ಚಲಪತಿ ಮತ್ತು ಆತನ ಪತ್ನಿ ಅರುಣಾ 
ದೇಶ

ಮೂರು ದಶಕಗಳಿಂದ ಭೂಗತವಾಗಿದ್ದ ಮಾವೋವಾದಿ: ಪತ್ನಿಯೊಂದಿಗಿನ ಸೆಲ್ಫಿ ತಂತು ಪ್ರಾಣಕ್ಕೆ ಕುತ್ತು!

ಚಲಪತಿ ಎಂದೇ ಪ್ರಸಿದ್ಧನಾದ ರಾಮಚಂದ್ರ ರೆಡ್ಡಿ, 2008 ರಲ್ಲಿ ಒಡಿಶಾದ ನಯಾಗಢ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮತ್ತು 13 ಭದ್ರತಾ ಸಿಬ್ಬಂದಿಯನ್ನು ಕೊಂದ ಮಾವೋವಾದಿ ದಾಳಿಯ ನೇತೃತ್ವವಹಿಸಿದ್ದನು.

ಭುವನೇಶ್ವರ: ಮಾವೋವಾದಿ ಪಕ್ಷದ ಸೂಕ್ಷ್ಮ ಕಾರ್ಯಾಚರಣೆಗಳ ಮಾಸ್ಟರ್‌ ಮೈಂಡ್‌ ಎಂದೇ ಗುರುತಿಸಲ್ಪಟ್ಟಿದ್ದ ಛಲಪತಿ, ಬಸ್ತರ್‌ನ ದಟ್ಟವಾದ ಕಾಡುಗಳಲ್ಲಿ ನಕ್ಸಲ್‌ ಸಿದ್ಧಾಂತ ಹರಡುವಲ್ಲಿ ನಿಸ್ಸೀಮನಾಗಿದ್ದ. ಕಳೆದ ಹಲವು ವರ್ಷಗಳಿಂದ ಚಲಪತಿ ತನ್ನ ಚಲನವಲನಗಳ ಬಗ್ಗೆ ಜಾಗರೂಕನಾಗಿ, ನಿಗೂಢವಾಗಿದ್ದ. ಆದರೆ ತನ್ನ ಪತ್ನಿಯೊಂದಿಗೆ ಸೆಲ್ಫಿ ತೆಗೆದುಕೊಂಡು ತನ್ನ ಜೀವಕ್ಕೆ ಸಂಚಕಾರ ತಂದು ಕೊಂಡಿದ್ದಾನೆ.

ಸಿಪಿಐ (ಮಾವೋವಾದಿ) ಶ್ರೇಣಿಯ ಅಗ್ರ ಏಳು ಜನರಲ್ಲಿ ಒಬ್ಬನಾದ ಅವನು, ಒಡಿಶಾ-ಛತ್ತೀಸ್‌ಗಢ ಗಡಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ 13 ಸಹಚರರೊಂದಿಗೆ ಕೊಲ್ಲಲ್ಪಟ್ಟನು. ಚಲಪತಿ ಎಂದೇ ಪ್ರಸಿದ್ಧನಾದ ರಾಮಚಂದ್ರ ರೆಡ್ಡಿ, 2008 ರಲ್ಲಿ ಒಡಿಶಾದ ನಯಾಗಢ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮತ್ತು 13 ಭದ್ರತಾ ಸಿಬ್ಬಂದಿಯನ್ನು ಕೊಂದ ಮಾವೋವಾದಿ ದಾಳಿಯ ನೇತೃತ್ವ ವಹಿಸಿದ್ದನು. ಈಗ ಮೃತಪಟ್ಟಿರುವ ಉನ್ನತ ಮಾವೋವಾದಿ ನಾಯಕ ರಾಮಕೃಷ್ಣ ಫೆಬ್ರವರಿ 15, 2008 ರ ದಾಳಿಯ ಸೂತ್ರಧಾರನಾಗಿದ್ದ ಎಂದು ನಕ್ಸಲ್ ವಿರೋಧಿ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿದ್ದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಶಸ್ತ್ರಾಗಾರದ ಮೇಲೆ ದಾಳಿ ನಡೆಯುತ್ತಿರುವಾಗ ಪೊಲೀಸ್ ಪಡೆಗಳು ನಯಾಗಢಕ್ಕೆ ಪ್ರವೇಶಿಸಲು ಸಾಧ್ಯವಾಗದಂತೆ ಚಲಪತಿ ಯೋಜನೆ ರೂಪಿಸಿದ್ದ ಮಾವೋವಾದಿಗಳು ಬೃಹತ್ ಮರದ ತುಂಡುಗಳಿಂದ ಪಟ್ಟಣಕ್ಕೆ ಹೋಗುವ ಎಲ್ಲಾ ರಸ್ತೆಗಳನ್ನು ನಿರ್ಬಂಧಿಸಿದ್ದರು ಎಂದು ಅವರು ಹೇಳಿದರು.

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಿಂದ ಬಂದವನಾಗಿದ್ದ ಛಲಪತಿ ಮಾವೋವಾದಿ ಚಟುವಟಿಕೆಗಳು ಈಗ ಕೊನೆಗೊಂಡಿವೆ, ಚಲಪತಿ ಮುಖ್ಯವಾಗಿ ಛತ್ತೀಸ್‌ಗಢ ಮತ್ತು ಒಡಿಶಾದಲ್ಲಿ ಸಕ್ರಿಯರಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ, ಅವರು ಛತ್ತೀಸ್‌ಗಢದ ಬಸ್ತಾರ್ ಜಿಲ್ಲೆಯ ದರಭಾದಲ್ಲಿ ವಾಸಿಸುತ್ತಿದ್ದ, ಏಕೆಂದರೆ ಆತನ ಮೊಣಕಾಲಿನಲ್ಲಿ ಸಮಸ್ಯೆ ಇದ್ದ ಕಾರಣ ಹೆಚ್ಚು ಪ್ರಯಾಣಿಸಲು ಸಾಧ್ಯವಾಗಲಿಲ್ಲ.

ಯುದ್ಧತಂತ್ರದ ಪರಿಣತಿ, ನಾಯಕತ್ವದ ಕೌಶಲ್ಯ ಮತ್ತು ಸವಾಲಿನ ಭೂಪ್ರದೇಶಗಳಲ್ಲಿ ಸಂಪನ್ಮೂಲಗಳನ್ನು ಸಜ್ಜುಗೊಳಿಸುವ ಸಾಮರ್ಥ್ಯವು, ಛಲಪತಿಯನ್ನು ಈ ಪ್ರದೇಶದಲ್ಲಿ ಅತ್ಯಂತ ಬೇಕಾಗಿರುವ ಮಾವೋವಾದಿ ನಾಯಕರಲ್ಲಿ ಓರ್ವನನ್ನಾಗಿ ಗುರುತಿಸುವಂತೆ ಮಾಡಿತ್ತು. ಅಬುಜ್ಮದ್‌ನಲ್ಲಿ ಹೆಚ್ಚುತ್ತಿರುವ ಎನ್‌ಕೌಂಟರ್‌ಗಳನ್ನು ಗಮನದಲ್ಲಿಟ್ಟುಕೊಂಡು, ಛಲಪತಿ ಕೆಲವು ತಿಂಗಳ ಹಿಂದಷ್ಟೇ ತನ್ನ ನೆಲೆಯನ್ನು ಸುರಕ್ಷಿತ ಕಾರ್ಯಾಚರಣೆ ವಲಯವೆಂದು ಪರಿಗಣಿಸಲಾಗಿದ್ದ ಒಡಿಶಾ ಗಡಿಗೆ ಹತ್ತಿರವಿರುವ ಗರಿಯಾಬಂದ್‌ಗೆ ಸ್ಥಳಾಂತರಿಸಿದ್ದ ಎಂದು ಮೂಲಗಳು ತಿಳಿಸಿವೆ.

ಭದ್ರತಾ ಸಂಸ್ಥೆಗಳಿಂದ ತಪ್ಪಿಸಿಕೊಳ್ಳಲು ಭೂಗತನಾಗಿದ್ದ, ಆದರೆ ಅರುಣಾ ಅವರೊಂದಿಗಿನ ಸೆಲ್ಫಿಯಿಂದಾಗಿ ಸಮಸ್ಯೆ ಎದುರಾಯಿತು. ಅವರು ಗುರುತು ಪತ್ತೆಗೆ 1 ಕೋಟಿ ರೂ. ಬಹುಮಾನ ಘೋಷಿಸಲಾಗಿತ್ತು.

ಮೇ 2016 ರಲ್ಲಿ ಆಂಧ್ರಪ್ರದೇಶದಲ್ಲಿ ಮಾವೋವಾದಿಗಳು ಮತ್ತು ಭದ್ರತಾ ಪಡೆಗಳ ನಡುವಿನ ಗುಂಡಿನ ಚಕಮಕಿಯ ನಂತರ ವಶಪಡಿಸಿಕೊಂಡ ಸ್ಮಾರ್ಟ್‌ಫೋನ್‌ನಲ್ಲಿ ದಂಪತಿಯ ಸೆಲ್ಫಿ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದರಿಂದಾಗಿ ಭದ್ರತಾ ಪಡೆಗಳು ಆತನ ಅವರ ಚಲನವಲನದ ಮೇಲೆ ನಿಗಾ ಇರಿಸಿದರು. ಹೀಗಾಗಿ ಆತನ ತನ್ನ ಕಾವಲು ಕಾಯುತ್ತಿದ್ದ ಒಂದು ಡಜನ್ ಕಾರ್ಯಕರ್ತರೊಂದಿಗೆ ಪ್ರಯಾಣಿಸುವಂತೆ ಮಾಡಿತು. ಛತ್ತೀಸ್‌ಗಢ-ಒಡಿಶಾ ಗಡಿಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಚಲಪತಿ ಸೇರಿದಂತೆ ಹದಿನಾಲ್ಕು ಮಾವೋವಾದಿಗಳು ಸಾವನ್ನಪ್ಪಿದರು. ಸೋಮವಾರ ಬೆಳಿಗ್ಗೆ ಅವರಲ್ಲಿ ಇಬ್ಬರನ್ನು ಗುಂಡಿಕ್ಕಿ ಕೊಲ್ಲಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಸೋಮವಾರ ತಡರಾತ್ರಿ ಮತ್ತೊಂದು ಸುತ್ತಿನ ಗುಂಡಿನ ಚಕಮಕಿ ಪ್ರಾರಂಭವಾಯಿತು ಮತ್ತು ಮಂಗಳವಾರ ಮುಂಜಾನೆಯವರೆಗೆ ಮುಂದುವರೆಯಿತು, ಇದರಲ್ಲಿ 12 ಇತರ ಮಾವೋವಾದಿಗಳು ಕೊಲ್ಲಲ್ಪಟ್ಟರು ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT