ಲಕ್ಷ್ಮೀನಾರಾಯಣ ಸುಬ್ರಮಣಿಯಂ-ಅನಂತ್ ನಾಗ್-ರಿಕ್ಕಿ ಕೇಜ್ 
ದೇಶ

2025ರ ಪದ್ಮಪ್ರಶಸ್ತಿ ಘೋಷಣೆ: ನಟ ಅನಂತನಾಗ್, ರಿಕ್ಕಿ ಕೇಜ್‌ ಸೇರಿ ಕರ್ನಾಟಕದ 9 ಸಾಧಕರಿಗೆ ಗೌರವ

76ನೇ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 2025ನೇ ಸಾಲಿನ ಅತ್ಯುನ್ನತ ನಾಗರಿಕ ಸೇವಾ ಪ್ರಶಸ್ತಿಗಳಾದ ಪದ್ಮವಿಭೂಷಣ, ಪದ್ಮಭೂಷಣ ಹಾಗೂ ಪದ್ಮಶ್ರೀ ಪುರಸ್ಕೃತರ ಹೆಸರುಗಳನ್ನು ಇಂದು ಪ್ರಕಟಿಸಿದೆ.

ನವದೆಹಲಿ: 76ನೇ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 2025ನೇ ಸಾಲಿನ ಅತ್ಯುನ್ನತ ನಾಗರಿಕ ಸೇವಾ ಪ್ರಶಸ್ತಿಗಳಾದ ಪದ್ಮವಿಭೂಷಣ, ಪದ್ಮಭೂಷಣ ಹಾಗೂ ಪದ್ಮಶ್ರೀ ಪುರಸ್ಕೃತರ ಹೆಸರುಗಳನ್ನು ಇಂದು ಪ್ರಕಟಿಸಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿಯನ್ನು ಘೋಷಿಸಿದರು.

2025ನೇ ಸಾಲಿನಲ್ಲಿ ರಾಜ್ಯದ 9 ಸಾಧಕರು ಈ ಬಾರಿ ಪದ್ಮ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 1 ಪದ್ಮ ವಿಭೂಷಣ, 2 ಪದ್ಮಭೂಷಣ ಹಾಗೂ 6 ಪದ್ಮಶ್ರೀ ಪ್ರಶಸ್ತಿ ಸೇರಿದಂತೆ 9 ಪದ್ಮ ಪ್ರಶಸ್ತಿ ಕರ್ನಾಟಕದ ಸಾಧಕರಿಗೆ ಲಭಿಸಿದೆ. ಪದ್ಮ ವಿಭೂಷಣ ಪ್ರಶಸ್ತಿಯನ್ನು ವಯೋಲಿನ್ ವಾದಕ ಲಕ್ಷ್ಮೀನಾರಾಯಣ ಸುಬ್ರಮಣಿಯಂ ಅವರಿಗೆ ಲಭಿಸಿದ್ದರೆ, ನಟ ಅನಂತನಾಗ್, ಶಿಕ್ಷಣ ತಜ್ಞ ಎ. ಸೂರ್ಯಪ್ರಕಾಶ್ ಅವರಿಗೆ ಪದ್ಮ ಭೂಷಣ ಸಿಕ್ಕಿದೆ. ಇನ್ನು ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್‌, ಜಾನಪದ ಕಲಾವಿದ ವೆಂಕಪ್ಪ ಅಂಬಾಜಿ, ವೈದ್ಯಕೀಯ ಕ್ಷೇತ್ರದಲ್ಲಿ ವಿಜಯಲಕ್ಷ್ಮಿ ದೇಶಮಾನೆ, ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತರ, ಹಾಸನ ರಘು ಮತ್ತು ಪ್ರಶಾಂತ್ ಪ್ರಕಾಶ್ ಅವರು ಪದ್ಮಶ್ರೀ ಗೌರವಕ್ಕೆ ಭಾಜನರಾಗಿದ್ದಾರೆ.

ಪದ್ಮವಿಭೂಷಣ ಪ್ರಶಸ್ತಿ ಪಡೆದ ಇತರರಲ್ಲಿ ದುವ್ವೂರ್ ನಾಗೇಶ್ವರ ರೆಡ್ಡಿ (ವೈದ್ಯಕೀಯ), ಕುಮುದಿನಿ ರಜನಿಕಾಂತ್ ಲಖಿಯಾ ಮತ್ತು ಲಕ್ಷ್ಮಿನಾರಾಯಣನ್ ಸುಬ್ರಮಣಿಯಂ (ಕಲೆ), ಎಂ.ಟಿ. ವಾಸುದೇವನ್ ನಾಯರ್ (ಮರಣೋತ್ತರ) (ಸಾಹಿತ್ಯ-ಶಿಕ್ಷಣ) ಸೇರಿದ್ದಾರೆ. ಇವರಲ್ಲದೆ, ಎ ಸೂರ್ಯ ಪ್ರಕಾಶ್, ರಾಮ್ ಬಹದ್ದೂರ್ ರೈ (ಸಾಹಿತ್ಯ ಮತ್ತು ಶಿಕ್ಷಣ-ಪತ್ರಿಕೋದ್ಯಮ), ಅನಂತ್ ನಾಗ್ ಮತ್ತು ಜತಿನ್ ಗೋಸ್ವಾಮಿ, ನಂದಮೂರಿ ಬಾಲಕೃಷ್ಣ, ಪಂಕಜ್ ಉದಾಸ್ (ಮರಣೋತ್ತರ), ನಟ ಅಜಿತ್ ಕುಮಾರ್, ಶೇಖರ್ ಕಪೂರ್, ಶೋಭನಾ ಚಂದ್ರಕುಮಾರ್ (ಕಲೆ), ಜೋಸ್ ಚಾಕೊ ಪೆರಿಯಪ್ಪುರಂ (ವೈದ್ಯಕೀಯ), ಕೈಲಾಶ್ ನಾಥ್ ದೀಕ್ಷಿತ್ (ಪುರಾತತ್ವ), ನಲ್ಲಿ ಕುಪ್ಪುಸ್ವಾಮಿ ಚೆಟ್ಟಿಯಾರ್, ಪಂಕಜ್ ಪಟೇಲ್ (ವ್ಯವಹಾರ ಮತ್ತು ಕೈಗಾರಿಕೆ), ಪಿ.ಆರ್. ಶ್ರೀಜೇಶ್ (ಕ್ರೀಡೆ), ಸಾಧ್ವಿ ಋತಂಭರ (ಸಮಾಜ ಕಾರ್ಯ), ವಿನೋದ್ ಧಾಮ್ (ವಿಜ್ಞಾನ ಮತ್ತು ಎಂಜಿನಿಯರಿಂಗ್) ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಲಾಗಿದೆ.

ಗಣರಾಜ್ಯೋತ್ಸವದ ಮುನ್ನಾದಿನ ಗುರುವಾರ ಪದ್ಮ ಪ್ರಶಸ್ತಿಗಳನ್ನು ಘೋಷಿಸಲಾಯಿತು. ಇದರ ಅಡಿಯಲ್ಲಿ, ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳಿಗೆ ಪಾತ್ರರಾಗುವ ವ್ಯಕ್ತಿಗಳ ಹೆಸರನ್ನು ಘೋಷಿಸಲಾಯಿತು. ಈ ಬಾರಿ ರಾಷ್ಟ್ರಪತಿಗಳು 139 ಪದ್ಮ ಪ್ರಶಸ್ತಿಗಳನ್ನು ಅನುಮೋದಿಸಿದ್ದಾರೆ. ಪಟ್ಟಿಯಲ್ಲಿ ಏಳು ಪದ್ಮವಿಭೂಷಣ ಮತ್ತು 19 ಪದ್ಮಭೂಷಣ ಪ್ರಶಸ್ತಿಗಳು ಸೇರಿವೆ. ಇದಲ್ಲದೆ, 113 ಪದ್ಮಶ್ರೀ ಪ್ರಶಸ್ತಿಗಳನ್ನು ಸಹ ಘೋಷಿಸಲಾಗಿದೆ. ಪ್ರಶಸ್ತಿ ಪುರಸ್ಕೃತರಲ್ಲಿ 23 ಮಹಿಳೆಯರು ಸೇರಿದ್ದಾರೆ. ಈ ಪಟ್ಟಿಯಲ್ಲಿ 10 ವಿದೇಶಿಯರು, NRIಗಳು, ಪಿಐಒಗಳು, ಒಸಿಐ ವರ್ಗದ ವ್ಯಕ್ತಿಗಳು ಸೇರಿದ್ದಾರೆ. ಅದೇ ಸಮಯದಲ್ಲಿ, 13 ಮರಣೋತ್ತರ ಪ್ರಶಸ್ತಿಗಳನ್ನು ಸಹ ಘೋಷಿಸಲಾಗಿದೆ. ಇದರಲ್ಲಿ ಭೋಜ್‌ಪುರಿ ಗಾಯಕಿ ಶಾರದಾ ಸಿನ್ಹಾ (ಮರಣೋತ್ತರ), ನ್ಯಾಯಮೂರ್ತಿ (ನಿವೃತ್ತ) ಜಗದೀಶ್ ಸಿಂಗ್ ಖೇಹರ್ ಮತ್ತು ಸುಜುಕಿ ಕಂಪನಿಯ ಒಸಾಮು ಸುಜುಕಿ (ಮರಣೋತ್ತರ), ಬಿಬೇಕ್ ಡೆಬ್ರಾಯ್, ಸುಶೀಲ್ ಮೋದಿ ಮತ್ತು ಮನೋಹರ್ ಜೋಶಿ (ಮರಣೋತ್ತರ) ಅವರ ಹೆಸರುಗಳು ಸೇರಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT