ಪ್ರಯಾಗ್ ರಾಜ್ ನಲ್ಲಿ ಮತ್ತೊಂದು ಅಗ್ನಿ ಅವಘಡ online desk
ದೇಶ

Mahakumbh 2025 ರಲ್ಲಿ ಸಾಲು ಸಾಲು ಸವಾಲು!: ಮತ್ತೊಂದು ಬೃಹತ್ ಅಗ್ನಿ ಅವಘಡ!

ಕುಂಭಮೇಳ ಪ್ರದೇಶದಲ್ಲಿ ಬೆಂಕಿ ಅವಘಡ ವರದಿಯಾಗುತ್ತಿರುವುದು ಇದು ಮೂರನೇ ಬಾರಿ.

ಮಹಾಕುಂಭ ನಗರ: ಮಹಾಕುಂಭಮೇಳ 2025 ಆರಂಭವಾದಾಗಿನಿಂದಲೂ ಘಟನಾ ಸ್ಥಳದಲ್ಲಿ ಒಂದಲ್ಲಾ ಒಂದು ಕಠಿಣ ಸವಾಲು ಎದುರಾಗುತ್ತಿದೆ.

ಫೆ.07 ರಂದು ಶುಕ್ರವಾರ ಸೆಕ್ಟರ್ 18 ರ ಶಂಕರಾಚಾರ್ಯ ಮಾರ್ಗ್ ನ ಇಸ್ಕಾನ್ ಶಿಬಿರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಒಂದು ಡಜನ್‌ಗೂ ಹೆಚ್ಚು ಶಿಬಿರಗಳಿಗೆ ಬೆಂಕಿ ಹರಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಾವುದೇ ಸಾವುನೋವುಗಳು ವರದಿಯಾಗಿಲ್ಲ.

ಮುಖ್ಯ ಅಗ್ನಿಶಾಮಕ ಅಧಿಕಾರಿ ಪ್ರಮೋದ್ ಶರ್ಮಾ, "ಸೆಕ್ಟರ್ 18 ರಲ್ಲಿರುವ ಇಸ್ಕಾನ್ ಶಿಬಿರದಲ್ಲಿ ಬೆಂಕಿ ಕಾಣಿಸಿಕೊಂಡ ಬಗ್ಗೆ ಮಾಹಿತಿ ಬಂದ ಕೂಡಲೇ, ಅಗ್ನಿಶಾಮಕ ದಳದವರನ್ನು ತಕ್ಷಣವೇ ಕಳುಹಿಸಲಾಯಿತು. ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಿಸಲಾಗಿದೆ" ಎಂದು ತಿಳಿಸಿದರು.

ಬೆಂಕಿ ಹೊತ್ತಿಕೊಳ್ಳಲು ಕಾರಣ ಮತ್ತು ಅದರಿಂದ ಉಂಟಾದ ಹಾನಿಯನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡಿಐಜಿ (ಮಹಾ ಕುಂಭ) ವೈಭವ್ ಕೃಷ್ಣ ಅವರು ಬೆಂಕಿಯ ಘಟನೆಯನ್ನು ಅಗ್ನಿಶಾಮಕ ದಳದವರು "ಸಂಪೂರ್ಣವಾಗಿ ನಿಯಂತ್ರಿಸಿದ್ದಾರೆ" ಎಂದು ಹೇಳಿದರು.

"ಇದರಲ್ಲಿ ಯಾರೂ ಗಾಯಗೊಂಡಿಲ್ಲ" ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕುಂಭಮೇಳ ಪ್ರದೇಶದಲ್ಲಿ ಬೆಂಕಿ ಅವಘಡ ವರದಿಯಾಗುತ್ತಿರುವುದು ಇದು ಮೂರನೇ ಬಾರಿ.

ಜನವರಿ 19 ರಂದು, ಮಹಾ ಕುಂಭಮೇಳ ಪ್ರದೇಶದ ಸೆಕ್ಟರ್ 19 ರಲ್ಲಿ ಸಿಲಿಂಡರ್ ಸ್ಫೋಟದಿಂದಾಗಿ ಭಾರಿ ಬೆಂಕಿ ಕಾಣಿಸಿಕೊಂಡಿತು. ಯಾವುದೇ ಸಾವುನೋವುಗಳು ವರದಿಯಾಗಿಲ್ಲವಾದರೂ, ಬೆಂಕಿಯ ಅವಘಡದಲ್ಲಿ ಒಂದು ಡಜನ್‌ಗೂ ಹೆಚ್ಚು ಶಿಬಿರಗಳು ಸುಟ್ಟುಹೋಗಿದ್ದವು.

ಜನವರಿ 25 ರಂದು, ಮಹಾ ಕುಂಭ ಮೇಳ ಪ್ರದೇಶದ ಸೆಕ್ಟರ್ 2 ರಲ್ಲಿ ಎರಡು ಕಾರುಗಳಿಗೆ ಬೆಂಕಿ ಹೊತ್ತಿಕೊಂಡಿತು, ಆದರೆ ಯಾವುದೇ ಸಾವುನೋವುಗಳು ವರದಿಯಾಗಿಲ್ಲ.

ಒಂದು ಕಾರಿನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡು, ನಂತರ ಪಕ್ಕದಲ್ಲಿ ನಿಂತಿದ್ದ ಇನ್ನೊಂದು ವಾಹನಕ್ಕೂ ಹರಡಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

45 ದಿನಗಳ ಈ ಕಾರ್ಯಕ್ರಮದ ಮುಂದಿನ ಪ್ರಮುಖ ಕಾರ್ಯಕ್ರಮ ಫೆಬ್ರವರಿ 12 ರಂದು ನಡೆಯುವ ಮಾಘಿ ಪೂರ್ಣಿಮೆಯಂದು ನಡೆಯಲಿದೆ. ವಿಶ್ವದ ಅತಿದೊಡ್ಡ ಧಾರ್ಮಿಕ ಸಭೆ ಎಂದು ಹೇಳಲಾಗುವ ಮಹಾ ಕುಂಭ 2025ರ ಫೆಬ್ರವರಿ 26 ರಂದು ಅಂತಿಮ ಅಮೃತ ಸ್ನಾನದೊಂದಿಗೆ ಮುಕ್ತಾಯಗೊಳ್ಳಲಿದೆ.

ಕುಂಭಮೇಳದಲ್ಲಿ ಮೌನಿ ಅಮಾವಾಸ್ಯೆಯಂದು ಕಾಲ್ತುಳಿತ ಉಂಟಾಗಿತ್ತು. ಅಧಿಕೃತ ದಾಖಲೆಗಳ ಪ್ರಕಾರ ಕಾಲ್ತುಳಿತದಲ್ಲಿ 30 ಜನರು ಸಾವನ್ನಪ್ಪಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೀವು ಇಲ್ಲಿ ಹುಟ್ಟೋದು ಬೇಡ ನಿಮ್ಮ ಕ್ಷೇತ್ರದ ಶೇ. 75 ರಷ್ಟಾದರೂ ಇಲ್ಲಿ ಅಭಿವೃದ್ಧಿ ಮಾಡಿ: ಡಿಕೆಶಿಗೆ ಖರ್ಗೆ ಟಾಂಗ್; Video

ಸ್ವಾತಂತ್ರ್ಯ ಬಳಿಕ ಇದೇ ಮೊದಲು, ಮಕರ ಸಂಕ್ರಾಂತಿಗೆ ಮತ್ತೊಂದು ಹೊಸ 'ದಾಖಲೆ'ಗೆ ಸಜ್ಜಾದ ಪ್ರಧಾನಿ ಮೋದಿ!

ಡೆಂಟಲ್ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಕೇಸ್: ಕೆಲಸದಿಂದ 6 ಪ್ರಾಧ್ಯಾಪಕರ ವಜಾ

ಯಶ್ 'ಟಾಕ್ಸಿಕ್' ಟೀಸರ್ ವಿರುದ್ಧ ಮಹಿಳಾ ಆಯೋಗಕ್ಕೆ ಎಎಪಿ ದೂರು; 'ಆ' ದೃಶ್ಯಕ್ಕೆ ಆಕ್ಷೇಪ!

ಟ್ರಂಪ್ ಗೆ 'ಮರೆಯಲಾಗದ ಪಾಠ' ಕಲಿಸುತ್ತೇವೆ: ಖಡಕ್ ವಾರ್ನಿಂಗ್ ನೀಡಿದ ಇರಾನ್ ಸಂಸತ್ ಸ್ಪೀಕರ್!

SCROLL FOR NEXT