ಏರ್ ಇಂಡಿಯಾ ವಿಮಾನ ಪತನ 
ದೇಶ

Ahmedabad Plane Crash: ವಿಮಾನ ಅಪಘಾತಕ್ಕೂ ಮೊದಲೇ ಸುರಕ್ಷತಾ ಶಿಷ್ಟಾಚಾರಗಳ ಉಲ್ಲಂಘನೆ ಕುರಿತು Air Indiaಗೆ ಎಚ್ಚರಿಕೆ ನೀಡಿದ್ದ DGCA!

ಅಹಮದಾಬಾದ್‌ನಲ್ಲಿ ನಡೆದ ಮಾರಕ ವಿಮಾನ ಅಪಘಾತದ ನಂತರ, ಡಿಜಿಸಿಎ ಏರ್ ಇಂಡಿಯಾದ ಬಿಯೋಯಿಂಗ್ 787 ವಿಮಾನಗಳ ಕಣ್ಗಾವಲು ಹೆಚ್ಚಿಸಲು ಆದೇಶಿಸಿದೆ.

ನವದೆಹಲಿ: ಗುಜರಾತ್ ನ ಅಹ್ಮದಾಬಾದ್ ನಲ್ಲಿ ನಡೆದ ವಿಮಾನ ದುರಂತಕ್ಕೂ ಮೊದಲೇ ವಿಮಾನಯಾನ ಸಂಸ್ಥೆಯ ಸುರಕ್ಷತಾ ಶಿಷ್ಟಾಚಾರಗಳ ಉಲ್ಲಂಘನೆ ಕುರಿತು Air Indiaಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಎಚ್ಚರಿಕೆ ನೀಡಿದ್ದ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಹೌದು.. ತುರ್ತು ವ್ಯವಸ್ಥೆಗಳ ಭದ್ರತಾ ಪರಿಶೀಲನೆಗಳು ಬಾಕಿ ಉಳಿದಿದ್ದರೂ ಏರ್‌ಬಸ್ ವಿಮಾನಗಳು ಕಾರ್ಯಾಚರಣೆ ಮುಂದುವರಿಸಿದ ನಂತರ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಸುರಕ್ಷತಾ ಶಿಷ್ಟಾಚಾರ ಉಲ್ಲಂಘನೆಗಳ ಬಗ್ಗೆ ಏರ್ ಇಂಡಿಯಾಗೆ ಎಚ್ಚರಿಕೆ ನೀಡಿತ್ತು ಎಂದು ಸರ್ಕಾರಿ ದಾಖಲೆಗಳನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.

ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗುವಾಗ ಏರ್ ಇಂಡಿಯಾದ AI171 ವಿಮಾನ - ಬೋಯಿಂಗ್ 787 -8 ಡ್ರೀಮ್‌ಲೈನರ್ - ಅಪಘಾತಕ್ಕೀಡಾಗಿ, ವಿಮಾನದಲ್ಲಿದ್ದ 242 ಜನರಲ್ಲಿ ಒಬ್ಬರನ್ನು ಹೊರತುಪಡಿಸಿ ಎಲ್ಲರೂ ಸಾವನ್ನಪ್ಪಿದ್ದರು. ಅಷ್ಟ ಮಾತ್ರವಲ್ಲದೇ ವಿಮಾನ ಅಪ್ಪಳಿಸಿದ ಹಾಸ್ಟೆಲ್ ಕಟ್ಟಡದಲ್ಲೂ ಕನಿಷ್ಠ 28 ಜನರು ಸಾವನ್ನಪ್ಪಿದರು.

ಇದೀಗ ಈ ಅಪಘಾತಕ್ಕೂ ಮೊದಲೇ ಏರ್ ಇಂಡಿಯಾಗೆ ಡಿಜಿಸಿಎ ಸುರಕ್ಷತಾ ಶಿಷ್ಠಾಚಾರ ಉಲ್ಲಂಘನೆ ವಿಚಾರವಾಗಿ ಎಚ್ಚರಿಕೆ ನೀಡಿದ್ದ ವಿಚಾರ ಬಹಿರಂಗವಾಗಿದೆ. ರಾಯಿಟರ್ಸ್ ಉಲ್ಲೇಖಿಸಿದ ಡಿಜಿಸಿಎ ವರದಿಯ ಪ್ರಕಾರ, ಕಳೆದ ತಿಂಗಳು ಸ್ಪಾಟ್ ಚೆಕ್‌ಗಳ ಸಮಯದಲ್ಲಿ, ಎಸ್ಕೇಪ್ ಸ್ಲೈಡ್‌ಗಳ "ನಿರ್ಣಾಯಕ ತುರ್ತು ಉಪಕರಣಗಳ" ಮೇಲೆ ಕಡ್ಡಾಯ ತಪಾಸಣೆ ವಿಳಂಬವಾಗಿದ್ದರೂ ಮೂರು ಏರ್‌ಬಸ್ ವಿಮಾನಗಳನ್ನು ಏರ್ ಇಂಡಿಯಾ ಸಂಸ್ಥೆ ನಿರ್ವಹಿಸಲಾಗುತ್ತಿತ್ತು ಎಂದು ವಾಯುಯಾನ ಕಾವಲು ಸಂಸ್ಥೆ ಕಂಡುಹಿಡಿದಿದೆ.

ಒಂದು ಪ್ರಕರಣದಲ್ಲಿ, ತಪಾಸಣೆಗಳನ್ನು ನಡೆಸುವಲ್ಲಿ ಒಂದು ತಿಂಗಳಿಗಿಂತ ಹೆಚ್ಚು ವಿಳಂಬದ ಹೊರತಾಗಿಯೂ, ಏರ್‌ಬಸ್ A320 ಜೆಟ್ ದುಬೈ, ರಿಯಾದ್ ಮತ್ತು ಜೆಡ್ಡಾದಂತಹ ಅಂತಾರಾಷ್ಟ್ರೀಯ ತಾಣಗಳಿಗೆ ಹಾರಿರುವುದು ಕಂಡುಬಂದಿದೆ.

ದೇಶೀಯ ಮಾರ್ಗಗಳಲ್ಲಿ ಬಳಸಲಾದ ಏರ್‌ಬಸ್ A319 ಸೇರಿದಂತೆ ಮತ್ತೊಂದು ಪ್ರಕರಣದಲ್ಲಿ, ತಪಾಸಣೆಗಳು ಮೂರು ತಿಂಗಳಿಗಿಂತ ಹೆಚ್ಚು ವಿಳಂಬವಾಗಿರುವುದು ಕಂಡುಬಂದರೆ, ಮೂರನೇ ಮತ್ತೊಂದು ಪ್ರಕರಣದಲ್ಲಿ ಎರಡು ದಿನಗಳ ವಿಳಂಬದ ತಪಾಸಣೆ ಕಂಡುಬಂದಿದೆ ಎನ್ನಲಾಗಿದೆ.

"ಮೇಲಿನ ಪ್ರಕರಣಗಳು ವಿಮಾನಗಳು ಅವಧಿ ಮೀರಿದ ಅಥವಾ ಪರಿಶೀಲಿಸದ ತುರ್ತು ಉಪಕರಣಗಳೊಂದಿಗೆ ಕಾರ್ಯನಿರ್ವಹಿಸುತ್ತಿವೆ ಎಂದು ಸೂಚಿಸುತ್ತವೆ, ಇದು ಪ್ರಮಾಣಿತ ವಾಯು ಯೋಗ್ಯತೆ ಮತ್ತು ಸುರಕ್ಷತಾ ಅವಶ್ಯಕತೆಗಳ ಉಲ್ಲಂಘನೆಯಾಗಿದೆ" ಎಂದು ಡಿಜಿಸಿಎ ವರದಿ ಹೇಳಿದೆ.

ಡಿಜಿಸಿಎ ಎತ್ತಿದ ನ್ಯೂನತೆಗಳಿಗೆ ಏರ್ ಇಂಡಿಯಾ "ಸಕಾಲಿಕ ಅನುಸರಣೆ ಪ್ರತಿಕ್ರಿಯೆಗಳನ್ನು ಸಲ್ಲಿಸಲು ವಿಫಲವಾಗಿದೆ", ಇದು "ದುರ್ಬಲ ಕಾರ್ಯವಿಧಾನದ ನಿಯಂತ್ರಣ ಮತ್ತು ಮೇಲ್ವಿಚಾರಣೆಯನ್ನು ಮತ್ತಷ್ಟು ಸಾಬೀತುಪಡಿಸುತ್ತದೆ" ಎಂದು ವರದಿಯಲ್ಲಿ ಸೇರಿಸಲಾಗಿದೆ.

ಅಹಮದಾಬಾದ್‌ನಲ್ಲಿ ನಡೆದ ಮಾರಕ ವಿಮಾನ ಅಪಘಾತದ ನಂತರ, ಡಿಜಿಸಿಎ ಏರ್ ಇಂಡಿಯಾದ ಬಿಯೋಯಿಂಗ್ 787 ವಿಮಾನಗಳ ಕಣ್ಗಾವಲು ಹೆಚ್ಚಿಸಲು ಆದೇಶಿಸಿದೆ. ಆದಾಗ್ಯೂ, ಏರ್ ಇಂಡಿಯಾ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಕ್ಯಾಂಪ್‌ಬೆಲ್ ವಿಲ್ಸನ್, ಅಪಘಾತಕ್ಕೀಡಾದ ಬೋಯಿಂಗ್ 787-8 ಡ್ರೀಮ್‌ಲೈನರ್ ಅನ್ನು "ಉತ್ತಮವಾಗಿ ನಿರ್ವಹಿಸಲಾಗಿತ್ತು" ಮತ್ತು ಜೂನ್ 2023 ರಲ್ಲಿ ಪ್ರಮುಖ ಪರಿಶೀಲನೆಗೆ ಒಳಪಡಿಸಲಾಯಿತು ಮತ್ತು ಮುಂದಿನದನ್ನು ಈ ವರ್ಷದ ಡಿಸೆಂಬರ್‌ನಲ್ಲಿ ನಿಗದಿಪಡಿಸಲಾಗಿದೆ ಎಂದು ಹೇಳಿದ್ದಾರೆ.

AAIBಯಿಂದ ತನಿಖೆ

ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ದ ಬಹು-ಶಿಸ್ತಿನ ತಂಡವು ಅಪಘಾತದ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದೆ. ಏತನ್ಮಧ್ಯೆ, ಏರ್ ಇಂಡಿಯಾ ಶುಕ್ರವಾರ ನಿರ್ವಹಣೆ ಮತ್ತು ಕಾರ್ಯಾಚರಣೆಯ ಕಾರಣಗಳನ್ನು ಉಲ್ಲೇಖಿಸಿ ಹಲವಾರು ಅಂತರರಾಷ್ಟ್ರೀಯ ಮತ್ತು ದೇಶೀಯ ವಿಮಾನಗಳನ್ನು ರದ್ದುಗೊಳಿಸಿದೆ.

ದುಬೈ, ಚೆನ್ನೈ, ದೆಹಲಿ, ಮೆಲ್ಬೋರ್ನ್, ಪುಣೆ, ಅಹಮದಾಬಾದ್, ಹೈದರಾಬಾದ್ ಮತ್ತು ಮುಂಬೈ ನಡುವಿನ ಸೇವೆಗಳು ಬಾಧಿತ ವಿಮಾನಗಳಲ್ಲಿ ಸೇರಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಅಂಧ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಅಯೋಧ್ಯ ಧ್ವಜಾರೋಹಣ: ಸ್ವಿಚ್ ಅಥವಾ ಹಗ್ಗ ಬಳಸದ ಪ್ರಧಾನಿ, ಹೇಗೆ ನೆರವೇರಿಸಿದ್ರು?ಈ ಅದ್ಭುತ Video ನೋಡಿ..

ಬರವಣಿಗೆಯಲ್ಲಿ ಖುಷಿ ಕಂಡ ಪೊಲೀಸ್ ಅಧಿಕಾರಿ: 'ಬಸವಣ್ಣನ ವಚನ' ಗಳನ್ನು ಇಂಗ್ಲೀಷ್ ಗೆ ಅನುವಾದ ಮಾಡ್ತಿರೋ DYSP ಬಸವರಾಜ್ ಯಲಿಗಾರ್!

SCROLL FOR NEXT