ನಿತೇಶ್ ರಾಣೆ  
ದೇಶ

'ಮೊಹಲ್ಲಾ'ಗಳಲ್ಲಿ ಭಗವದ್ಗೀತೆ ಪ್ರಚಾರದಿಂದ ಹಿಂದೂ ರಾಷ್ಟ್ರದ ಕಲ್ಪನೆ ಸಾಕಾರ: ಮಹಾರಾಷ್ಟ್ರ ಸಚಿವ ರಾಣೆ

ಭಗವದ್ಗೀತೆಯ ಬೋಧನೆಗಳು ಸಾಮರಸ್ಯ ಮತ್ತು ಚಿಂತನೆಗೆ ಹಚ್ಚುತ್ತವೆ. ಅದರ ಸಂದೇಶ ಮೂಲೆ ಮೂಲೆಗೂ ತಲುಪಬೇಕು

ಪುಣೆ: ಮುಸ್ಲಿಂರು ವಾಸಿಸುವ ಮೊಹಲ್ಲಾಗಳಲ್ಲಿ ಭಗವದ್ಗೀತೆ ಪ್ರಚಾರದಿಂದ ಹಿಂದೂ ರಾಷ್ಟ್ರದ ಕಲ್ಪನೆ ಸಾಕಾರಗೊಳ್ಳಲಿದೆ ಎಂದು ಮಹಾರಾಷ್ಟ್ರದ ಸಚಿವ ನಿತೇಶ್ ರಾಣೆ ಭಾನುವಾರ ಹೇಳಿದ್ದಾರೆ.

ಭಗವದ್ಗೀತೆ ಎಂದಿಗೂ ದ್ವೇಷವನ್ನು ಅಥವಾ (ಧಾರ್ಮಿಕ) ಮತಾಂತರಗಳನ್ನು ಬೋಧಿಸುವುದಿಲ್ಲ. ಅದರ ಬೋಧನೆಗಳು ಮೊಹಲ್ಲಾಗಳಿಗೆ ಹರಡಿದರೆ, ಅವರ ಆಲೋಚನೆಗಳು ಸಹ ರೂಪಾಂತರಗೊಳ್ಳುತ್ತವೆ. ಇದು ನಮ್ಮ ಹಿಂದೂ ರಾಷ್ಟ್ರವನ್ನು ಬಲಪಡಿಸುತ್ತದೆ ಎಂದಿದ್ದಾರೆ.

ಭಗವದ್ಗೀತೆಯ ಬೋಧನೆಗಳು ಸಾಮರಸ್ಯ ಮತ್ತು ಚಿಂತನೆಗೆ ಹಚ್ಚುತ್ತವೆ. ಅದರ ಸಂದೇಶ ಮೂಲೆ ಮೂಲೆಗೂ ತಲುಪಬೇಕು ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಶಾಲಾ ಪಠ್ಯಕ್ರಮದಲ್ಲಿ 1 ನೇ ತರಗತಿಯಿಂದ ಹಿಂದಿ ಸೇರ್ಪಡೆ ಕುರಿತ ವಿವಾದ ಮತ್ತು ವಿರೋಧ ಪಕ್ಷದ ಪ್ರತಿಭಟನೆ ನಡುವೆ"ಯಾವುದೇ ಭಾಷೆಯನ್ನು ಕಡ್ಡಾಯಗೊಳಿಸಲಾಗಿಲ್ಲ. ವಿದ್ಯಾರ್ಥಿಗಳು ಬಯಸಿದಲ್ಲಿ ಸಂಸ್ಕೃತವನ್ನು ಮೂರನೇ ಭಾಷೆಯಾಗಿ ಆರಿಸಿಕೊಳ್ಳಬಹುದು. ಗೀತೆ ರಚನೆಕಾರ ಜಾವೇದ್ ಅಖ್ತರ್, ನಟ ಅಮೀರ್ ಖಾನ್ ಅಥವಾ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮರಾಠಿ ಭಾಷೆಯಲ್ಲಿ ಮಾತನಾಡುವುದನ್ನು ನಾನು ಕೇಳಿಲ್ಲ ಎಂದರು.

ಶಾಲೆಗಳಲ್ಲಿ ಹಿಂದಿ ಹೇರಿಕೆ ವಿರುದ್ಧ ಜುಲೈ 5 ರಂದು ಶಿವಸೇನೆ (ಯುಬಿಟಿ) ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಜಂಟಿಯಾಗಿ ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ಘೋಷಿಸಿವೆ. ಬೆಹ್ರಂಪಾಡಾ ಅಥವಾ ಮೊಹಮ್ಮದ್ ಅಲಿ ರಸ್ತೆಯಂತಹ ಪ್ರದೇಶಗಳಲ್ಲಿ ಯಾಕೆ Rally ನಡೆಸಬಾರದು? ಇವು ಹಿಂದಿ ಮಾತನಾಡುವ ಸ್ಥಳಗಳಾಗಿವೆ. ಮರಾಠಿಯಲ್ಲಿ 'ಆಜಾನ್' ನೀಡುವ ದಿನ, ಭಾಷೆಯ ಬಗ್ಗೆ ನಿಜವಾದ ಗೌರವವಿದೆ ಎಂದು ನಾವು ತಿಳಿಯುತ್ತೇವೆ" ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಹಿಂದೂಗಳ ನಡುವೆ ಒಡಕು ಹೆಚ್ಚಿಸುವ ಬದಲು, ಮುಂಬೈನಲ್ಲಿ ದಶಕಗಳಿಂದ ವಾಸಿಸುತ್ತಿರುವ ಆದರೆ ಭಾಷೆಯನ್ನು ಸ್ವೀಕರಿಸದವರಿಗೆ ಮರಾಠಿ ಕಲಿಸಲು ಪ್ರಯತ್ನಿಸಬೇಕು ಎಂದು ರಾಣೆ ಸಲಹೆ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ, ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ 'ಸುಪ್ರೀಂ' ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

WPL 2026 auction: ಈ ಬಾರಿಯ 'ಮೋಸ್ಟ್ ಡಿಮ್ಯಾಂಡ್' ಆಟಗಾರ್ತಿ ಯಾರು?

SCROLL FOR NEXT