AK 203 ರೈಫಲ್  
ದೇಶ

Make in India: 'ನಿಮಿಷಕ್ಕೆ 700 ಬುಲೆಟ್, 800 ಮೀಟರ್ ರೇಂಜ್'; AK-203 ವಿಧ್ವಂಸಕ ರೈಫಲ್ Amethi ಯಲ್ಲಿ ಸಿದ್ಧ!

ಭಾರತೀಯ ಸಶಸ್ತ್ರ ಪಡೆ (Indian Army)ಗಳ ಕೈಗಳನ್ನು ಬಲಪಡಿಸುವ ಉದ್ದೇಶದಿಂದ ಸ್ವದೇಶದಲ್ಲೇ AK 203 ರೈಫಲ್ ಗಳನ್ನು ತಯಾರಿಸಲಾಗುತ್ತಿದ್ದು ಆ ಮೂಲಕ ಭಾರತೀಯ ಸೇನೆ AK-203 ಅಸಾಲ್ಟ್ ರೈಫಲ್‌ಗಳ ಹೊಸ ಬ್ಯಾಚ್ ಪಡೆಯಲು ಸಜ್ಜಾಗಿವೆ.

ಅಮೇಥಿ: ಮಹತ್ವದ ಬೆಳವಣಿಗೆಯಲ್ಲಿ ಭಾರತ ಸರ್ಕಾರದ 'ಆತ್ಮ ನಿರ್ಭರ ಭಾರತ' ಕನಸಿಗೆ ಬೆಂಬಲ ಎಂಬಂತೆ ಭಾರತೀಯ ಸೇನೆ (Indian Army)ಗೆ ನೀಡಲಾಗುವ Avtomat Kalashnikova 203 (AK 203) ರೈಫಲ್ ಗಳನ್ನು ಭಾರತದಲ್ಲೇ ಸಿದ್ಧಪಡಿಸಲಾಗುತ್ತಿದೆ.

ಹೌದು.. ಭಾರತೀಯ ಸಶಸ್ತ್ರ ಪಡೆ (Indian Army)ಗಳ ಕೈಗಳನ್ನು ಬಲಪಡಿಸುವ ಉದ್ದೇಶದಿಂದ ಸ್ವದೇಶದಲ್ಲೇ AK 203 ರೈಫಲ್ ಗಳನ್ನು ತಯಾರಿಸಲಾಗುತ್ತಿದ್ದು ಆ ಮೂಲಕ ಭಾರತೀಯ ಸೇನೆ AK-203 ಅಸಾಲ್ಟ್ ರೈಫಲ್‌ಗಳ ಹೊಸ ಬ್ಯಾಚ್ ಅನ್ನು ಪಡೆಯಲು ಸಜ್ಜಾಗಿವೆ.

ಇದು ಕಲಾಶ್ನಿಕೋವ್ ಸರಣಿಯ ಆಧುನೀಕೃತ ಆವೃತ್ತಿಯಾಗಿದ್ದು, ಇದು ಒಂದು ನಿಮಿಷದಲ್ಲಿ 700 ಸುತ್ತುಗಳವರೆಗೆ ಗುಂಡು ಹಾರಿಸಬಲ್ಲದು ಮತ್ತು 800 ಮೀಟರ್ ವ್ಯಾಪ್ತಿಯನ್ನು ಹೊಂದಿದೆ.

ಅಮೇಥಿಯಲ್ಲಿ ತಯಾರಿಕೆ

ಉತ್ತರ ಪ್ರದೇಶದ ಅಮೇಥಿಯಲ್ಲಿರುವ ಇಂಡೋ-ರಷ್ಯನ್ ರೈಫಲ್ಸ್ ಪ್ರೈವೇಟ್ ಲಿಮಿಟೆಡ್ (IRRPL) ಈ ರೈಫಲ್ ಗಳನ್ನು ಉತ್ಪಾದನೆ ಮಾಡುತ್ತಿವೆ.

ಭಾರತದಲ್ಲಿ 'ಶೇರ್' ಎಂದೇ ಹೆಸರಿಸಲಾದ AK-203 ನ ಸ್ಥಳೀಯ ಉತ್ಪಾದನೆಗಾಗಿ ಸ್ಥಾಪಿಸಲಾದ ಜಂಟಿ ಉದ್ಯಮ ಕಂಪನಿ ಇದಾಗಿದ್ದು, 5,200 ಕೋಟಿ ರೂ. ಒಪ್ಪಂದದಡಿಯಲ್ಲಿ ಕಂಪನಿಯು ಸಶಸ್ತ್ರ ಪಡೆಗಳಿಗೆ ಆರು ಲಕ್ಷಕ್ಕೂ ಹೆಚ್ಚು ರೈಫಲ್‌ಗಳನ್ನು ಪೂರೈಸಬೇಕಾಗಿದೆ.

IRRPL ಮುಖ್ಯಸ್ಥ ಮೇಜರ್ ಜನರಲ್ SK ಶರ್ಮಾ ಗುರುವಾರ, ಡಿಸೆಂಬರ್ 2030 ರೊಳಗೆ ವಿತರಣೆಯನ್ನು ಪೂರ್ಣಗೊಳಿಸಲು ಯೋಜಿಸಲಾಗಿದೆ ಎಂದು ಹೇಳಿದರು.

"ಇಲ್ಲಿಯವರೆಗೆ ಸುಮಾರು 48,000 ರೈಫಲ್‌ಗಳನ್ನು ತಲುಪಿಸಲಾಗಿದೆ. ಮುಂದಿನ ಎರಡು ಮೂರು ವಾರಗಳಲ್ಲಿ ಇನ್ನೂ 7,000 ರೈಫಲ್ ಗಳನ್ನು ಹಸ್ತಾಂತರಿಸಲಾಗುವುದು ಮತ್ತು ಈ ವರ್ಷದ ಡಿಸೆಂಬರ್ ವೇಳೆಗೆ 15,000 ಹೆಚ್ಚುವರಿ ರೈಫಲ್ ಗಳನ್ನು ಹಸ್ತಾಂತರಿಸಲಾಗುತ್ತದೆ" ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

2025ರ ವೇಳೆಗೆ ಶೇ.100ರಷ್ಟು ದೇಶೀ ನಿರ್ಮಾಣ

ಇದೇ ವೇಳೆ ಭಾರತದ ಉತ್ತರ ಪ್ರದೇಶದ ಅಮೇಥಿ ನಗರವು, ಭಾರತೀಯ ಸಶಸ್ತ್ರ ಪಡೆಗಳು ಬಳಸುವ ಆಧುನಿಕ ಆಕ್ರಮಣ ರೈಫಲ್ AK 203 ರೈಫಲ್‌ಗಳ ಉತ್ಪಾದನೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. 2025 ರ ಅಂತ್ಯದ ವೇಳೆಗೆ, ಭಾರತದಲ್ಲಿ ಈ ರೈಫಲ್‌ಗಳ ಉತ್ಪಾದನಾ ಪ್ರಕ್ರಿಯೆಯು 100% ರಷ್ಟು 203 ರೈಫಲ್‌ಗಳನ್ನು ಉತ್ಪಾದಿಸುತ್ತದೆ. ಇದರರ್ಥ AK 203 ಅನ್ನು ನಿರ್ಮಿಸಲು ಅಗತ್ಯವಿರುವ ಎಲ್ಲಾ ಘಟಕಗಳು, ವಸ್ತುಗಳು ಮತ್ತು ತಂತ್ರಜ್ಞಾನಗಳನ್ನು ವಿದೇಶಿ ಆಮದುಗಳನ್ನು ಅವಲಂಬಿಸದೆ ಭಾರತದೊಳಗಿಂದಲೇ ಪಡೆಯಲಾಗುತ್ತದೆ.

ಈ ಅಭಿವೃದ್ಧಿಯು ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆ (ಆತ್ಮನಿರ್ಭರ ಭಾರತ) ಕಡೆಗೆ ಒಂದು ಪ್ರಮುಖ ಹೆಜ್ಜೆಯಾಗಿದೆ. ಇದು ಸ್ಥಳೀಯ ಉದ್ಯಮವನ್ನು ಉತ್ತೇಜಿಸುತ್ತದೆ, ಉದ್ಯೋಗಗಳನ್ನು ಸೃಷ್ಟಿಸುತ್ತದೆ ಮತ್ತು ವಿದೇಶಿ ರಕ್ಷಣಾ ಉಪಕರಣಗಳ ಮೇಲಿನ ದೇಶದ ಅವಲಂಬನೆಯನ್ನು ಕಡಿಮೆ ಮಾಡುತ್ತದೆ.

"ಮೇಕ್ ಇನ್ ಇಂಡಿಯಾ" ಉಪಕ್ರಮಗಳನ್ನು ಬೆಂಬಲಿಸುವಾಗ, ದೇಶೀಯವಾಗಿ ಉತ್ಪಾದಿಸಲಾದ, ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ತನ್ನ ಮಿಲಿಟರಿ ಸಾಮರ್ಥ್ಯಗಳನ್ನು ಬಲಪಡಿಸಲು ಭಾರತದ ನಿರಂತರ ಪ್ರಯತ್ನಗಳನ್ನು ಈ ಯೋಜನೆಯು ಪ್ರತಿಬಿಂಬಿಸುತ್ತದೆ. ಸಂಪೂರ್ಣ ದೇಶೀಕರಣವು ಸಶಸ್ತ್ರ ಪಡೆಗಳಿಗೆ ಈ ನಿರ್ಣಾಯಕ ಶಸ್ತ್ರಾಸ್ತ್ರಗಳ ಸುರಕ್ಷಿತ ಮತ್ತು ಸ್ಥಿರವಾದ ಪೂರೈಕೆ ಮತ್ತು ನಿರ್ವಹಣೆಯನ್ನು ಖಚಿತಪಡಿಸುತ್ತದೆ ಎಂದು ಇಂಡೋ ರಷ್ಯನ್ ರೈಫಲ್ಸ್ ಪ್ರೈವೇಟ್ ಲಿಮಿಟೆಡ್ (IRRPL) ನ ಸಿಇಒ ಮತ್ತು ಎಂಡಿ ಮೇಜರ್ ಜನರಲ್ ಎಸ್.ಕೆ. ಶರ್ಮಾ ಹೇಳಿದರು.

AK-203 ವಿಧ್ವಂಸಕ Rifle

ಅಂದಹಾಗೆ AK-203 ರೈಫಲ್‌ಗಳು AK-47 ಮತ್ತು AK-56 ರೈಫಲ್‌ಗಳಿಗೆ ಹೋಲಿಸಿದರೆ ಗಮನಾರ್ಹವಾಗಿ ಹೆಚ್ಚು ಆತ್ಯಾಧುನಿಕವಾಗಿವೆ. ಅವು ಕಲಾಶ್ನಿಕೋವ್ ಸರಣಿಯ ಅತ್ಯಂತ ಮಾರಕ ರೈಫಲ್‌ಗಳಲ್ಲಿ ಒಂದಾಗಿದೆ. AK-203 ಭಾರತೀಯ ಸಣ್ಣ ಶಸ್ತ್ರಾಸ್ತ್ರ ವ್ಯವಸ್ಥೆ (INSAS) ರೈಫಲ್‌ಗಳನ್ನು ಬದಲಾಯಿಸಲಿದೆ, ಇವು ಮೂರು ದಶಕಗಳಿಗೂ ಹೆಚ್ಚು ಕಾಲ ಸೇವೆಯಲ್ಲಿದ್ದವು. ಅವುಗಳು 7.62x39 mm ಕಾರ್ಟ್ರಿಡ್ಜ್ ಅನ್ನು ಹೊಂದಿದ್ದರೆ, INSAS 5.56x45 mm ಕಾರ್ಟ್ರಿಡ್ಜ್ ಅನ್ನು ಹೊಂದಿತ್ತು.

ಈ AK-203 ರೈಫಲ್‌ಗಳಿಗೆ ಏಕಕಾಲದಲ್ಲಿ ಮೂವತ್ತು ಕಾರ್ಟ್ರಿಡ್ಜ್‌ಗಳನ್ನು ಅದರ ಮ್ಯಾಗಜೀನ್‌ನಲ್ಲಿ ಹಾಕಬಹುದು. ದಂಗೆ ನಿಗ್ರಹ ಮತ್ತು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಭಾರತೀಯ ಪಡೆಗಳ ಕಾರ್ಯಾಚರಣೆಯ ಪರಿಣಾಮಕಾರಿತ್ವವನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾದ ಈ ರೈಫಲ್ ಸುಮಾರು 3.8 ಕೆಜಿ ತೂಗುತ್ತದೆ. ಆದರೆ INSAS 4.15 ಕೆಜಿ ತೂಗುತ್ತದೆ. ಹೀಗಾಗಿ ತೂಕದ ವಿಚಾರದಲ್ಲೂ ಇದು ಹೆಚ್ಚು ಕಾಂಪ್ಯಾಕ್ಟ್ ಆಗಿದೆ ಎಂದು ಎಸ್ ಕೆ ಶರ್ಮಾ ಮಾಹಿತಿ ನೀಡಿದರು.

'ಶೇರ್' ಅಥವಾ ಎಕೆ 203 ರೈಫಲ್‌ಗಳು ಬಟ್‌ಸ್ಟಾಕ್ ಇಲ್ಲದೆ 705 ಮಿಮೀ ಉದ್ದವಿದ್ದರೆ, INSAS ರೈಫಲ್‌ಗಳು 960 ಮಿಮೀ ಉದ್ದವಿರುತ್ತವೆ. ನಿಯಂತ್ರಣ ರೇಖೆ ಮತ್ತು ವಾಸ್ತವ ನಿಯಂತ್ರಣ ರೇಖೆ ಸೇರಿದಂತೆ ಉತ್ತರ ಮತ್ತು ಪಶ್ಚಿಮ ಗಡಿಗಳಲ್ಲಿ ನಿಯೋಜಿಸಲಾದ ಸೈನಿಕರಿಗೆ ಅವು ಪ್ರಾಥಮಿಕ ಆಕ್ರಮಣ ರೈಫಲ್ ಆಗಲಿವೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪರಸ್ಪರ ನಂಬಿಕೆ, ಗೌರವದ ಆಧಾರದ ಮೇಲೆ ಸಂಬಂಧ ಮುಂದುವರಿಸಲು ಬದ್ಧ: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಪ್ರಧಾನಿ ಮೋದಿ

SCO ಶೃಂಗಸಭೆ: ಮೋದಿ ಭೇಟಿ ಹಿನ್ನೆಲೆ, ಅಮೆರಿಕದ ಸುಂಕಾಸ್ತ್ರ ವಿರುದ್ಧ ರಷ್ಯಾ ಅಧ್ಯಕ್ಷ ಪುಟಿನ್ ಕಿಡಿ! ಹೇಳಿದ್ದು ಏನು?

Pepsi To McDonald: ಸುಂಕ ಸಂಘರ್ಷದ ನಡುವೆ ಅಮೆರಿಕದ ದೈತ್ಯ ಕಂಪನಿಗಳಿಗೆ ಭಾರತದಲ್ಲಿ #Boycott ಬಿಸಿ!

SCO ಶೃಂಗಸಭೆ: ಪುಟಿನ್ ಭೇಟಿಗೂ ಮುನ್ನ ಉಕ್ರೇನ್ ಜೊತೆ ಮೋದಿ ಮಾತು; ರಷ್ಯಾಕ್ಕೆ ಸೂಕ್ತ ಸಂದೇಶ ನೀಡಲು ಭಾರತ ಸಿದ್ಧ!

US President: ಅನಾರೋಗ್ಯದ ವದಂತಿ, ಕೆಲವು ದಿನಗಳಿಂದ ಸಾರ್ವಜನಿಕವಾಗಿ ಕಾಣಿಸದ ಡೊನಾಲ್ಡ್ ಟ್ರಂಪ್!

SCROLL FOR NEXT