ಸಾಂದರ್ಭಿಕ ಚಿತ್ರ 
ದೇಶ

ವಿವಾಹಪೂರ್ವ ಲೈಂಗಿಕ ಸಂಬಂಧ: ಎರಡು ನವಜಾತ ಶಿಶುಗಳ ಕೊಂದ ಜೋಡಿಯ ಬಂಧನ

2020 ರಲ್ಲಿ ಈ ಜೋಡಿ ಫೇಸ್‌ಬುಕ್‌ನಲ್ಲಿ ಭೇಟಿಯಾಗಿತ್ತು. ಅನೀಷಾ ತಾಯಿಯ ವಿರೋಧದ ನಡುವೆಯೂ ಇಬ್ಬರು ಸಂಬಂಧದಲ್ಲಿದ್ದರು ಎಂದು ವರದಿಯಾಗಿದೆ.

ಕೇರಳ: ತ್ರಿಶೂರ್‌ನಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ನಡೆದ ಇಬ್ಬರು ನವಜಾತ ಶಿಶುಗಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಭಾನುವಾರ 23 ವರ್ಷದ ಮಹಿಳೆ ಮತ್ತು ಆಕೆಯ ಸ್ನೇಹಿತನನ್ನು ಬಂಧಿಸಿದ್ದಾರೆ.

ಶನಿವಾರ ರಾತ್ರಿ 25 ವರ್ಷದ ಭವಿನ್ ಎಂಬಾತ ತೀವ್ರ ಕುಡಿದ ಅಮಲಿನಲ್ಲಿ ಪುದುಕ್ಕಾಡ್ ಪೊಲೀಸ್ ಠಾಣೆಗೆ ಎರಡು ಶಿಶುಗಳ ಅಸ್ಥಿಪಂಜರದ ಅವಶೇಷಗಳನ್ನು ಹೊಂದಿರುವ ಚೀಲವನ್ನು ಹೊತ್ತುಕೊಂಡು ಹೋಗಿದ್ದ. ಅಂಬಲ್ಲೂರು ಮೂಲದ ಭವಿನ್ ಎಂಬಾತ ತನ್ನ ಗೆಳತಿ ಅನೀಷಾ ತಮ್ಮ ಶಿಶುಗಳನ್ನು ಕೊಂದಿದ್ದಾಳೆ ಎಂದು ಅಧಿಕಾರಿಗಳಿಗೆ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನವಜಾತ ಶಿಶುಗಳ ಅಸ್ಥಿ ಪಂಜರ ನೋಡಿ ಪೊಲೀಸ್ ಅಧಿಕಾರಿಗಳು ಆಘಾತಕ್ಕೊಳಗಾದರು. ಚಾಲಕುಡಿ ಡಿವೈಎಸ್‌ಪಿ ತಕ್ಷಣ ಕರೆ ಮಾಡಿ, ಗೆಳತಿ ಶಿಶುಗಳನ್ನು ಕೊಂದಿದ್ದಾಳೆ ಎಂಬ ಭವಿನ್ ಹೇಳಿಕೆಯನ್ನು ಪರಿಶೀಲಿಸಲು ಸೂಚಿಸಿದರು. ಪ್ರಕರಣದ ತನಿಖೆಗಾಗಿ ಮಧ್ಯರಾತ್ರಿಯಲ್ಲಿ ತಂಡವನ್ನು ರಚಿಸಲಾಯಿತು ಮತ್ತು ಶಿಶುಗಳ ತಾಯಿ ಅನೀಷಾ (23) ಅವರನ್ನು ಸಹ ವಶಕ್ಕೆ ಪಡೆಯಲಾಯಿತು ಎಂದು ಮಾಹಿತಿ ನೀಡಿದ್ದಾರೆ.

ವಿಚಾರಣೆಯ ಸಮಯದಲ್ಲಿ, ಅನೀಷಾ ತಮ್ಮ ಎರಡನೇ ಮಗುವನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನಂತರ, ಕೊಲೆ ಸೇರಿದಂತೆ ವಿವಿಧ ಆರೋಪಗಳ ಅಡಿಯಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. 2020 ರಲ್ಲಿ ಈ ಜೋಡಿ ಫೇಸ್‌ಬುಕ್‌ನಲ್ಲಿ ಭೇಟಿಯಾಗಿತ್ತು. ಅನೀಷಾ ತಾಯಿಯ ವಿರೋಧದ ನಡುವೆಯೂ ಇಬ್ಬರು ಸಂಬಂಧದಲ್ಲಿದ್ದರು ಎಂದು ವರದಿಯಾಗಿದೆ. ಅನೀಷಾ ಪ್ರಕಾರ ತಮ್ಮ ತಾಯಿ ಮತ್ತು ತಮ್ಮನಿಗೆ ಈ ಘಟನೆಗಳ ಬಗ್ಗೆ ತಿಳಿದಿರಲಿಲ್ಲ.

ನವೆಂಬರ್ 6, 2021 ರಂದು ಜನಿಸಿದ ತಮ್ಮ ಮೊದಲ ಮಗು ಕುತ್ತಿಗೆಗೆ ಹೊಕ್ಕುಳಬಳ್ಳಿ ಸುತ್ತಿಕೊಂಡು ಸತ್ತಿದೆ ಎಂದು ಅನೀಷಾ ಪೊಲೀಸರಿಗೆ ತಿಳಿಸಿದ್ದಾರೆ. ಅನೀಷಾ ಮಗುವನ್ನು ತನ್ನ ಮನೆಯ ಹಿಂದೆ ಹೂತುಹಾಕಿ, ನಂತರ ಆಚರಣೆಗಳನ್ನು ಮಾಡುವಂತೆ ಭವಿನ್‌ಗೆ ಕೈಚೀಲದಲ್ಲಿ ಅಸ್ಥಿಪಂಜರದ ಅವಶೇಷಗಳನ್ನು ಹಸ್ತಾಂತರಿಸಿದ್ದಾರೆ ಎಂದು ವರದಿಯಾಗಿದೆ.

ಅವರ ಎರಡನೇ ಮಗು ಆಗಸ್ಟ್ 29, 2024 ರಂದು ಜನಿಸಿತು. ನವಜಾತ ಶಿಶು ಅಳುತ್ತಿದ್ದಾಗ ಅನೀಷಾ ಮಗುವನ್ನು ಕತ್ತು ಹಿಸುಕಿ ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಭವಿನ್ ಅಂಬಲೂರಿನ ತನ್ನ ಮನೆಯ ಬಳಿ ಶವವನ್ನು ಹೂತುಹಾಕಿದ್ದಾರೆ ಎಂದು ಎಫ್‌ಐಆರ್ ತಿಳಿಸಿದೆ.

ಅನೀಶ್ ತಮ್ಮ ಸಂಬಂಧವನ್ನು ಕೊನೆಗೊಳಿಸಲು ಪ್ರಯತ್ನಿಸಿದರೆ, ಆಕೆಯ ಮೇಲೆ ಹಿಡಿತ ಸಾಧಿಸಲು ಭವಿನ್ ಅಸ್ಥಿಪಂಜರಗಳನ್ನು ಇಟ್ಟುಕೊಂಡಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣದ ತನಿಖೆಗಾಗಿ ಚಾಲಕುಡಿ ಡಿವೈಎಸ್ಪಿ ಬಿಜು ಕುಮಾರ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಅಸ್ಥಿಪಂಜರದ ಅವಶೇಷಗಳ ಮಾದರಿಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗುವುದು. ಶಿಶುಗಳು ಅನೀಷಾ ಮತ್ತು ಭವಿನ್ ಅವರದ್ದೇ ಎಂದು ಖಚಿತಪಡಿಸಿಕೊಳ್ಳಲು ಡಿಎನ್ಎ ಪರೀಕ್ಷೆಗಳನ್ನು ಮಾಡಲಾಗುತ್ತದೆ.

ಎರಡನೇ ಮಗುವನ್ನು ಹೂಳಲಾದ ಸ್ಥಳವನ್ನು ಪೊಲೀಸರು ಗುರುತಿಸಿದ್ದಾರೆ. ಘಟನೆಗಳು ಹಲವು ತಿಂಗಳ ಹಿಂದೆ ನಡೆದಿರುವುದರಿಂದ ಪ್ರಕರಣವು ಸವಾಲಿನದ್ದಾಗಿರುತ್ತದೆ. ಗರಿಷ್ಠ ಸಾಕ್ಷ್ಯಗಳನ್ನು ಸಂಗ್ರಹಿಸಲು ಪೊಲೀಸರು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಾರೆ ಎಂದು ಕೃಷ್ಣಕುಮಾರ್ ಹೇಳಿದರು.

ಮಗುವಿಗೆ ಉದ್ದೇಶಪೂರ್ವಕವಾಗಿ ವೈದ್ಯಕೀಯ ಆರೈಕೆಯನ್ನು ನಿರಾಕರಿಸಿ ಸಾವಿಗೆ ಕಾರಣವಾಗಿದ್ದಕ್ಕಾಗಿ ಪೊಲೀಸರು ಬಾಲ ನ್ಯಾಯ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ 315, 317, 318, 302, 201, ಮತ್ತು 34 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಭವಿನ್ ತಾಂತ್ರಿಕ ಶಿಕ್ಷಣದಲ್ಲಿ ಡಿಪ್ಲೊಮಾ ಪಡೆದಿದ್ದರೆ, ಅನೀಷಾ ಲ್ಯಾಬ್ ಟೆಕ್ನಿಷಿಯನ್ ಕೋರ್ಸ್ ಅನ್ನು ಪೂರ್ಣಗೊಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಸಂಭಾಲ್ ದೇವಸ್ಥಾನದಿಂದ ಸಾಯಿಬಾಬಾ ವಿಗ್ರಹಕ್ಕೆ ಗೇಟ್ ಪಾಸ್! ಗಂಗಾ ನದಿಯಲ್ಲಿ ವಿಸರ್ಜನೆ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

SCROLL FOR NEXT