ಆರೋಪಿ ಆಶಿಶ್ ಬಂಧನ TNIE
ದೇಶ

UP: ಅನೈತಿಕ ಸಂಬಂಧ ಮುಚ್ಚಿಡಲು ಬ್ಯಾಂಕ್‌‌ನಿಂದ 40,000 ರೂ ಸಾಲ; ಅತ್ತಿಗೆ ಗ್ಯಾಂಗ್‌ರೇಪ್‌, ಕೊಲೆ ಮಾಡಲು ಸುಪಾರಿ!

ಆಶಿಶ್ ತನ್ನ ಸಹಚರರಾದ ಶುಭಂ ಮತ್ತು ದೀಪಕ್ ಜೊತೆಗೂಡಿ ಮಹಿಳೆಯನ್ನು ಮನೆಯಿಂದ ಹೊರಗೆ ಕರೆದುಕೊಂಡು ಹೋಗಿ ನಿರ್ಜನ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿ, ನಂತರ ಕತ್ತು ಹಿಸುಕಿ ಕೊಂದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಜಫರ್‌ನಗರ: ಉತ್ತರ ಪ್ರದೇಶದ ಮುಜಫರ್‌ನಗರದಲ್ಲಿ 21 ವರ್ಷದ ಯುವತಿಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರಮುಖ ಆರೋಪಿ ರೂ. ಇಬ್ಬರು ಕೊಲೆಗಾರರನ್ನು ನೇಮಿಸಿಕೊಳ್ಳಲು ಮತ್ತು ಅಪರಾಧಕ್ಕೆ ಹಣಕಾಸು ಒದಗಿಸಲು ಆರೋಪಿಯನ್ನು ಆಶಿಶ್ ಬ್ಯಾಂಕಿನಿಂದ 40,000 ರೂ. ಸಾಲ ಪಡೆದಿದ್ದನು ಎಂಬ ವಿಷಯ ಬಹಿರಂಗಗೊಂಡಿದೆ. ಈ ಘಟನೆ ಜಿಲ್ಲೆಯ ಬುಧಾನಾ ಪ್ರದೇಶದ ಬವಾನಾ ಗ್ರಾಮದಲ್ಲಿ ನಡೆದಿದೆ.

ಆಶಿಶ್ ತನ್ನ ಸಹಚರರಾದ ಶುಭಂ ಮತ್ತು ದೀಪಕ್ ಜೊತೆಗೂಡಿ ಮಹಿಳೆಯನ್ನು ಮನೆಯಿಂದ ಹೊರಗೆ ಕರೆದುಕೊಂಡು ಹೋಗಿ ನಿರ್ಜನ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿ, ನಂತರ ಕತ್ತು ಹಿಸುಕಿ ಕೊಂದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾಕ್ಷ್ಯಗಳನ್ನು ನಾಶಮಾಡುವ ಪ್ರಯತ್ನದಲ್ಲಿ ಅವರು ಆಕೆಯ ದೇಹವನ್ನೂ ಸುಟ್ಟುಹಾಕಿದರು. ಸದ್ಯ ಆಶಿಶ್ ನನ್ನು ಪೊಲೀಸರು ಬಂಧಿಸಿದ್ದು, ಆತನ ಇಬ್ಬರು ಸಹಚರರು ತಲೆಮರೆಸಿಕೊಂಡಿದ್ದಾರೆ.

ಮುಜಫರ್ನಗರ ಎಸ್ಪಿ (ಗ್ರಾಮೀಣ) ಆದಿತ್ಯ ಬನ್ಸಾಲ್ ಮಾತನಾಡಿ, ಮಹಿಳೆಯನ್ನು ಕೊನೆಯ ಬಾರಿಗೆ ಜನವರಿ 21ರಂದು ತನ್ನ ಭಾಮೈದನ ಜೊತೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದುದ್ದನ್ನು ನೋಡಲಾಗಿತ್ತು. ಪ್ರಮುಖ ಆರೋಪಿಯು ಎರಡು ವರ್ಷಗಳಿಂದ ಅತ್ತಿಗೆ ಜೊತೆ ಅಕ್ರಮ ಸಂಬಂಧ ಹೊಂದಿದ್ದನು ಎಂದು ಬನ್ಸಾಲ್ ಹೇಳಿರುವುದಾಗಿ ಉಲ್ಲೇಖಿಸಲಾಗಿದೆ. ಆ ಮಹಿಳೆ ಕೆಲವು ವೈಯಕ್ತಿಕ ಫೋಟೋಗಳು ಮತ್ತು ವೀಡಿಯೊಗಳ ಮೂಲಕ ತನ್ನನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದಾಳೆ ಎಂದು ಆತ ಪೊಲೀಸರಿಗೆ ತಿಳಿಸಿದ್ದಾನೆ. ಬಹಿರಂಗಗೊಳ್ಳುವ ಭಯದಿಂದ, ಆಶಿಶ್ ತನ್ನ ಇಬ್ಬರು ಸ್ನೇಹಿತರೊಂದಿಗೆ ಪಿತೂರಿ ನಡೆಸಿದನು. ಕೊಲೆ ಮಾಡಿಸಲು ಬ್ಯಾಂಕಿನಿಂದ 40,000 ಸಾಲ ಪಡೆದಿದ್ದು ತನ್ನ ಸ್ನೇಹಿತರಿಗೆ ಮುಂಗಡವಾಗಿ 10,000 ರೂಪಾಯಿ ನೀಡಿದ್ದು ಕೊಲೆಯ ನಂತರ 20,000 ನೀಡುವುದಾಗಿ ಭರವಸೆ ನೀಡಿದ್ದನು.

ಆರೋಪಿಗಳು ಮೊದಲು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ನಂತರ ದುಪಟ್ಟಾದಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ನಂತರ ಸಾಕ್ಷ್ಯಗಳನ್ನು ನಾಶಮಾಡಲು ಆಕೆಯ ದೇಹವನ್ನು ಸುಟ್ಟು ಹಾಕಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಆಕೆಯ ಒಳ ಉಡುಪು ಹಾಗೆಯೇ ಇದ್ದು, ಇತರ ಬಟ್ಟೆಗಳು ಸುಟ್ಟು ಹೋಗಿರುವುದು ಲೈಂಗಿಕ ದೌರ್ಜನ್ಯದ ಅನುಮಾನವನ್ನು ಹುಟ್ಟುಹಾಕಿದೆ ಎಂದು ಎಸ್ ಪಿ ಹೇಳಿದರು. ಇದೇ ವೇಳೆ ಎರಡು ಕಾಂಡೋಮ್ ಪ್ಯಾಕೆಟ್‌ಗಳು ಸಹ ಪತ್ತೆಯಾಗಿವೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT