ಪುಣೆ: ಪುಣೆಯ ಹಿಂಜೆವಾಡಿ ಐಟಿ ಪಾರ್ಕ್ ಬೆಂಗಳೂರು ಮತ್ತು ಹೈದರಾಬಾದ್‌ಗೆ 'ಹೊರಹೋಗುತ್ತಿದೆ' ಎಂದು ಹೇಳುವ ಮೂಲಕ ಮಹಾರಾಷ್ಟ್ರ ಮುಖ್ಯಮಂತ್ರಿ ಅಜಿತ್ ಪವರ್ ಆಕ್ರೋಶ ಹೊರಹಾಕಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪಿಂಪ್ರಿ ಚಿಂಚ್‌ವಾಡ್‌ನಲ್ಲಿ ಕಾಮಗಾರಿಗಳ ಪರಿಶೀಲನೆ ವೇಳೆ ಅಜಿತ್ ಪವಾರ್ ಹೀಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ಸರಪಂಚ್ ಗಣೇಶ್ ಜಂಭೂಲ್ಕರ್ ಅವರೊಂದಿಗೆ ಮಾತನಾಡುವಾಗ ಗರಂ ಆಗಿರುವ ಅಜಿತ್ ಪವಾರ್, "ನಾವು ಹಾಳಾಗಿದ್ದೇವೆ. ಹಿಂಜೆವಾಡಿಯ ಸಂಪೂರ್ಣ ಐಟಿ ಪಾರ್ಕ್ ಹೊರಹೋಗುತ್ತಿದೆ. ನನ್ನ ಪುಣೆಯಿಂದ ಮಹಾರಾಷ್ಟ್ರದಿಂದ ಬೆಂಗಳೂರು, ಹೈದರಾಬಾದ್‌ಗೆ ಹೋಗುತ್ತಿದೆ, ನಿಮಗೆ ಸ್ವಲ್ಪವೂ ಕಾಳಜಿ ಇಲ್ಲವೇ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಇಂದು ಬೆಳಂ ಬೆಳಗ್ಗೆ ಪಿಂಪ್ರಿ ಚಿಂಚ್ ವಾಡ್ ನ ಹಲವೆಡೆ ಕಾಮಗಾರಿ ಪರಿಶೀಲಿಸಿದ ಅಜಿತ್ ಪವಾರ್, ಮಾಧ್ಯಮಗಳ ಸಮ್ಮುಖದಲ್ಲಿಯೇ ಜಂಭೋಲ್ಕರ್ ಅವರನ್ನು ತರಾಟೆಗೆ ತೆಗೆದುಕೊಂಡರು.
ನಾವು ಹಾಳಾಗುತ್ತಿದ್ದೇವೆ. ಹಿಂಜೆವಾಡಿ ಐಟಿ ಪಾರ್ಕ್ ಸಂಪೂರ್ಣವಾಗಿ ಹೊರಗೆ ಹೋಗುತ್ತದೆ. ನನ್ನ ಕ್ಷೇತ್ರ ಪುಣೆ ತೊರೆದು ಬೆಂಗಳೂರು ಮತ್ತು ಹೈದರಾಬಾದ್ ಗೆ ಹೋಗುತ್ತಿದೆ. ಇವುಗಳ ಬಗ್ಗೆ ಸ್ವಲ್ವವೂ ಕಾಳಜಿ ಇಲ್ಲವೇ? ಬೆಳಗ್ಗೆ 6 ಗಂಟೆಗೆ ಯಾಕೆ ಇಲ್ಲಿಗೆ ಬರಬೇಕು? ನನಗೆ ಅರ್ಥವಾಗುತ್ತಿಲ್ಲ. ಬೇರೆ ಆಯ್ಕೆಗಳಿಲ್ಲ. ಆದರೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಹಿಂಜೆವಾಡಿ ರಾಜೀವ್ ಗಾಂಧಿ ಐಟಿ ಪಾರ್ಕ್ ಸುಮಾರು 2,800 ಎಕರೆ ಪ್ರದೇಶದಲ್ಲಿದ್ದು, ಇಲ್ಲಿ ಸುಮಾರು 800 ಕಂಪನಿಗಳಿವೆ.