ಸುರೇಶ್ ರಾಥೋಡ್-ಊರ್ಮಿಳಾ ಸನಾವರ್ 
ದೇಶ

ನಟಿ ಜೊತೆ BJP ಮಾಜಿ ಶಾಸಕ 2ನೇ ವಿವಾಹ Uttarakhand UCC ಗೆ ವಿರುದ್ಧ; ಪಕ್ಷದಿಂದ ಶೋಕಾಸ್ ನೋಟಿಸ್

ಮಾಜಿ ಬಿಜೆಪಿ ಶಾಸಕ ಸುರೇಶ್ ರಾಥೋಡ್ ಸಹರಾನ್‌ಪುರ ನಟಿ ಊರ್ಮಿಳಾ ಸನಾವರ್ ಅವರೊಂದಿಗಿನ ಎರಡನೇ ವಿವಾಹದ ಕುರಿತು ಪ್ರಶ್ನೆಗಳು ಎದ್ದಿವೆ. ಅಲ್ಲದೆ ಈ ಸಂಬಂಧ ಕಾಂಗ್ರೆಸ್ ಟ್ವೀಟ್ ಮಾಡಿ ಕಿಡಿಕಾರಿದೆ.

ಮಾಜಿ ಬಿಜೆಪಿ ಶಾಸಕ ಸುರೇಶ್ ರಾಥೋಡ್ ಸಹರಾನ್‌ಪುರ ನಟಿ ಊರ್ಮಿಳಾ ಸನಾವರ್ ಅವರೊಂದಿಗಿನ ಎರಡನೇ ವಿವಾಹದ ಕುರಿತು ಪ್ರಶ್ನೆಗಳು ಎದ್ದಿವೆ. ಅಲ್ಲದೆ ಈ ಸಂಬಂಧ ಕಾಂಗ್ರೆಸ್ ಟ್ವೀಟ್ ಮಾಡಿ ಕಿಡಿಕಾರಿದೆ. ಇದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ರಾಥೋಡ್, ಕಾಂಗ್ರೆಸ್ ವೀಡಿಯೊಗಳನ್ನು ಬಿಡುಗಡೆ ಮಾಡಲು ಬಯಸಿದರೆ, ಅದು ಎನ್‌ಡಿ ತಿವಾರಿ, ಹರಕ್ ಸಿಂಗ್ ರಾವತ್ ಮತ್ತು ಹರೀಶ್ ರಾವತ್ ಅವರಂತಹ ನಾಯಕರ ವಿಡಿಯೋವನ್ನು ಬಿಡುಗಡೆ ಮಾಡಬೇಕು ಎಂದು ಹೇಳಿದರು.

ಮಾಜಿ ಶಾಸಕ ಸುರೇಶ್ ರಾಥೋಡ್ ನಟಿ ಊರ್ಮಿಳಾ ಸನವರ್ ಅವರೊಂದಿಗಿನ ಸಂಬಂಧದ ಬಗ್ಗೆ ಹಲವು ತಿಂಗಳುಗಳಿಂದ ಮುಜುಗರವನ್ನು ಎದುರಿಸುತ್ತಿದ್ದರು. ದೀರ್ಘ ಆರೋಪಗಳು ಮತ್ತು ಮೊಕದ್ದಮೆಗಳ ನಂತರ, ಕಳೆದ ವಾರ ಸುರೇಶ್ ರಾಥೋಡ್ ಮತ್ತು ಊರ್ಮಿಳಾ ಸನವರ್ ಸಹರಾನ್‌ಪುರದಲ್ಲಿ ಮಾಧ್ಯಮಗಳ ಮುಂದೆ ಬಂದು ಊರ್ಮಿಳಾ ಸುರೇಶ್ ರಾಥೋಡ್ ಅವರು ತನ್ನನ್ನು ಪತ್ನಿಯಾಗಿ ಸ್ವೀಕರಿಸಿದ್ದಾರೆ ಎಂದು ಹೇಳಿಕೊಂಡಿದ್ದರು. ಈ ಸಂಬಂಧ ವಿರೋಧ ಪಕ್ಷ ಕಾಂಗ್ರೆಸ್ ಸರ್ಕಾರ ಮತ್ತು ಬಿಜೆಪಿಯ ಮೇಲೆ ದಾಳಿ ನಡೆಸಿತ್ತು. ಶಾಸಕರ ಎರಡನೇ ವಿವಾಹವು ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆಗೆ ವಿರುದ್ಧವಾಗಿದೆ ಎಂದು ಕರೆದಿದೆ.

ಅದೇ ಸಮಯದಲ್ಲಿ, ಬಿಜೆಪಿ ಸುರೇಶ್ ರಾಥೋಡ್ ಗೆ ನೋಟಿಸ್ ನೀಡಿ 7 ದಿನಗಳಲ್ಲಿ ಉತ್ತರ ನೀಡುವಂತೆ ಸೂಚಿಸಿದೆ. ಮಾಜಿ ಶಾಸಕ ಮತ್ತು ನಟಿ ಊರ್ಮಿಳಾ ಸನಾವರ್ ನಡುವಿನ ದೀರ್ಘಕಾಲದ ಸಂಬಂಧ ಸಾರ್ವಜನಿಕಗೊಂಡ ನಂತರ ಈ ವಿವಾದ ಹುಟ್ಟಿಕೊಂಡಿತು. ರಾಥೋಡ್ ಇತ್ತೀಚೆಗೆ ಸನಾವರ್ ಅವರನ್ನು ವಿವಾಹವಾಗಿದ್ದು ಅದರ ವಿಡಿಯೋಗಳು ಇದೀಗ ವೈರಲ್ ಆಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Cockroach Janta Partyಗೆ ಬಿಗ್ ಶಾಕ್: ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು, 57 ಮೆಟ್ರೋ ನಿಲ್ದಾಣಗಳು ಬಂದ್..!

ಕನ್ನಡಿಗರ ಆತ್ಮೀಯತೆ, ವಾತ್ಸಲ್ಯ, ದಯೆ ನಿಜಕ್ಕೂ ನನ್ನ....: ಬೆಂಗಳೂರು ಭೇಟಿ ಬಗ್ಗೆ ಅಭಿಜೀತ್ ದೀಪ್ಕೆ ಭಾವುಕ ಪೋಸ್ಟ್!

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಧಾರವಾಡ: ಕಾರು - ಕ್ಯಾಂಟರ್ ಮುಖಾಮುಖಿ ಡಿಕ್ಕಿ; ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವು!

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ