ಭಾರತದ ಮುಖ್ಯ ನ್ಯಾಯಮೂರ್ತಿ ಬಿಆರ್. ಗವಾಯಿ 
ದೇಶ

ನಿವೃತ್ತಿ ನಂತರ ಯಾವುದೇ ಸರ್ಕಾರಿ ಹುದ್ದೆ ಸ್ವೀಕರಿಸಲ್ಲ: ಸಿಜೆಐ ಬಿಆರ್ ಗವಾಯಿ ಶಪಥ

ಭಾರತದ ಮುಖ್ಯ ನ್ಯಾಯಮೂರ್ತಿ (CJI) ಬಿ.ಆರ್. ಗವಾಯಿ (BR Gavai) ಅವರು ತಮ್ಮ ನಿವೃತ್ತಿಯ ನಂತರ ಯಾವುದೇ ಸರ್ಕಾರಿ ಹುದ್ದೆಯನ್ನು ಸ್ವೀಕರಿಸುವುದಿಲ್ಲ ಎಂದು ಘೋಷಿಸಿದರು.

ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ (CJI) ಬಿ.ಆರ್. ಗವಾಯಿ (BR Gavai) ಅವರು ತಮ್ಮ ನಿವೃತ್ತಿಯ ನಂತರ ಯಾವುದೇ ಸರ್ಕಾರಿ ಹುದ್ದೆಯನ್ನು ಸ್ವೀಕರಿಸುವುದಿಲ್ಲ ಎಂದು ಘೋಷಿಸಿದರು. ಬದಲಿಗೆ ಅವರು ಸಮಾಲೋಚನೆ ಮತ್ತು ಮಧ್ಯಸ್ಥಿಕೆ ಕ್ಷೇತ್ರದಲ್ಲಿ ಕೆಲಸ ಮಾಡುವುದಾಗಿ ಹೇಳಿದ್ದಾರೆ.

ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ದಿವಂಗತ ಟಿ.ಆರ್. ಗಿಲ್ಡಾ ಸ್ಮಾರಕ ಇ-ಗ್ರಂಥಾಲಯದ ಉದ್ಘಾಟನಾ ಸಮಾರಂಭದಲ್ಲಿ ಸಿಜೆಐ ಗವಾಯಿ ಈ ಹೇಳಿಕೆ ನೀಡಿದ್ದು 2025ರ ನವೆಂಬರ್ 23 ರಂದು ನಿವೃತ್ತರಾಗಲಿದ್ದಾರೆ. ಅಮರಾವತಿಯ ತಮ್ಮ ಹುಟ್ಟೂರು ದಾರಾಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನವೆಂಬರ್ 24ರ ನಂತರ ನಾನು ಯಾವುದೇ ಸರ್ಕಾರಿ ಹುದ್ದೆಯನ್ನು ಸ್ವೀಕರಿಸುವುದಿಲ್ಲ. ಆದರೆ ನಾನು ಸಮಾಲೋಚನೆ ಮತ್ತು ಮಧ್ಯಸ್ಥಿಕೆ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ಹೇಳಿದರು. ನಿವೃತ್ತಿಯ ನಂತರ ತಮ್ಮ ಹೆಚ್ಚಿನ ಸಮಯವನ್ನು ದಾರಾಪುರ, ಅಮರಾವತಿ ಮತ್ತು ನಾಗ್ಪುರದಲ್ಲಿ ಕಳೆಯಲು ಯೋಜಿಸುತ್ತಿರುವುದಾಗಿಯೂ ಅವರು ಹೇಳಿದರು.

ನ್ಯಾಯಾಂಗ ಸ್ವಾತಂತ್ರ್ಯದ ಬಗ್ಗೆ ಮಾತನಾಡಿದ ಅವರು, ನಿವೃತ್ತಿಯ ನಂತರ ಸರ್ಕಾರಿ ಹುದ್ದೆಯನ್ನು ಸ್ವೀಕರಿಸುವುದು ಅಥವಾ ಚುನಾವಣೆಗಳಲ್ಲಿ ಸ್ಪರ್ಧಿಸುವುದು ನೈತಿಕ ಕಳವಳಗಳನ್ನು ಹುಟ್ಟುಹಾಕುತ್ತದೆ. ಇದು ನ್ಯಾಯಾಂಗದ ಮೇಲಿನ ಸಾರ್ವಜನಿಕರ ವಿಶ್ವಾಸವನ್ನು ಕುಗ್ಗಿಸುತ್ತದೆ ಎಂದು ಸಿಜೆಐ ಗವಾಯಿ ಈ ಹಿಂದೆ ಹೇಳಿದ್ದರು. ನ್ಯಾಯಾಂಗದ ವಿಶ್ವಾಸಾರ್ಹತೆ ಮತ್ತು ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಲು ನಿವೃತ್ತಿಯ ನಂತರ ಯಾವುದೇ ಸರ್ಕಾರಿ ಹುದ್ದೆಗಳನ್ನು ಸ್ವೀಕರಿಸುವುದಿಲ್ಲ ಎಂದು ಅವರು ತಮ್ಮ ಅನೇಕ ಸಹೋದ್ಯೋಗಿಗಳ ಜೊತೆ ಸಾರ್ವಜನಿಕವಾಗಿ ಪ್ರತಿಜ್ಞೆ ಮಾಡಿದ್ದಾರೆ.

ದರ್ಯಾಪುರದಲ್ಲಿ ಹೊಸ ನ್ಯಾಯಾಲಯದ ಕಟ್ಟಡದ ಉದ್ಘಾಟನೆಯ ಸಂದರ್ಭದಲ್ಲಿ, ಸಿಜೆಐ ಗವಾಯಿ ನ್ಯಾಯಾಂಗ ರಚನೆಯ ವಿಕೇಂದ್ರೀಕರಣವನ್ನು ಪ್ರತಿಪಾದಿಸಿದರು. ಇದು ಜನರಿಗೆ ನ್ಯಾಯವನ್ನು ಸುಲಭವಾಗಿ ಪ್ರವೇಶಿಸುವಂತೆ ಮಾಡುತ್ತದೆ ಎಂದು ಹೇಳಿದರು. ನ್ಯಾಯಾಂಗ ಮೂಲಸೌಕರ್ಯ ಸಮಿತಿಯ ಮುಖ್ಯಸ್ಥರಾಗಿ, ಅಧಿಕಾರಶಾಹಿ ಅಡೆತಡೆಗಳು ಈ ಕಾರ್ಯಕ್ಕೆ ಅಡ್ಡಿಯಾಗುತ್ತಿದ್ದರೂ, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಹೊಸ ನ್ಯಾಯಾಲಯಗಳನ್ನು ಸ್ಥಾಪಿಸಲು ಒಂದು ಮಾದರಿಯನ್ನು ಸಿದ್ಧಪಡಿಸಿದ್ದೇನೆ ಎಂದು ಅವರು ಉಲ್ಲೇಖಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕರ್ನಾಟಕದಂತೆ ಹರ್ಯಾಣ ಚುನಾವಣೆಯಲ್ಲೂ ಮತಕಳ್ಳತನ: ಬಿಹಾರ ಎಲೆಕ್ಷನ್ ಹೊತ್ತಲ್ಲಿ ರಾಹುಲ್ ಗಾಂಧಿ ಗಂಭೀರ ಆರೋಪ- Video

ನ್ಯೂಯಾರ್ಕ್ ಅಂಗಳದಲ್ಲಿ ನಿಂತು Nehru ಮಾತು ಉಲ್ಲೇಖ: ಟ್ರಂಪ್​ಗೆ ಎಚ್ಚರಿಕೆ ಕೊಟ್ಟ ಜೊಹ್ರಾನ್ ಮಮ್ದಾನಿ

ಅಮೆರಿಕದ ಉಪಾಧ್ಯಕ್ಷ ತನ್ನ ಹೆಂಡತಿ ಕ್ರೈಸ್ತಳಾದರೆ ಚೆಂದ ಎಂದಿರುವುದು ಖಾಸಗಿ ವಿಷಯವಾ? (ತೆರೆದ ಕಿಟಕಿ)

ಅಕ್ರಮ ಸಂಬಂಧ: ಮಹಿಳೆಯ ಕಾಮದಾಹಕ್ಕೆ ಯುವಕ ಬಲಿ, ಕಾಟ ತಾಳಲಾರದೆ ಆತ್ಮಹತ್ಯೆ

ನ್ಯೂಯಾರ್ಕ್‌ ನಗರ: ಮೊದಲ ಮುಸ್ಲಿಂ ಮೇಯರ್ ಆಗಿ ಭಾರತೀಯ-ಅಮೆರಿಕನ್ ಜೋಹ್ರಾನ್ ಮಮ್ದಾನಿ ಆಯ್ಕೆ

SCROLL FOR NEXT