ಹಿಮಾಚಲಪ್ರದೇಶದಲ್ಲಿ ಮೇಘಸ್ಫೋಟ 
ದೇಶ

ದೇವಭೂಮಿ ಹಿಮಾಚಲದಲ್ಲಿ ಮೇಘಸ್ಫೋಟ: ಮಂಡಿಯಲ್ಲಿ ಪ್ರವಾಹಕ್ಕೆ 11 ಸಾವು; 34 ಜನ ನಾಪತ್ತೆ, 371 ಕೋಟಿ ಮೊತ್ತದ ಆಸ್ತಿ ನಾಶ!

ಕಳೆದ 32 ಗಂಟೆಗಳಲ್ಲಿ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಮೇಘಸ್ಫೋಟ ಮತ್ತು ದಿಢೀರ್ ಪ್ರವಾಹದಿಂದಾಗಿ ಕನಿಷ್ಠ 11 ಜನರು ಸಾವನ್ನಪ್ಪಿದ್ದು 34 ಮಂದಿ ಕಾಣೆಯಾಗಿದ್ದಾರೆ. ರಾಜ್ಯವು 16 ಮೇಘಸ್ಫೋಟಗಳು ಮತ್ತು ಮೂರು ದಿಢೀರ್ ಪ್ರವಾಹಗಳಿಗೆ ಸಾಕ್ಷಿಯಾಗಿದೆ.

ಮಂಡಿ(ಹಿಮಾಚಲ ಪ್ರದೇಶ): ಕಳೆದ 32 ಗಂಟೆಗಳಲ್ಲಿ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಮೇಘಸ್ಫೋಟ ಮತ್ತು ದಿಢೀರ್ ಪ್ರವಾಹದಿಂದಾಗಿ ಕನಿಷ್ಠ 11 ಜನರು ಸಾವನ್ನಪ್ಪಿದ್ದು 34 ಮಂದಿ ಕಾಣೆಯಾಗಿದ್ದಾರೆ. ರಾಜ್ಯವು 16 ಮೇಘಸ್ಫೋಟಗಳು ಮತ್ತು ಮೂರು ದಿಢೀರ್ ಪ್ರವಾಹಗಳಿಗೆ ಸಾಕ್ಷಿಯಾಗಿದೆ. ಅವುಗಳಲ್ಲಿ ಹೆಚ್ಚಿನವು ಮಂಡಿಯಲ್ಲಿ ಕೇಂದ್ರೀಕೃತವಾಗಿದ್ದು, ವ್ಯಾಪಕ ವಿನಾಶಕ್ಕೆ ಕಾರಣವಾಗಿವೆ ಎಂದು ವರದಿಯಾಗಿದೆ.

ಎಸ್‌ಇಒಸಿ ದತ್ತಾಂಶದ ಪ್ರಕಾರ, ಮಂಡಿ ಮಾನ್ಸೂನ್ ವಿಪತ್ತಿನ 'ಕೇಂದ್ರಬಿಂದು'ವಾಗಿದೆ. 'ತುನಾಗ್, ಕರ್ಸೋಗ್ ಮತ್ತು ಗೋಹರ್ ಉಪವಿಭಾಗಗಳ ಹಲವಾರು ಪ್ರದೇಶಗಳಲ್ಲಿ ಸಂಭವಿಸಿದ ಭಾರೀ ಮೇಘಸ್ಫೋಟದಿಂದ ಅಪಾರ ಆಸ್ತಿಪಾಸ್ತಿ ನಾಶವಾಗಿದೆ. ಹತ್ತಾರು ಮಂದಿ ಕಾಣೆಯಾಗಿದ್ದು ಹಲವರ ಸಾವು ಸಂಭವಿಸಿದೆ. ಸಿಯಾಂಜ್ (ಗೋಹರ್) ನಲ್ಲಿ ಎರಡು ಮನೆಗಳು ಕೊಚ್ಚಿ ಹೋಗಿದ್ದು, ಒಂಬತ್ತು ಜನರು ಕಾಣೆಯಾಗಿದ್ದಾರೆ. ಅವರಲ್ಲಿ ಇಬ್ಬರು ಶವಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕುಟ್ಟಿ ಬೈಪಾಸ್ (ಕರ್ಸೋಗ್) ನಲ್ಲಿ ಸಂಭವಿಸಿದ ಮೇಘಸ್ಫೋಟದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಇಬ್ಬರು ಕಾಣೆಯಾಗಿದ್ದಾರೆ ಎಂದು ದೃಢಪಡಿಸಲಾಗಿದೆ. ಆದರೆ ಏಳು ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಕರ್ಸೋಗ್, ಗೋಹರ್ ಮತ್ತು ಥುನಾಗ್ ಪೀಡಿತ ಪ್ರದೇಶಗಳಲ್ಲಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (ಎಸ್‌ಡಿಆರ್‌ಎಫ್) ತಂಡಗಳೊಂದಿಗೆ ಪ್ರಮುಖ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ವರದಿ ತಿಳಿಸಿದೆ.

ಬಲ್ಹಾ ಗ್ರಾಮದಲ್ಲಿ (ಹಮೀರ್‌ಪುರ) ಸಂಭವಿಸಿದ ಹಠಾತ್ ಪ್ರವಾಹವು ಬಿಯಾಸ್ ನದಿಯ ಬಳಿ ಹಲವಾರು ಕುಟುಂಬಗಳನ್ನು ಸಿಲುಕಿಸಿದೆ. ಪೊಲೀಸ್ ತಂಡಗಳು 30 ಕಾರ್ಮಿಕರು ಮತ್ತು 21 ಸ್ಥಳೀಯರು ಸೇರಿದಂತೆ ಒಟ್ಟು 51 ಜನರನ್ನು ರಕ್ಷಿಸಿವೆ ಎಂದು ಎಸ್‌ಇಒಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಪರಿಹಾರ ಕಾರ್ಯಾಚರಣೆಗಳು ಭರದಿಂದ ಸಾಗಿವೆ. ತುರ್ತು ಆಶ್ರಯಗಳನ್ನು ಸ್ಥಾಪಿಸಲಾಗಿದೆ. ಟೆಂಟ್‌ಗಳು, ಕಂಬಳಿಗಳು ಮತ್ತು ಆಹಾರದಂತಹ ಅಗತ್ಯ ಸಾಮಗ್ರಿಗಳನ್ನು ವಿತರಿಸಲಾಗಿದ್ದು ಪರಿಹಾರ ನಿಧಿಗಳನ್ನು ವಿತರಿಸಲಾಗುತ್ತಿದೆ. ತ್ರಿಯಂಬಲದಲ್ಲಿ (ಸೆರ್ತಿ) ಧರ್ಮಪುರದ ಗ್ರಾಮದಲ್ಲಿ ಮೇಘಸ್ಫೋಟದಿಂದಾಗಿ ಜಾನುವಾರು ಮತ್ತು ಆಸ್ತಿಯನ್ನು ಕಳೆದುಕೊಂಡ 17 ಕುಟುಂಬಗಳಿಗೆ ನೆರವು ನೀಡಲಾಯಿತು. ಮಂಡಿಯಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳು ಎರಡೂ ಸಕ್ರಿಯವಾಗಿ ತೊಡಗಿಸಿಕೊಂಡಿವೆ ಎಂದು ಎಸ್‌ಇಒಸಿ ದೃಢಪಡಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ನಲ್ಲಿ 2 ವಾರ ಪೂರೈಸಿದ ಪ್ರತಿಭಟನೆ: ಸರ್ಕಾರಿ ಕಟ್ಟಡಗಳಿಗೆ ಬೆಂಕಿ, ಪ್ರತಿಭಟನಾಕಾರರಿಗೆ 'ಮರಣ ದಂಡನೆ' ಬೆದರಿಕೆ!

"Surely It's Time": ಕೊಹ್ಲಿ ನಿವೃತ್ತಿ ಬಗ್ಗೆ ದೊಡ್ಡ ಸಂದೇಶ ರವಾನಿಸಿದ ಉತ್ತಪ್ಪ!

'ಮನ್ರೇಗಾ ಬಚಾವೋ' ಸಂಗ್ರಾಮ: ಕಾಂಗ್ರೆಸ್ ಪಕ್ಷದಿಂದ ದೇಶಾದ್ಯಂತ 45 ದಿನಗಳ ಹೋರಾಟ ಆರಂಭ!

ಮಹಾರಾಷ್ಟ್ರದಲ್ಲಿ ಸಿಎಂ, ಡಿಸಿಎಂ ಮುಸುಕಿನ ಗುದ್ದಾಟ: ಅಜಿತ್ ಪವಾರ್ ವಿರುದ್ಧ ಫಡ್ನವೀಸ್ ಕಿಡಿ!

ಭಾಷಾ ಮಸೂದೆ ವಿರೋಧಿಸಿ ಸಿದ್ದರಾಮಯ್ಯ ಪತ್ರ: ಕೇರಳ ಸಿಎಂ ಸ್ಪಷ್ಟೀಕರಣ; ಪಿಣರಾಯಿ ವಿಜಯನ್ ಹೇಳಿದ್ದೇನು?

SCROLL FOR NEXT