ಸಾಂದರ್ಭಿಕ ಚಿತ್ರ 
ದೇಶ

ಛತ್ತೀಸ್‌ಗಢ: ಭದ್ರತಾ ಪಡೆಗಳ ಎನ್‌ಕೌಂಟರ್‌ಗೆ ಹಿರಿಯ ನಕ್ಸಲ್ ನಾಯಕ ಬಲಿ

ಗುಂಡಿನ ಚಕಮಕಿಯಲ್ಲಿ ಮಾವೋವಾದಿಗಳ ಕೇಂದ್ರ ಸಮಿತಿ ಸದಸ್ಯ ಗೌತಮ್ ಅಲಿಯಾಸ್ ಸುಧಾಕರ್ ನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಬಿಜಾಪುರ: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಗುರುವಾರ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ತಲೆಗೆ 40 ಲಕ್ಷ ರೂ. ಬಹುಮಾನ ಹೊಂದಿದ್ದ ಹಿರಿಯ ಮಾವೋವಾದಿ ನಾಯಕನನ್ನು ಹತ್ಯೆ ಮಾಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ, ಬಸ್ತಾರ್ ಪ್ರದೇಶದಲ್ಲಿ ಸಿಪಿಐ(ಮಾವೋವಾದಿ) ಪ್ರಧಾನ ಕಾರ್ಯದರ್ಶಿ ನಂಬಲ ಕೇಶವ ರಾವ್ ಅಲಿಯಾಸ್ ಬಸವರಾಜು ಅವರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿದ ಕೆಲವು ದಿನಗಳ ನಂತರ ನಡೆದ ಗುಂಡಿನ ಚಕಮಕಿಯಲ್ಲಿ ಮಾವೋವಾದಿಗಳ ಕೇಂದ್ರ ಸಮಿತಿ ಸದಸ್ಯ ಗೌತಮ್ ಅಲಿಯಾಸ್ ಸುಧಾಕರ್ ನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಇದು ನಕ್ಸಲರಿಗೆ ದೊಡ್ಡ ಹೊಡೆತ ನೀಡಿದೆ.

ಆದಾಗ್ಯೂ, ಸುಧಾಕರ್ ಅವರ ಸಾವನ್ನು ಇನ್ನೂ ಅಧಿಕೃತವಾಗಿ ಘೋಷಿಸಲಾಗಿಲ್ಲ.

ಹಿರಿಯ ನಕ್ಸಲ್ ನಾಯಕನ ಉಪಸ್ಥಿತಿಯ ಬಗ್ಗೆ ಖಚಿತ ಮಾಹಿತಿಯ ಆಧಾರದ ಮೇಲೆ ಭದ್ರತಾ ಸಿಬ್ಬಂದಿಯ ಜಂಟಿ ತಂಡ ಕಾರ್ಯಾಚರಣೆಗೆ ಹೊರಟಿದ್ದಾಗ ಇಂದ್ರಾವತಿ ರಾಷ್ಟ್ರೀಯ ಉದ್ಯಾನವನ ಪ್ರದೇಶದ ಕಾಡಿನಲ್ಲಿ ಗುಂಡಿನ ಚಕಮಕಿ ನಡೆಯಿತು ಎಂದು ಬಸ್ತಾರ್ ರೇಂಜ್‌ನಲ್ಲಿ ನಿಯೋಜಿಸಲಾದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ವಿಶೇಷ ಕಾರ್ಯಪಡೆ, ಜಿಲ್ಲಾ ಮೀಸಲು ಪಡೆ, ಛತ್ತೀಸ್‌ಗಢ ಪೊಲೀಸರ ಎರಡೂ ಘಟಕಗಳು ಮತ್ತು ಕೋಬ್ರಾ ಪಡೆಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು ಎಂದು ಅವರು ಹೇಳಿದ್ದಾರೆ.

ಮಾವೋವಾದಿ ನಾಯಕ ಸುಧಾಕರ್, ತೆಲಂಗಾಣ ರಾಜ್ಯ ಸಮಿತಿ ಸದಸ್ಯ ಬಂಡಿ ಪ್ರಕಾಶ್, ದಂಡಕಾರಣ್ಯ ವಿಶೇಷ ವಲಯ ಸಮಿತಿ(ಡಿಕೆಎಸ್‌ಜೆಡ್‌ಸಿ) ಸದಸ್ಯ ಪಪ್ಪಾ ರಾವ್ ಮತ್ತು ಇತರ ಕೆಲವು ನಕ್ಸಲರ ಉಪಸ್ಥಿತಿಯ ಬಗ್ಗೆ ಮಾಹಿತಿ ಪಡೆದ ನಂತರ ದಾಳಿ ನಡೆಸಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: ಫೈನಲ್ ನಲ್ಲಿ ಪಾಕಿಸ್ತಾನ ವಿರುದ್ಧ ಭಾರತಕ್ಕೆ ರೋಚಕ ಜಯ, ಮತ್ತೊಂದು ಚಿನ್ನದ ಪದಕ

Asian Games 2026: ಇತಿಹಾಸ ಬರೆದ ಮೈಸೂರಿನ ಪ್ರಣವಿ ಅರಸ್; ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ಗಾಲ್ಫರ್

ನೈಟ್ ಶಿಫ್ಟ್ ಮುಗಿಸಿ ಮನೆಗೆ ಮರಳುವಷ್ಟರಲ್ಲಿ ಎದುರಾಯ್ತು ಸಾವು: ತಿರುಪತಿಯ ಫಾರ್ಮಾ ಘಟಕದಲ್ಲಿ ಸಿಡಿದ ಬಾಯ್ಲರ್, ಐವರು ಕಾರ್ಮಿಕರು ಸಾವು!

CNG ರೀಫಿಲ್ ವೇಳೆ ಭೀಕರ ಸ್ಫೋಟ; NH-48ರಲ್ಲಿ ಭಯಾನಕ ಘಟನೆ, ಬದುಕಿದ್ದೇ ಅಚ್ಚರಿ! Video

ಏಷ್ಯನ್ ಗೇಮ್ಸ್ 2026 ಫೈನಲ್: ವೈಭವ್ ಸೂರ್ಯವಂಶಿ ಅಣಕಿಸಿದ ಪಾಕ್ ಸ್ಟಾರ್ ಆಟಗಾರ! ಏನು ಮಾಡಿದ್ರು ಗೊತ್ತಾ? Video