ಅಟಲ್ ಗ್ರಂಥಾಲಯ ಉದ್ಘಾಟನೆ 
ದೇಶ

ಒಂದೇ ದಿನ ಎರಡೆರಡು ಬಾರಿ ಅಟಲ್ ಗ್ರಂಥಾಲಯ ಉದ್ಘಾಟಿಸಿದ ಬಿಜೆಪಿ ನಾಯಕರು!

ಸೆಕ್ಟರ್ 12ರ ಟೌನ್ ಪಾರ್ಕ್‌ನಲ್ಲಿ ₹3.85 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಅಟಲ್ ಗ್ರಂಥಾಲಯದ ಉದ್ಘಾಟನೆ ಕುರಿತು ಜಿಲ್ಲಾ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅಧಿಕೃತ ಆಹ್ವಾನ ಪತ್ರಿಕೆಯನ್ನು ನೀಡಿತ್ತು.

ಗುರುಗ್ರಾಮ್: ಹರಿಯಾಣದ ಫರಿದಾಬಾದ್‌ನ ಸೆಕ್ಟರ್ 12ರಲ್ಲಿ ನಿರ್ಮಿಸಿರುವ ಅಟಲ್ ಗ್ರಂಥಾಲಯವನ್ನು ಕೇಂದ್ರ ಸಚಿವ ಕೃಷ್ಣಪಾಲ್ ಗುರ್ಜರ್ ಮತ್ತು ರಾಜ್ಯದ ಕಂದಾಯ ಸಚಿವ ವಿಫುಲ್‌ ಗೋಯಲ್ ಅವರು ಒಂದೇ ದಿನ ಬೇರೆ ಬೇರೆ ಸಮಯದಲ್ಲಿ ಉದ್ಘಾಟಿಸುವ ಮೂಲಕ ಚರ್ಚೆಗೆ ಗ್ರಾಸವಾಗಿದ್ದಾರೆ.

ಸೆಕ್ಟರ್ 12ರ ಟೌನ್ ಪಾರ್ಕ್‌ನಲ್ಲಿ 3.85 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಅಟಲ್ ಗ್ರಂಥಾಲಯದ ಉದ್ಘಾಟನೆ ಕುರಿತು ಜಿಲ್ಲಾ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅಧಿಕೃತ ಆಹ್ವಾನ ಪತ್ರಿಕೆಯನ್ನು ನೀಡಿತ್ತು.

ಆಹ್ವಾನದ ಪ್ರಕಾರ, ರಾಜ್ಯಸಭಾ ಸದಸ್ಯ ಸುರೇಂದ್ರ ಸಿಂಗ್ ನಗರ್‌, ಹರಿಯಾಣ ಕೈಗಾರಿಕಾ ಸಚಿವ ರಾವ್ ನರವೀರ್, ರಾಜ್ಯ ಕಂದಾಯ ಸಚಿವ ವಿಫುಲ್‌ ಗೋಯಲ್ ಮತ್ತು ಮೇಯರ್ ಪ್ರವೀಣ್ ಜೋಶಿ ಅವರ ಸಮ್ಮುಖದಲ್ಲಿ ಕಟ್ಟಡವನ್ನು ಕೇಂದ್ರ ಸಚಿವ ಗುರ್ಜರ್ ಉದ್ಘಾಟಿಸಬೇಕಿತ್ತು. ಅವರ ಹೆಸರುಗಳನ್ನು ಒಳಗೊಂಡ ಉದ್ಘಾಟನಾ ಫಲಕವನ್ನು ಸಹ ಸ್ಥಳದಲ್ಲಿ ಸ್ಥಾಪಿಸಲಾಗಿತ್ತು.

ಸುರೇಂದ್ರ ನಗರ್ ಅವರು ಭಾನುವಾರ ಪ್ರಧಾನಿ ಮೋದಿಯವರ ‘ಮನ್ ಕಿ ಬಾತ್’ ಕಾರ್ಯಕ್ರಮವನ್ನು ವೀಕ್ಷಿಸಿದ ಬಳಿಕ ವಿಫುಲ್‌ ಗೋಯಲ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದಾದ ಬಳಿಕ ಮಧ್ಯಾಹ್ನ 12.30ಕ್ಕೆ ಆಹಾರ,‌ ನಾಗರಿಕ ಸರಬರಾಜು ಖಾತೆ ಸಚಿವ ರಾಜೇಶ್ ನಗರ್ ಮತ್ತು ಮೇಯರ್ ಜೋಶಿ ಅವರೊಂದಿಗೆ ಉಭಯ ನಾಯಕರು ತೆರಳಿ ಗ್ರಂಥಾಲಯವನ್ನು ಉದ್ಘಾಟಿಸಿದ್ದರು. ಆದಾಗ್ಯೂ, ಮಧ್ಯಾಹ್ನ 2.30ಕ್ಕೆ ಗುರ್ಜರ್ ಅವರು ಇತರೆ ಶಾಸಕರೊಂದಿಗೆ ತೆರಳಿ ಗ್ರಂಥಾಲಯವನ್ನು ಮತ್ತೊಮ್ಮೆ ಉದ್ಘಾಟಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಷ್ಕರದ ಬಿಸಿ, ಝೊಮ್ಯಾಟೊ, ಸ್ವಿಗ್ಗಿ ಸಿಬ್ಬಂದಿಗೆ ಹೆಚ್ಚಿನ ವೇತನ: ಹೊಸ ವರ್ಷದ ಮುನ್ನಾದಿನ ಗಿಗ್ ಕಾರ್ಮಿಕರಿಗೆ ಸಿಹಿಸುದ್ದಿ!

ಢಾಕಾ: ಖಲೀದಾ ಜಿಯಾ ಅಂತ್ಯಕ್ರಿಯೆಯಲ್ಲಿ ಜೈಶಂಕರ್ ಭಾಗಿ; ಕುಟುಂಬ ಭೇಟಿಯಾಗಿ ಸಾಂತ್ವನ

ಹೊಸ ವರ್ಷಾಚರಣೆಗೆ ಬೆಂಗಳೂರು ಸಜ್ಜು: ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆಗಳಲ್ಲಿ ಬಿಗಿ ಬಂದೋಬಸ್ತ್, ಫ್ಲೈಓವರ್'ಗಳು ಬಂದ್

ಇಂದೋರ್‌: 'ಕಲುಷಿತ ನೀರು' ಕುಡಿದು ಇದುವರೆಗೆ ಏಳು ಜನ ಸಾವು; ಇಬ್ಬರು ಅಧಿಕಾರಿಗಳ ಅಮಾನತು

Nimesulide ban: ಪೇನ್ ಕಿಲ್ಲರ್ ನಿಮೆಸುಲೈಡ್ ತಯಾರಿಕೆ, ಮಾರಾಟ ನಿಷೇಧಿಸಿದ ಸರ್ಕಾರ

SCROLL FOR NEXT