ಮಹಾರಾಷ್ಟ್ರದ ಅಮರಾವತಿಯಿಂದ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿ ವೈದ್ಯರು 10 ವರ್ಷದ ಬಾಲಕಿಯ ಹೊಟ್ಟೆಯಿಂದ ಅರ್ಧ ಕಿಲೋ ಕೂದಲಿನ ಉಂಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದಾರೆ. ಜೀರ್ಣಕ್ರಿಯೆ ಸರಿಯಾಗಿ ಆಗುತ್ತಿಲ್ಲ ಎಂದು ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಬಾಲಕಿಗೆ ಶಸ್ತ್ರಚಿಕಿತ್ಸೆ ನಡೆಸಿದ ಖಾಸಗಿ ಆಸ್ಪತ್ರೆಯ ಮಕ್ಕಳ ತಜ್ಞೆ ಡಾ. ಉಷಾ ಗಜ್ಭಿಯೆ ಅವರು, ಬಾಲಕಿಗೆ ದೀರ್ಘಕಾಲದವರೆಗೆ ಕೂದಲು ತಿನ್ನುವ ಅಭ್ಯಾಸವಿತ್ತು ಎಂದು ತಿಳಿಸಿದ್ದರು. ಕಳೆದ ಐದು-ಆರು ತಿಂಗಳಿನಿಂದ ವಾಂತಿ, ಹಸಿವಿನ ಕೊರತೆ ಮತ್ತು ತೂಕ ಕಡಿಮೆಯಾಗುತ್ತಿತ್ತು ಎಂಬ ಕಾರಣಕ್ಕೆ 20 ದಿನಗಳ ಹಿಂದೆ ಬಾಲಕಿಯನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ವೈದ್ಯಕೀಯ ಪರೀಕ್ಷೆ ಮತ್ತು ಸಮಾಲೋಚನೆಯ ನಂತರ, ಬಾಲಕಿ ಡಾ. ಗಜ್ಭಿಯೆಗೆ ತಾನು ಕೂದಲು ತಿನ್ನುತ್ತಿದ್ದೆ ಎಂದು ಹೇಳಿದರು. ವೈದ್ಯಕೀಯ ಪರೀಕ್ಷೆಯಲ್ಲಿ ಆಕೆಯ ಹೊಟ್ಟೆಯಲ್ಲಿ ಕೂದಲಿನ ಉಂಡೆ ರೂಪುಗೊಂಡಿದೆ ಎಂದು ವೈದ್ಯರು ಹೇಳಿದರು.
ನಾವು ಅವಳಿಗೆ ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಿದೆವು. ಕೆಲವು ದಿನಗಳ ಹಿಂದೆ ನಡೆಸಲಾದ ಶಸ್ತ್ರಚಿಕಿತ್ಸೆಯ ಸಮಯದಲ್ಲಿ, ಅವಳ ಹೊಟ್ಟೆಯಲ್ಲಿ ಸುಮಾರು ಅರ್ಧ ಕಿಲೋ ಕೂದಲಿನ ಉಂಡೆ ಕಂಡುಬಂದಿದೆ ಎಂದು ಹೇಳಿದರು. ಕೂದಲಿನ ಉಂಡೆಯನ್ನು ಯಶಸ್ವಿಯಾಗಿ ತೆಗೆದುಹಾಕಲಾಗಿದೆ ಎಂದು ಡಾ. ಗಜ್ಭಿಯೆ ಹೇಳಿದರು. ಬಾಲಕಿ ಈಗ ಸರಿಯಾಗಿ ತಿನ್ನಲು ಸಮರ್ಥಳಾಗಿದ್ದು ಬೇರೆ ಯಾವುದೇ ಸಮಸ್ಯೆಗಳಿಲ್ಲ. ಬಾಲಕಿಯನ್ನು ಶೀಘ್ರದಲ್ಲೇ ಡಿಸ್ಚಾರ್ಜ್ ಮಾಡಲಾಗುವುದು ಎಂದು ಹೇಳಿದರು.