್ನು ಕಿತ್ತೊಗೆದಿದೆ ಎಂದರು.

ಭಾರತದಲ್ಲಿ ತಯಾರಿಸಿದ ವಸ್ತುಗಳು ಪ್ರಪಂಚದ ಮೂಲೆ ಮೂಲೆಗಳನ್ನು ತಲುಪುತ್ತಿವೆ. ಉತ್ತರ ಪ್ರದೇಶದಲ್ಲಿಯೂ ಇಂತಹ ಒಂದು ಜಿಲ್ಲೆ, ಒಂದು ಉತ್ಪನ್ನ ಅಭಿಯಾನ ನಡೆಯುತ್ತಿದೆ. ಸಣ್ಣ ಕೈಗಾರಿಕೆಗಳು ಮತ್ತು ಸಣ್ಣ ಘಟಕಗಳ ಸಾಮರ್ಥ್ಯ ಹೆಚ್ಚುತ್ತಿದೆ. ಉತ್ತರ ಪ್ರದೇಶದಲ್ಲಿ ಬೃಹತ್ ರಕ್ಷಣಾ ಕಾರಿಡಾರ್ ನಿರ್ಮಾಣವಾಗುತ್ತಿದೆ. ಆಪರೇಷನ್ ಸಿಂಧೂರ್ ಸಮಯದಲ್ಲಿ ಜಗತ್ತು ಕಂಡ ಪರಾಕ್ರಮದ ಬ್ರಹ್ಮೋಸ್ ಕ್ಷಿಪಣಿಯನ್ನು ಈಗ ಲಕ್ನೋದಲ್ಲಿ ತಯಾರಿಸಲಾಗುತ್ತಿದೆ. ಉತ್ತರ ಪ್ರದೇಶದ ರಕ್ಷಣಾ ಕಾರಿಡಾರ್ ರಕ್ಷಣಾ ಉತ್ಪಾದನೆಗೆ ಜಾಗತಿಕವಾಗಿ ಹೆಸರುವಾಸಿಯಾಗುವ ದಿನ ದೂರವಿಲ್ಲ. ದಶಕಗಳ ಹಿಂದೆ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರು ಅಂತ್ಯೋದಯ ಕನಸು ಕಂಡಿದ್ದರು. ಕೊನೆಯ ಸಾಲಿನಲ್ಲಿ ನಿಂತಿರುವ ವ್ಯಕ್ತಿಯ ಮುಖದ ನಗುವಿನಿಂದಲೇ ಭಾರತದ ಪ್ರಗತಿ ಇದೆ ಎನ್ನುತ್ತಿದ್ದರು. ದೀನದಯಾಳ್ ಜಿಯವರ ಕನಸನ್ನು ಸಂಕಲ್ಪವನ್ನಾಗಿಸಿಕೊಂಡಿರುವುದಾಗಿ ತಿಳಿಸಿದರು.

ಇಂದು ಡಿಜಿಟಲ್ ಗುರುತಿನ ಬಗ್ಗೆ ತುಂಬಾ ಚರ್ಚೆ ನಡೆಯುತ್ತಿದೆ. ಇದಕ್ಕೆ ಬುನಾದಿ ಹಾಕಿದ್ದು ಅಟಲ್ ಜಿ ಅವರ ಸರ್ಕಾರ. ಅವರ ಕಾಲದಲ್ಲಿ ಆರಂಭವಾದ ವಿಶೇಷ ಕಾರ್ಡ್‌ನ ಕೆಲಸ ಈಗ ಆಧಾರ್ ಎಂದು ವಿಶ್ವಪ್ರಸಿದ್ಧವಾಗಿದೆ. ಭಾರತದಲ್ಲಿ ಟೆಲಿಕಾಂ ಕ್ರಾಂತಿಯ ವೇಗವನ್ನು ಹೆಚ್ಚಿಸಿದ ಶ್ರೇಯಸ್ಸು ಅಟಲ್ ಜಿ ಅವರಿಗೆ ಸಲ್ಲುತ್ತದೆ. ಅವರ ಸರ್ಕಾರ ರೂಪಿಸಿದ ಟೆಲಿಕಾಂ ನೀತಿಯು ಪ್ರತಿ ಮನೆಗೆ ಫೋನ್ ಮತ್ತು ಇಂಟರ್ನೆಟ್ ನ್ನು ಸುಲಭವವಾಗಿ ತರಲು ಸಾಧ್ಯವಾಯಿತು. ಇಂದು ಭಾರತವು ವಿಶ್ವದಲ್ಲಿ ಅತಿ ಹೆಚ್ಚು ಮೊಬೈಲ್ ಮತ್ತು ಇಂಟರ್ನೆಟ್ ಬಳಕೆದಾರರನ್ನು ಹೊಂದಿರುವ ದೇಶಗಳಲ್ಲಿ ಒಂದಾಗಿದೆ ಎಂದು ತಿಳಿಸಿದರು.

ಭಾರತ ಮಾತೆಯ ಸೇವೆ ಮಾಡುತ್ತಿರುವ ನಮ್ಮ ಸರ್ಕಾರವು ಪ್ರತಿ ಮಗುವಿಗೆ, ಪ್ರತಿಯೊಬ್ಬರ ಕೊಡುಗೆಗೆ ಗೌರವವನ್ನು ನೀಡುತ್ತಿದೆ. ಇಂದು ದೆಹಲಿಯ ಕರ್ತವ್ಯ ಪಥದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆ ಇದೆ. ಬಾಬಾ ಅಂಬೇಡ್ಕರ್ ಅವರ ಪ್ರತಿಮೆಯನ್ನು ಹೇಗೆ ನಾಶಪಡಿಸಲಾಯಿತು ಎಂಬುದನ್ನು ಯಾರೂ ಮರೆಯುವಂತಿಲ್ಲ. ದೆಹಲಿಯಲ್ಲಿ ಕಾಂಗ್ರೆಸ್‌ ಕುಟುಂಬದವರು ಈ ಪಾಪವನ್ನು ಮಾಡಿದರು ಮತ್ತು ಯುಪಿಯಲ್ಲಿ ಸಮಾಜವಾದಿ ಪಕ್ಷದವರು ಸಹ ಅದೇ ಪಾಪವನ್ನು ಮಾಡಿದ್ದಾರೆ. ಆದರೆ ಬಾಬಾ ಸಾಹೇಬರ ಪ್ರತಿಮೆ ನಾಶವಾಗಲು ಬಿಜೆಪಿ ಬಿಡಲಿಲ್ಲ. ಇಂದು ದೆಹಲಿಯಿಂದ ಲಂಡನ್ ವರೆಗೆ ಬಾಬಾ ಅಂಬೇಡ್ಕರರ ಪಂಚ ತೀರ್ಥ ಸ್ಮಾರಕವನ್ನು ಕೊಂಡಾಡುತ್ತಿದೆ ಎಂದು ಹೇಳಿದರು.

ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ನಮ್ಮ ದೇಶವನ್ನು ಒಗ್ಗೂಡಿಸಿದರು, ಆದರೆ ಸ್ವಾತಂತ್ರ್ಯದ ನಂತರ ಅವರ ಕೆಲಸ ಮತ್ತು ಅವರ ಘನತೆಯನ್ನು ಕುಗ್ಗಿಸಲು ಪ್ರಯತ್ನಿಸಲಾಯಿತು. ಸರ್ದಾರ್ ಪಟೇಲ್ ಅವರಿಗೆ ಸಲ್ಲಬೇಕಾದ ಗೌರವವನ್ನು ಬಿಜೆಪಿ ನೀಡಿದೆ. ಬಿಜೆಪಿ ಸರ್ದಾರ್ ಪಟೇಲ್ ಅವರನ್ನು ವಿಶ್ವದ ಅತಿ ಎತ್ತರದ ಪ್ರತಿಮೆಯನ್ನಾಗಿ ಮಾಡಿದೆ ಎಂದು ಪ್ರಧಾನಿ ಮೋದಿ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿಯ ಹತ್ಯೆ: ವರದಿ

ಜನರಿಂದ 'ಚಪ್ಪಲಿ'ಯಲ್ಲಿ ಹೊಡೆಸ್ತೇನೆ: ಮಾಗಡಿ ತಹಶೀಲ್ದಾರ್ ಗೆ ಕಾಂಗ್ರೆಸ್ ಶಾಸಕ H.C.ಬಾಲಕೃಷ್ಣ ಆವಾಜ್! Video ವೈರಲ್

'ಅಪ್ಪಾ ನೋವು ಸಹಿಸಲಾಗುತ್ತಿಲ್ಲ..': 8 ತಾಸು ಕಾದರೂ ಸಿಗದ ಚಿಕಿತ್ಸೆ, ಕೆನಡಾ ಆಸ್ಪತ್ರೆಯಲ್ಲಿ ಭಾರತ ಮೂಲದ ವ್ಯಕ್ತಿ ಸಾವು!

ಡಿಕೆಶಿ-ಖರ್ಗೆ ಭೇಟಿ: ಮತ್ತೆ ಚಾಲ್ತಿಗೆ ಬಂದ ಸಿಎಂ ಬದಲಾವಣೆ ಊಹಾಪೋಹ, ಸಿಡಬ್ಲ್ಯುಸಿ ಸಭೆ ಕುರಿತು ಮಹತ್ವದ ಮಾತು! Video

'ನಿಧಿ ಅಗರ್ವಾಲ್ ಧರಿಸಿದ್ದ ಉಡುಗೆ ಜನರ ಕೆರಳಿಸಿತ್ತು..': ತೆಲುಗು ನಟ ಶಿವಾಜಿ ಮತ್ತೊಂದು ವಿವಾದ! ನಟಿ ಹೇಳಿದ್ದೇನು? Video

SCROLL FOR NEXT