ತಿರುವನಂತಪುರಂ: ಕಳೆದೊಂಂದು ತಿಂಗಳಿಂದ ಕೇರಳದ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ (Thiruvananthapuram International Airport) ಅನಾಥವಾಗಿ ನಿಂತಿದ್ದ ಬ್ರಿಟನ್ ರಾಯಲ್ ನೇವಿಯ F-35B Fighter Jet ವಿಮಾನ ಕೊನೆಗೂ ದುರಸ್ತಿಯಾಗಿ ಇಂದು ತನ್ನ ದೇಶದತ್ತ ಪಯಣ ಬೆಳೆಸಿದೆ.
ಹೌದು.. ಬ್ರಿಟಿಷ್ F-35B ಸ್ಟೆಲ್ತ್ ಫೈಟರ್ ಜೆಟ್ ಕೇರಳದ ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅನಿರೀಕ್ಷಿತ ಲ್ಯಾಂಡಿಂಗ್ ಮಾಡಿದ ಬರೊಬ್ಬರಿ ಐದು ವಾರಗಳ ನಂತರ ಕೊನೆಗೂ ಅದು ತನ್ನ ಬ್ರಿಟನ್ ದೇಶದತ್ತ ಟೇಕ್ ಆಫ್ ಆಗಿದ್ದು, ಇಂದು F-35B ಸ್ಟೆಲ್ತ್ ಫೈಟರ್ ಜೆಟ್ ಅನ್ನು ಬ್ರಿಟನ್ ನತ್ತ ಹಾರಿಸಲಾಗಿದೆ.
ಕಳೆದ ಜೂನ್ 14 ರಂದು ಬ್ರಿಟನ್ ನಿಂದ ಆಸ್ಟ್ರೇಲಿಯಾಕ್ಕೆ ಹಾರುತ್ತಿದ್ದಾಗ ಹೈಡ್ರಾಲಿಕ್ ವೈಫಲ್ಯದಿಂದಾಗಿ ಬ್ರಿಟನ್ ರಾಯಲ್ ನೇವಿಯ F-35B Fighter Jet ವಿಮಾನ ತುರ್ತು ಭೂಸ್ಪರ್ಶ ಮಾಡಿತ್ತು. ಬಳಿಕ ಶತ ಪ್ರಯತ್ನಗಳ ನಂತರವೂ ವಿಮಾನ ದುರಸ್ತಿಯಾಗಿರಲಿಲ್ಲ.
ಕೊನೆಗೆ ವಿಮಾನದ ದುರಸ್ತಿಗೆ ರಾಯಲ್ ನೇವಿ ತಂಡವು ಯುಕೆಯಿಂದ ಆಗಮಿಸಿತ್ತು. ಸತತ ದುರಸ್ತಿ ಬಳಿಕ ಇದೀಗ ಯುದ್ಧ ವಿಮಾನ ಹಾರಾಟಕ್ಕೆ ಸಿದ್ಧವಾಗಿದ್ದು, ನಿನ್ನೆ ಅದಕ್ಕೆ ಟೇಕ್ ಆಫ್ ಆಗಲು ಅಧಿಕಾರಿಗಳ ತಂಡ ಹಸಿರು ನಿಶಾನೆ ತೋರಿಸಿತ್ತು.
ಅಂದರಂತೆ ಇಂದು ಕೇರಳದ ತಿರುವನಂತಪುರ ವಿಮಾನ ನಿಲ್ದಾಣದಿಂದ ಬ್ರಿಟನ್ ನತ್ತ ಟೇಕ್ ಆಫ್ ಆಗಿದೆ.
ವಿಮಾನ ಭೂಸ್ಪರ್ಶ ಮಾಡಿದ ಬಳಿಕ ಇಲ್ಲಿ ವಿಮಾನದ ಆರಂಭಿಕ ಮೌಲ್ಯಮಾಪನಗಳನ್ನು ನಡೆಸಲಾಯಿತು. ಆದರೆ ನಂತರದ ಸಮಸ್ಯೆಯನ್ನು ಪರಿಹರಿಸುವ ಆರಂಭಿಕ ಪ್ರಯತ್ನಗಳು ವಿಫಲವಾದವು. ಹೀಗಾಗಿ ಜುಲೈ 2ರಂದು ರಾಯಲ್ ನೇವಿ ಯುನೈಟೆಡ್ ಕಿಂಗ್‌ಡಮ್‌ನ ವಿಶೇಷ ಎಂಜಿನಿಯರ್‌ಗಳ ತಂಡ ಆಗಮಿಸಿತ್ತು. ಅವರು ಸುಧಾರಿತ ಸಮಸ್ಯೆ ನಿರ್ಣಯ ಮತ್ತು ದುರಸ್ತಿ ಉಪಕರಣಗಳೊಂದಿಗೆ ಆಗಮಿಸಿ ವಿಮಾನದ ದುರಸ್ತಿ ಕಾರ್ಯದಲ್ಲಿ ತೊಡಗಿದ್ದರು.