ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ 
ದೇಶ

Operation Sindoor: ಪಾಕಿಸ್ತಾನದ 9 ಉಗ್ರರ ನೆಲೆಗಳ ಧ್ವಂಸಗೊಳಿಸಿದ್ದೇವೆ, ಒಂದು ಗುರಿಯೂ ವಿಫಲಗೊಂಡಿಲ್ಲ- ಅಜಿತ್ ದೋವಲ್

ಪಾಕಿಸ್ತಾನದ 9 ಭಯೋತ್ಪಾದಕ ನೆಲೆಗಳ ಹೊಡೆದುರುಳಿಸಲು ನಾವು ನಿರ್ಧರಿಸಿದ್ದೆವು. ನಮ್ಮ ಯಾವುದ ಗುರಿ ವಿಫಲಗೊಂಡಿಲ್ಲ.

ಚೆನ್ನೈ: ಆಪರೇಷನ್ ಸಿಂಧೂರ್ ಕಾರ್ಯಾಚರಣೆ ವೇಳೆ ಪಾಕಿಸ್ತಾನದ 9 ಉಗ್ರರ ನೆಲೆಗಳನ್ನು ಭಾರತೀಯ ಸೇನೆ ಧ್ವಂಸಗೊಳಿಸಿದೆ. ನಮ್ಮ ಒಂದೇ ಒಂದು ಗುರಿ ಕೂಡ ವಿಫಲಗೊಂಡಿಲ್ಲ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಶುಕ್ರವಾರ ಹೇಳಿದ್ದಾರೆ.

ಐಐಟಿ ಮದ್ರಾಸ್‌ನ 62ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅಜಿತ್ ದೋವಲ್ ಅವರು, ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ಶ್ಲಾಘಿಸಿದರು.

ಗಡಿಯಾಚೆಗಿನ ಬೆದರಿಕೆಗಳನ್ನು ತಟಸ್ಥಗೊಳಿಸುವಲ್ಲಿ ಭಾರತದ ಸಾಮರ್ಥ್ಯ ಮತ್ತು ತಾಂತ್ರಿಕ ಸಾಮರ್ಥ್ಯಗಳ ಬಗ್ಗೆ ನಮಗೆ ಹೆಮ್ಮೆಯಿದೆ. ಉಗ್ರರ ವಿರುದ್ಧ ನಾವು ನಡೆಸಿದ ಆಪರೇಷನ್ ಸಿಂಧೂರ್ ಮೇ 7 ರಂದು ಬೆಳಗಿನ ಜಾವ 1 ಗಂಟೆಯಿಂದ ಕೇವಲ 23 ನಿಮಿಷಗಳ ಕಾಲ ನಡೆಯಿತು. ಪಾಕಿಸ್ತಾನದ 9 ಭಯೋತ್ಪಾದಕ ನೆಲೆಗಳ ಹೊಡೆದುರುಳಿಸಲು ನಾವು ನಿರ್ಧರಿಸಿದ್ದೆವು. ನಮ್ಮ ಯಾವುದ ಗುರಿ ವಿಫಲಗೊಂಡಿಲ್ಲ. ನಮ್ಮ ಗುರಿಯನ್ನು ಹೊರತುಪಡಿಸಿ ಬೇರೆಲ್ಲಿಯೂ ನಾವು ದಾಳಿ ಮಾಡಿಲ್ಲ ಎಂದು ಹೇಳಿದರು.

ಭಾರತದ ಮೇಲೆ ದಾಳಿ ನಡೆಸಲಾಗಿದೆ ಎಂದು ಪಾಕಿಸ್ತಾನ ಹೇಳಿದೆ. ಆದರೆ, ಇದರಿಂದ ಭಾರತಕ್ಕೆ ಯಾವುದೇ ಹಾನಿಯಾಗಿಲ್ಲ. ಹಾನಿಯಾಗಿದೆ ಹೇಳುತ್ತಿರುವವರು ಯಾವುದೇ ಹಾನಿಯನ್ನು ತೋರಿಸುವ ಒಂದೇ ಒಂದು ಫೋಟೋ ತೋರಿಸಲಿ ಎಂದು ಸವಾಲು ಹಾಕಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Namma Metro ಗೆ 'ಬಸವ ಮೆಟ್ರೋ' ಎಂದು ಮರುನಾಮಕರಣ: ಸಿಎಂ ಸಿದ್ದರಾಮಯ್ಯ

'ಮತ್ತೆ ದುಸ್ಸಾಹಸಕ್ಕೆ ಇಳಿದರೆ' India ತನ್ನ ಯುದ್ಧ ವಿಮಾನಗಳ ಅವಶೇಷಗಳ ಅಡಿಯಲ್ಲಿ ಹೂತುಹೋಗುತ್ತದೆ: Pak ರಕ್ಷಣಾ ಸಚಿವ ಎಚ್ಚರಿಕೆ

BBK 12: 'ಸಿಂಪಥಿ ಗಿಟ್ಟಿಸಲು ಜಾಹ್ನವಿ ಆರೋಪ, ನನ್ನ ಕೆಲಸ ಹೋದಾಗ ಆಕೆ ವರ್ತನೆ ಬದಲು, ಬೇರೊಬ್ಬ ಗಂಡಸಿನೊಂದಿಗೆ..': ಪತಿ ಕಾರ್ತಿಕ್ ಕೆಂಡಾಮಂಡಲ!

ಚಾಮರಾಜನಗರ: Hindu ಯುವಕನ ಜೊತೆ Muslim ಯುವತಿ ಪರಾರಿ?: ಪೊಲೀಸ್ ಠಾಣೆ ಎದುರೇ ಚೂರಿ ಇರಿತ!

ಎಲ್ಲಾ ಬೋಯಿಂಗ್ 787 ವಿಮಾನಗಳ ವಿದ್ಯುತ್ ವ್ಯವಸ್ಥೆ ಪರಿಶೀಲಿಸಿ: DGCAಗೆ ಪೈಲಟ್‌ಗಳ ಮನವಿ

SCROLL FOR NEXT