ಕಾಂಗ್ರೆಸ್ ಹಿರಿಯ ನಾಯಕ ಪ್ರತಾಪ್ ಸಿಂಗ್ ಬಾಜ್ವಾ 
ದೇಶ

'ಪಂಜಾಬ್‌ನಲ್ಲಿ AAP ವಿಭಜನೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ': ಕಾಂಗ್ರೆಸ್ ನಾಯಕ ಪ್ರತಾಪ್ ಸಿಂಗ್ ಬಾಜ್ವಾ

Sumana Upadhyaya

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ಸೋಲು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಆಪ್ ಸದ್ಯ ಪಂಜಾಬ್ ರಾಜ್ಯದಲ್ಲಿ ಮಾತ್ರ ಅಧಿಕಾರದಲ್ಲಿದೆ. ಆ ರಾಜ್ಯದಲ್ಲಿ ಪಕ್ಷದ ಭವಿಷ್ಯ ಹೇಗಾಗಲಿದೆ ಎಂಬ ಚರ್ಚೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಪ್ರತಾಪ್ ಸಿಂಗ್ ಬಾಜ್ವಾ ಅವರು, ಎಎಪಿಯ ವಿಘಟನೆ ಪ್ರಕ್ರಿಯೆ ಆರಂಭವಾಗಿದೆ, ಅದು ಶೀಘ್ರದಲ್ಲಿಯೇ ಇತಿಹಾಸ ಪುಟ ಸೇರಲಿದೆ ಎಂದು ಹೇಳಿದ್ದಾರೆ. ಅವರ ಜೊತೆ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ:

ದೆಹಲಿಯಲ್ಲಿ ಎಎಪಿಯ ಸೋಲಿನ ಪರಿಣಾಮವೇನು? ಅರವಿಂದ್ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಸೇರಿದಂತೆ ಬಹುತೇಕ ಎಲ್ಲಾ ಹಿರಿಯ ನಾಯಕರು ಸೋಲನ್ನು ಅನುಭವಿಸಿದ್ದಾರಲ್ಲವೇ?

ಆರಂಭದಲ್ಲಿ ಎಎಪಿ ನೀಡಿದ್ದ ಭರವಸೆ ಮತ್ತು ಅಧಿಕಾರಕ್ಕೆ ಬಂದ ಕಳೆದ 10 ವರ್ಷಗಳಲ್ಲಿ ನೀಡಿದ್ದ ಆಡಳಿತ ಸಂಪೂರ್ಣ ವಿಭಿನ್ನವಾಗಿತ್ತು. ವ್ಯಾಪಕ ಭ್ರಷ್ಟಾಚಾರ ನಡೆಯಿತು. ನೈತಿಕವಾಗಿ ಭ್ರಷ್ಟರಾದರು. ಜೈಲಿನಿಂದ ಹೊರಬಂದ ನಂತರ, ಕೇಜ್ರಿವಾಲ್ ಅವರು ತಾವು ಪ್ರಾಮಾಣಿಕರೋ ಅಲ್ಲವೋ ಎಂಬುದನ್ನು ಜನರು ನಿರ್ಧರಿಸುತ್ತಾರೆ ಎಂದು ಹೇಳಿದರು. ಜನರು ಭ್ರಷ್ಟರು ಎಂದು ಅವರಿಗೆ ಚುನಾವಣೆಯಲ್ಲಿ ಸೋಲಿಸುವ ಮೂಲಕ ದೃಢ ಉತ್ತರ ನೀಡಿದರು.

ಸಿಎಂ ಅವರ ಅಧಿಕೃತ ನಿವಾಸವನ್ನು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನವೀಕರಿಸಲಾಗಿದೆ. ನಾನು ಸಚಿವನಾಗಿದ್ದಾಗ ಅಧಿಕೃತ ವಸತಿಗೃಹವನ್ನು ನವೀಕರಿಸಲು ಸರ್ಕಾರ 5ರಿಂದ 7 ಲಕ್ಷಕ್ಕಿಂತ ಹೆಚ್ಚು ನೀಡುತ್ತಿರಲಿಲ್ಲ. ಕೇಜ್ರಿವಾಲ್ ಅವರು ಜೀವನಪರ್ಯಂತ ಮುಖ್ಯಮಂತ್ರಿಯಾಗಿ ಉಳಿಯುತ್ತಾರೆ ಎಂಬ ಭ್ರಮೆಯಲ್ಲಿದ್ದರು. ಪಂಜಾಬ್‌ನಲ್ಲಿಯೂ ಸಹ, ಜನರು ಅವರ ಕಾರ್ಯಕ್ಷಮತೆಯನ್ನು ಗಮನಿಸಿದ್ದಾರೆ.

ವಿವಿಐಪಿ ಸಂಸ್ಕೃತಿಯನ್ನು ಕೊನೆಗೊಳಿಸುವ ಬಯಕೆಯನ್ನು ಅವರು ವ್ಯಕ್ತಪಡಿಸಿದರು. ಆದರೆ, ಸಿಎಂ ಭಗವಂತ್ ಮಾನ್ ಅವರ ಭದ್ರತೆಗಾಗಿ ಸುಮಾರು 1,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕೇಜ್ರಿವಾಲ್ ದೆಹಲಿ ಸಿಎಂ ಆಗಿದ್ದಾಗ ಕನಿಷ್ಠ 80 ಪಂಜಾಬ್ ಪೊಲೀಸ್ ಕಮಾಂಡೋಗಳು ಅವರ ಭದ್ರತೆಯನ್ನು ನಿರ್ವಹಿಸುತ್ತಿದ್ದರು. ಅವರಿಗೆ ಗೃಹ ಸಚಿವಾಲಯ ಮತ್ತು ಪಂಜಾಬ್ ಸರ್ಕಾರದಿಂದ 'Z' ಭದ್ರತೆ ಇತ್ತು. ಅವರು ವ್ಯಾಗನ್ ಆರ್ ಓಡಿಸುತ್ತಿದ್ದರು. ಈಗ ಅವರು ಪಂಜಾಬ್ ಸರ್ಕಾರ ಒದಗಿಸಿದ ವಾಹನವನ್ನು ಬಳಸುತ್ತಾರೆ.

ಪಂಜಾಬ್‌ನಲ್ಲಿ ಎಎಪಿ ವಿಭಜನೆಯಾಗುತ್ತದೆಯೇ?

ದೆಹಲಿಯಲ್ಲಿ ಈ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಮುಂಬರುವ ವರ್ಷಗಳಲ್ಲಿ ಪಂಜಾಬ್ ತಲುಪಲಿದೆ.

ವರದಿಗಳ ಪ್ರಕಾರ ಕೇಜ್ರಿವಾಲ್ ಅವರು ಪಂಜಾಬ್ ಮೂಲಕ ರಾಜ್ಯಸಭೆಗೆ ಪ್ರವೇಶಿಸಿ ತಮ್ಮ ಸದಸ್ಯರಲ್ಲಿ ಒಬ್ಬರನ್ನು ರಾಜೀನಾಮೆ ನೀಡುವಂತೆ ಕೇಳಬಹುದು ಅಥವಾ ಮಾನ್ ಅವರನ್ನು ರಾಜೀನಾಮೆ ನೀಡಿ ಪಂಜಾಬ್ ಸಿಎಂ ಆಗಬಹುದು, ಇದಕ್ಕೆ ನಿಮ್ಮ ಅಭಿಪ್ರಾಯವೇನು?

ಇದು ಕೇವಲ ವದಂತಿಯಲ್ಲ, ಶೇಕಡಾ 100ರಷ್ಟು ಆಗುತ್ತದೆ. ಇತ್ತೀಚೆಗೆ, ಪಂಜಾಬ್ ಎಎಪಿ ಅಧ್ಯಕ್ಷ ಮತ್ತು ಕ್ಯಾಬಿನೆಟ್ ಸಚಿವ ಅಮನ್ ಅರೋರಾ ಅವರು ಹಿಂದೂ ಮುಖ ಮಾತ್ರ ಪಂಜಾಬ್ ಸಿಎಂ ಆಗಬಹುದು ಎಂದು ಹೇಳಿದ್ದಾರೆ. ಅವರು ಇದ್ದಕ್ಕಿದ್ದಂತೆ ಅಂತಹ ಹೇಳಿಕೆಯನ್ನು ಏಕೆ ನೀಡಿದರು?

ಜಾತ್ಯತೀತ ಪಕ್ಷವಾಗಿ, ಹಿಂದೂ ಅಥವಾ ಸಿಖ್ ಅಥವಾ ಯಾವುದೇ ಇತರ ಸಮುದಾಯದ ಸಿಎಂ ಬಗ್ಗೆ ಕಾಂಗ್ರೆಸ್‌ಗೆ ಯಾವುದೇ ಆಕ್ಷೇಪವಿಲ್ಲ. ಆದರೆ ಅರೋರಾ ಅವರ ಹೇಳಿಕೆಯು ಅನುಮಾನಗಳನ್ನು ಹುಟ್ಟುಹಾಕುತ್ತದೆ. ಸಾರ್ವಜನಿಕರ, ವಿಶೇಷವಾಗಿ ಸಿಖ್ಖರ ಪ್ರತಿಕ್ರಿಯೆಯನ್ನು ಅಳೆಯಲು ಅವರು ಬಯಸಿದ್ದರು ಎಂದು ತೋರುತ್ತದೆ.

ಎಎಪಿ ಶಾಸಕರು ಕಾಂಗ್ರೆಸ್ ಜೊತೆ ಸಂಪರ್ಕದಲ್ಲಿದ್ದಾರೆ ಎಂಬ ಊಹಾಪೋಹಗಳು ಹರಡಿವೆ?

ಅಂತಹ ಪರಿಸ್ಥಿತಿ ಬಂದಾಗಲೆಲ್ಲಾ, ಎಎಪಿ ಶಾಸಕರ ಮೊದಲ ಆಯ್ಕೆ ಕಾಂಗ್ರೆಸ್ ಸೇರುವುದು ಎಂದು ನನಗೆ ಖಚಿತವಾಗಿದೆ. ಎಎಪಿಯಲ್ಲಿ ಅವರಿಗೆ ಭವಿಷ್ಯವಿಲ್ಲ ಎಂದು ಅವರಿಗೆ ಗೊತ್ತಿದೆ.

ದೆಹಲಿ ಚುನಾವಣಾ ಫಲಿತಾಂಶಗಳು ಕೇಜ್ರಿವಾಲ್ ಅವರ ನಾಯಕತ್ವದ ಬಗ್ಗೆ ಜನಾಭಿಪ್ರಾಯ ಸಂಗ್ರಹವಾಗಿತ್ತು. ಕೇಜ್ರಿವಾಲ್ ಪಂಜಾಬ್ ಸರ್ಕಾರವನ್ನು ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆಯಲ್ಲವೇ?

ಪಂಜಾಬ್ ಸರ್ಕಾರ ದೆಹಲಿಯಿಂದ ಆಡಳಿತ ನಡೆಯುತ್ತಿದೆ ಎಂಬುದು ಖಂಡಿತಾ ಸತ್ಯ. ಸ್ವಾತಿ ಮಲಿವಾಲ್ ಹಲ್ಲೆ ಪ್ರಕರಣದಲ್ಲಿ ಬಂಧಿತರಾಗಿರುವ ಕೇಜ್ರಿವಾಲ್ ಅವರ ಆಪ್ತ ಸಹಾಯಕ ವಿಭವ ಕುಮಾರ್ ಪಂಜಾಬ್‌ನ ನಿಜವಾದ ಸಿಎಂ. ಅವರು ಸರ್ಕಾರವನ್ನು ನಡೆಸುತ್ತಿದ್ದಾರೆ. ಕಳೆದ ನಾಲ್ಕು ತಿಂಗಳುಗಳಲ್ಲಿ ಒಂದೇ ಒಂದು ಸಂಪುಟ ಸಭೆ ನಡೆದಿಲ್ಲ, ನಿನ್ನೆ ಕರೆಯಲಾಗಿದ್ದ ಸಂಪುಟ ಸಭೆಯನ್ನು ಮುಂದೂಡಲಾಯಿತು. ಪಂಜಾಬ್ ಶಾಸಕರನ್ನು ಸಭೆಗೆ ದೆಹಲಿಗೆ ಏಕೆ ಕರೆಯಲಾಯಿತು? ಪಂಜಾಬಿಗಳು ಕೇಜ್ರಿವಾಲ್‌ಗೆ ಅಧೀನರಾಗಿದ್ದಾರೆಯೇ?

ಪಂಜಾಬ್ ಎಎಪಿ ಶಾಸಕರನ್ನು ದೆಹಲಿಯಲ್ಲಿ ಸಭೆಗೆ ಏಕೆ ಕರೆದರು?

ಅವರ ಕಾರ್ಯಸೂಚಿ ಸ್ಪಷ್ಟವಾಗಿದೆ: ಪಕ್ಷವನ್ನು ಉಳಿಸಲು, ಖಾಲಿ ಇರುವ ಲುಧಿಯಾನ (ಪಶ್ಚಿಮ) ವಿಧಾನಸಭಾ ಸ್ಥಾನದಿಂದ ಕೇಜ್ರಿವಾಲ್ ಸ್ಪರ್ಧಿಸಬೇಕೆಂದು ಅವರು ಒತ್ತಾಯಿಸುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಅಂಧ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಬರವಣಿಗೆಯಲ್ಲಿ ಖುಷಿ ಕಂಡ ಪೊಲೀಸ್ ಅಧಿಕಾರಿ: 'ಬಸವಣ್ಣನ ವಚನ' ಗಳನ್ನು ಇಂಗ್ಲೀಷ್ ಗೆ ಅನುವಾದ ಮಾಡ್ತಿರೋ DYSP ಬಸವರಾಜ್ ಯಲಿಗಾರ್!

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

SCROLL FOR NEXT