ಅಯೋಧ್ಯೆ: ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಇದೇ ಮೊದಲ ಬಾರಿಗೆ ಅಯೋಧ್ಯೆಯಲ್ಲಿರುವ ರಾಮ ಮಂದಿರಕ್ಕೆ ಭೇಟಿ ನೀಡಿದರು.
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ರಾಮ ಮಂದಿರಕ್ಕೆ ಭೇಟಿ ನೀಡಿದ ಚಂದ್ರಬಾಬು ನಾಯ್ಡು ಬಾಲರಾಮ ಮೂರ್ತಿಯ ದರ್ಶನ ಪಡೆದರು.
ನಾಯ್ಡು ಹೈದರಾಬಾದ್‌ನಿಂದ ಹೊರಟು ಮೂರು ಗಂಟೆಗಳ ಕಾಲ ದೇವಾಲಯದಲ್ಲಿ ಕಳೆದರು. ಕಳೆದ ವರ್ಷದ ದೇವಾಲಯದ ಪವಿತ್ರೀಕರಣ ಸಮಾರಂಭದಲ್ಲಿ ಭಾಗವಹಿಸಿದ ನಂತರ ನಾಯ್ಡು ಈ ಭೇಟಿ ಮಾಡಿದ್ದಾರೆ.
ಶ್ರೀರಾಮಮೂರ್ತಿಯ ದರ್ಶನ ಮಾಡಿ ಪ್ರಾರ್ಥನೆ ಸಲ್ಲಿಸುವ ಸಲುವಾಗಿ ಚಂದ್ರಬಾಬು ನಾಯ್ಡು ಅವರು ಅಯೋಧ್ಯೆಗೆ ತೆರಳಿದ್ದಾರೆ ಎನ್ನಲಾಗಿದೆ. ಕಳೆದ ವರ್ಷದ ಪವಿತ್ರೀಕರಣ ಸಮಾರಂಭದಲ್ಲಿ ಭಾಗವಹಿಸಿದ ನಂತರ, ನಾಯ್ಡು ಅವರು ಈ ಸ್ಥಳಕ್ಕೆ ಎರಡನೇ ಬಾರಿಗೆ ಭೇಟಿ ನೀಡಿದ್ದಾರೆ.
ಚಂದ್ರಬಾಬು ನಾಯ್ಡು ಅವರನ್ನು ಉತ್ತರ ಪ್ರದೇಶದ ಅಧಿಕಾರಿಗಳು, ರಾಮ ಮಂದಿರದ ಆಡಳಿತಾಧಿಕಾರಿಗಳು ಮತ್ತು ಸಿಬ್ಬಂದಿ ಸ್ವಾಗತಿಸಿದರು. ನಂತರ, ಸಿಎಂ ಚಂದ್ರಬಾಬು ಅಯೋಧ್ಯೆ ರಾಮ ಮಂದಿರದ ಸುತ್ತಮುತ್ತಲಿನ ಪ್ರದೇಶಗಳನ್ನು ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ, ದೇವಾಲಯದ ಆಡಳಿತಾಧಿಕಾರಿಗಳು ಅಯೋಧ್ಯೆ ರಾಮ ಮಂದಿರ ನಿರ್ಮಾಣದ ಬಗ್ಗೆ ಚಂದ್ರಬಾಬು ಅವರಿಗೆ ಮಾಹಿತಿ ನೀಡಿದರು. ನಂತರ, ಸಿಎಂ ಚಂದ್ರಬಾಬು ನಾಯ್ಡು ಅಲ್ಲಿಂದ ನೇರವಾಗಿ ವಿಜಯವಾಡಕ್ಕೆ ತೆರಳಿದರು.
ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡಿದ ಬಗ್ಗೆ ಸಿಎಂ ಚಂದ್ರಬಾಬು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
"ಇಂದು, ಅಯೋಧ್ಯೆಯಲ್ಲಿರುವ ದೈವಿಕ ಮತ್ತು ಭವ್ಯವಾದ ಶ್ರೀ ರಾಮ ಜನ್ಮಭೂಮಿ ದೇವಾಲಯದ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸುವ ಸೌಭಾಗ್ಯ ನನಗೆ ಸಿಕ್ಕಿತು. ಮತ್ತೊಮ್ಮೆ ಇಲ್ಲಿಗೆ ಬಂದಿರುವುದು ಶಾಂತಿಯುತ ಮತ್ತು ಆಧ್ಯಾತ್ಮಿಕವಾಗಿ ಉತ್ತೇಜಕ ಅನುಭವ. ಶ್ರೀ ರಾಮನ ಮೌಲ್ಯಗಳು ಮತ್ತು ಆದರ್ಶಗಳು ನಮಗೆಲ್ಲರಿಗೂ ಶಾಶ್ವತ ಪಾಠಗಳಾಗಿವೆ. ಅವರು ಯಾವಾಗಲೂ ನಮಗೆ ಮಾರ್ಗದರ್ಶನ ಮತ್ತು ಸ್ಫೂರ್ತಿ ನೀಡಲಿ ಎಂದು ನಾನು ಬಯಸುತ್ತೇನೆ' ಎಂದು ಸಿಎಂ ಚಂದ್ರಬಾಬು ಹೇಳಿದರು.
ದಕ್ಷಿಣ ಭಾರತದ ಮೊದಲ ಸಿಎಂ
ಇನ್ನು ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡಿ ಶ್ರೀರಾಮನ ದರ್ಶನ ಪಡೆದ ದಕ್ಷಿಣ ಭಾರತದ ಮೊದಲ ಸಿಎಂ ಖ್ಯಾತಿಗೂ ಸಿಎಂ ಚಂದ್ರಬಾಬು ನಾಯ್ಡು ಪಾತ್ರರಾಗಿದ್ದಾರೆ. ಈ ಹಿಂದೆ ಅಂದರೆ ಕಳೆದ ವರ್ಷ ಚಂದ್ರಬಾಬು ನಾಯ್ಡು ಅವರು ಅಯೋಧ್ಯೆ ರಾಮಮಂದಿರಕ್ಕೆ ಹೋಗಿ ರಾಮಲಲ್ಲಾ ವಿಗ್ರಹಕ್ಕೆ ಪೂಜೆ ಸಲ್ಲಿಸಿದ್ದರು. ಅದಾದ ನಂತರ ಇಂದು ಚಂದ್ರಬಾಬು ಮತ್ತೆ ಅಯೋಧ್ಯೆಗೆ ಹೋಗಿ ಬಲರಾಮನ ದರ್ಶನ ಪಡೆದರು.