ನಾಗ್ಪುರ ಪೊಲೀಸರು 
ದೇಶ

Gangsters Fielding: ಗ್ಯಾಂಗ್ ಲೀಡರ್ ಪತ್ನಿಯೊಂದಿಗೇ ಅಕ್ರಮ ಸಂಬಂಧ, ತಮ್ಮದೇ ಸದಸ್ಯನ ಹತ್ಯೆಗೆ 40 ಮಂದಿಯ ಸ್ಕೆಚ್!

ನಾಗ್ಪುರದ ನಟೋರಿಯಸ್ ಇಪ್ಪಾ ಗ್ಯಾಂಗ್‌ನ ಬರೊಬ್ಬರಿ 40 ಗ್ಯಾಂಗ್ ಸ್ಟರ್ ಗಳು ತನ್ನದೇ ಗ್ಯಾಂಗ್ ನ ಸದಸ್ಯನ ಮುಗಿಸಲು ನಾಗ್ಪುರದಲ್ಲಿ ಸ್ಕೆಚ್ ಹಾಕಿ ಕಾದುಕುಳಿತಿವೆ ಎನ್ನಲಾಗಿದೆ.

ನಾಗ್ಪುರ: ಮಹಾರಾಷ್ಟ್ರದ ನಾಗ್ಪುರದಲ್ಲಿ ದಿಢೀರ್ ಆತಂಕ ಸೃಷ್ಟಿಯಾಗಿದ್ದು ಜಿಲ್ಲೆಯ ನಟೋರಿಯಸ್ ಗ್ಯಾಂಗ್ ನ ಸದಸ್ಯರು ತಮ್ಮದೇ ಗ್ಯಾಂಗ್ ಸದಸ್ಯನಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.

ಹೌದು.. ವಿಲಕ್ಷಣವಾದ್ರೂ ಇದು ಸತ್ಯ. ನಾಗ್ಪುರದ ನಟೋರಿಯಸ್ ಇಪ್ಪಾ ಗ್ಯಾಂಗ್‌ನ ಬರೊಬ್ಬರಿ 40 ಗ್ಯಾಂಗ್ ಸ್ಟರ್ ಗಳು ತನ್ನದೇ ಗ್ಯಾಂಗ್ ನ ಸದಸ್ಯನ ಮುಗಿಸಲು ನಾಗ್ಪುರದಲ್ಲಿ ಸ್ಕೆಚ್ ಹಾಕಿ ಕಾದುಕುಳಿತಿವೆ ಎನ್ನಲಾಗಿದೆ. ಆತ ಎಲ್ಲಿ ಸಿಕ್ಕಿದರೆ ಅಲ್ಲೇ ಆತನ ಕಥೆ ಮುಗಿಸಲು ಇಪ್ಪಾಗ್ಯಾಂಗ್ ಸಂಚು ನಡೆಸುತ್ತಿದೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

ನಾಗ್ಪುರದಲ್ಲಿ ಕೊಲೆ, ದರೋಡೆ, ಅತ್ಯಾಚಾರ ಪ್ರಕರಣಗಳಿಗೆ ವ್ಯಾಪಕ ಕುಖ್ಯಾತಿ ಪಡೆದಿರುವ ಇಪ್ಪಾ ಗ್ಯಾಂಗ್‌ ತನ್ನದ ಗ್ಯಾಂಗ್ ನ ಸದಸ್ಯ ಅರ್ಷದ್‌ ಟೋಪಿ ಎಂಬಾತನನ್ನು ಮುಗಿಸಲು ಜಿಲ್ಲೆಯಲ್ಲಿ ತೀವ್ರ ಶೋಧ ನಡೆಸುತ್ತಿದೆ ಎಂದು ಹೇಳಲಾಗಿದೆ. ಸುಮಾರು 40 ಗ್ಯಾಂಗ್ ಸ್ಟರ್ ಗಳ ತಂಡ ಅರ್ಷದ್‌ ಟೋಪಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದೆ.

ಗ್ಯಾಂಗ್ ಲೀಡರ್ ಪತ್ನಿಯೊಂದಿಗೇ ಅಕ್ರಮ ಸಂಬಂಧ

ಇನ್ನು ಈ ಅರ್ಷದ್‌ ಟೋಪಿ ಎಂಬಾತ ಎಂಥಹ ಖತರ್ನಾಕ್ ವ್ಯಕ್ತಿಎಂದರೆ ತನ್ನದೇ ಗ್ಯಾಂಗ್ ನ ಲೀಡರ್ ಪತ್ನಿಯೊಂದಿಗೆ ಈತ ಅಕ್ರಮ ಸಂಬಂಧ ಹೊಂದಿದ್ದ ಎಂದು ಹೇಳಲಾಗಿದೆ. ಗ್ಯಾಂಗ್ ಲೀಡರ್ ಪತ್ನಿ ಜೊತೆಯ ಲವ್ವಿಡವ್ವಿ ನಡೆಸುತ್ತಿದ್ದ ಈ ಅರ್ಷದ್ ಟೋಪಿ ಆಕೆಯೊಂದಿಗೆ ಬೈಕ್ ನಲ್ಲಿ ಜಾಲಿ ರೈಡ್ ಗೆ ಹೋಗಿದ್ದಾಗ ನಡೆದ ದುರಂತದಲ್ಲಿ ಸಿಕ್ಕಿಬಿದ್ದಿದ್ದಾನೆ.

ಜಾಲಿ ರೈಡ್ ವೇಳೆ ಗ್ಯಾಂಗ್ ಲೀಡರ್ ಪತ್ನಿ ಸಾವು

ಈ ಇಪ್ಪಾ ಗ್ಯಾಂಗ್ ನ ಸದಸ್ಯನಾಗಿದ್ದ ಅರ್ಷದ್‌ ಟೋಪಿ ಗ್ಯಾಂಗ್ ಲೀಡರ್ ಪತ್ನಿಯೊಂದಿಗೆ ಯಾರಿಗೂ ತಿಳಿಯದಂತೆ ಬೈಕ್ ನಲ್ಲಿ ಗುರುವಾರ ಜಾಲಿ ರೈಡ್ ಗೆ ಹೋಗಿದ್ದನಂತೆ. ಈ ವೇಳೆ ಬೈಕ್ ಅಪಘಾತಕ್ಕೀಡಾಗಿದೆ. ಬೈಕ್ ಬುಲ್ಡೋಜರ್ ಢಿಕ್ಕಿಯಾದ ಪರಿಣಾಮ ಇಪ್ಪಾ ಗ್ಯಾಂಗ್ ಲೀಡರ್ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಅಪಘಾತದಲ್ಲಿ ಟೋಪಿಗೆ ಸಣ್ಣಪುಟ್ಟ ಗಾಯಗೊಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ ಮಹಿಳೆಗೆ ಗಂಭೀರ ಗಾಯಗಳಾಗಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದಳು. ಈ ವೇಳೆ ಕೊರಾಡಿ ಥರ್ಮಲ್ ಪ್ಲಾಂಟ್‌ನ ಗಸ್ತು ವಾಹನವು ಸ್ಥಳಕ್ಕೆ ಆಗಮಿಸಿ ಮಹಿಳೆಯನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಿತು, ಅಲ್ಲಿ ವೈದ್ಯರು ಚಿಕಿತ್ಸೆ ನೀಡಲು ನಿರಾಕರಿಸಿದ್ದರು.

ಕೂಡಲೇ ಆಕೆಯನ್ನು ಬೇರೊಂದು ಆಸ್ಪತ್ರೆ ಸೇರಿಸಲು ಅರ್ಷದ್ ಟೋಪಿ ಯತ್ನಿಸಿದ್ದಾನೆ. ಈ ವೇಳೆ ಖಾಸಗಿ ಆಸ್ಪತ್ರೆಗೆ ಆಕೆಯನ್ನು ಸೇರಿಸಲು ಯತ್ನಿಸಿದಾಗ ಆಸ್ಪತ್ರೆಯಲ್ಲಿ ಪೊಲೀಸ್ ಕೇಸ್ ದಾಖಲಿಸಿ ಬಳಿಕ ಚಿಕಿತ್ಸೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಈ ವೇಳೆ ಪೊಲೀಸ್ ಕೇಸ್ ಬೇಡ ಎಂದಾಗ ಆಸ್ಪತ್ರೆ ಸಿಬ್ಬಂದಿ ಚಿಕಿತ್ಸೆ ನಿರಾಕರಿಸಿದ್ದಾರೆ ಎನ್ನಲಾಗಿದೆ. ಬಳಿಕ ಅರ್ಷದ್ ಟೋಪಿ ಆ್ಯಂಬುಲೆನ್ಸ್ ಚಾಲಕನಿಗೆ ಹಣ ನೀಡಿ ಆಕೆಯನ್ನು ನಾಗ್ಪುರದ ಸರ್ಕಾರಿ ಆಸ್ಪತ್ರೆಗೆ (GMCH) ದಾಖಲಿಸಿದ್ದಾನೆ. ಆದರೆ ಅಷ್ಟು ಹೊತ್ತಿಗಾಗಲೇ ಆಕೆಯ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.

ಈ ಅಪಘಾತ ಮತ್ತು ಮಹಿಳೆ ಸಾವನ್ನಪ್ಪಿದ ಬಳಿಕ ಇವರಿಬ್ಬರ ಈ ಪ್ರೇಮ ಪ್ರಕರಣ ಗ್ಯಾಂಗ್‌ನ ಎದುರು ಬಯಲಾಗಿದೆ. ಅಲ್ಲದೇ GMCH ನ ಸಿಸಿಟಿವಿ ದೃಶ್ಯಗಳಲ್ಲಿ ಟೋಪಿ ಗಾಯಗೊಂಡ ಮಹಿಳೆಯೊಂದಿಗೆ ಆಸ್ಪತ್ರೆಯಲ್ಲಿರುವುದು ಕಂಡುಬಂದಿತ್ತು. ಹೀಗಾಗಿ ಕೂಡಲೇ ಗ್ಯಾಂಗ್ ಲೀಡರ್ ಅರ್ಷದ್ ಟೋಪಿ ವಿರುದ್ದ ಆಕ್ರೋಶಗೊಂಡಿದ್ದು ಆತನ ಮುಗಿಸಲು ಗ್ಯಾಂಗ್ ಸೂಚಿಸಿದ್ದಾನೆ. ಅದರಂತೆ ಗ್ಯಾಂಗ್ ನ ಸುಮಾರು 40 ಮಂದಿ ನಾಗ್ಪುರದಲ್ಲಿ ಈತನಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.

ರಕ್ಷಣೆ ಕೊಡಿ ಎಂದು ಪೊಲೀಸರ ಮೊರೆ ಹೋದ ಅರ್ಷದ್‌ ಟೋಪಿ

ಇದೀಗ 40 ಗ್ಯಾಂಗ್‌ಸ್ಟರ್‌ಗಳ ತಂಡ ಆತನ ಹತ್ಯೆಗೆ ಕತ್ತಿ ಮಸೆಯುತ್ತಾ ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿಯುತ್ತಲೇ ಎಚ್ಚೆತ್ತ ಅರ್ಷದ್ ಟೋಪಿ ರಕ್ಷಣೆ ನೀಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾನೆ. ಈ ಸಂಬಂಧ ನಾಗ್ಪುರ ಪೊಲೀಸ್ ವರಿಷ್ಠಾಧಿಕಾರಿಗಳ ಮುಂದೆ ಮನವಿ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಇತ್ತ ತನ್ನ ಜೀವಕ್ಕೆ ಅಪಾಯವಿದೆ ಎಂದು ಟೋಪಿ ರಕ್ಷಣೆಗಾಗಿ ಪಾರ್ಡಿಯಲ್ಲಿರುವ ಉಪ ಪೊಲೀಸ್ ಆಯುಕ್ತರ (ಡಿಸಿಪಿ) ಕಚೇರಿ ಮೆಟ್ಟಿಲೇರಿದ್ದಾನೆ. ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ, ಡಿಸಿಪಿ ಆತನನ್ನು ಕೊರಾಡಿ ಪೊಲೀಸ್ ಠಾಣೆಗೆ ಕಳುಹಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

SCROLL FOR NEXT