ಜಗ್ಗಿ ವಾಸುದೇವ್ 
ದೇಶ

ಇಶಾ ಫೌಂಡೇಶನ್ ವಿರುದ್ಧದ 'ಯೂಟ್ಯೂಬ್ ವಿಡಿಯೋ' ತೆಗೆಯಲು ದೆಹಲಿ ಹೈಕೋರ್ಟ್ ಆದೇಶ

"ಕ್ಲಿಕ್‌ಬೈಟ್" ಟೈಟಲ್ ನ ಯೂಟ್ಯೂಬ್ ವೀಡಿಯೊದ ನಿರಂತರ ಪ್ರಸಾರವು ಟ್ರಸ್ಟ್‌ನ ಪ್ರತಿಷ್ಠೆಗೆ ಹಾನಿ ಉಂಟುಮಾಡುವ ಸಾಧ್ಯತೆಯಿದೆ ಎಂದು ಹೇಳಿದ ನ್ಯಾಯಮೂರ್ತಿ ಸುಬ್ರಮೋನಿಯಂ ಪ್ರಸಾದ್, ಸಿಂಗ್ ಅವರ ಆರೋಪಗಳನ್ನು ಮತ್ತಷ್ಟು ಪ್ರಕಟಿಸದಂತೆ ನಿರ್ಬಂಧಿಸಿದರು.

ನವದೆಹಲಿ: ಸುದ್ಗುರು ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಶನ್ ವಿರುದ್ಧ ಯೂಟ್ಯೂಬರ್ ಶ್ಯಾಮ್ ಮೀರಾ ಸಿಂಗ್ ಅಪ್ ಲೋಡ್ ಮಾಡಿರುವ ವಿಡಿಯೋಗಳು ಹಾಗೂ ಅದರ ಕಂಟೆಂಟ್ ತೆಗೆದುಹಾಕುವಂತೆ ಹೈಕೋರ್ಟ್ ಬುಧವಾರ ಆದೇಶಿಸಿದೆ.

"ಕ್ಲಿಕ್‌ಬೈಟ್" ಟೈಟಲ್ ನ ಯೂಟ್ಯೂಬ್ ವೀಡಿಯೊದ ನಿರಂತರ ಪ್ರಸಾರವು ಟ್ರಸ್ಟ್‌ನ ಪ್ರತಿಷ್ಠೆಗೆ ಹಾನಿ ಉಂಟುಮಾಡುವ ಸಾಧ್ಯತೆಯಿದೆ ಎಂದು ಹೇಳಿದ ನ್ಯಾಯಮೂರ್ತಿ ಸುಬ್ರಮೋನಿಯಂ ಪ್ರಸಾದ್, ಸಿಂಗ್ ಅವರ ಆರೋಪಗಳನ್ನು ಮತ್ತಷ್ಟು ಪ್ರಕಟಿಸದಂತೆ ನಿರ್ಬಂಧಿಸಿದರು.

ಇಶಾ ಫೌಂಡೇಶನ್ ವಿರುದ್ಧದ ಮಾನನಷ್ಟ ಉಂಟು ಮಾಡುವ ಕಂಟೆಂಟ್ ಹೊಂದಿರುವ ಎಲ್ಲಾ ವಿಡಿಯೋಗಳನ್ನು ತೆಗೆದುಹಾಕುವಂತೆ X, ಮೆಟಾ ಮತ್ತು ಗೂಗಲ್‌ಗೆ ನಿರ್ದೇಶಿಸಿ ನ್ಯಾಯಾಧೀಶರು ಮಧ್ಯಂತರ ಆದೇಶ ಪ್ರಕಟಿಸಿದರು.

ಸಂಪೂರ್ಣವಾಗಿ ಪರಿಶೀಲಿಸಿದ ಅಂಶದ ಆಧಾರದ ಮೇಲೆ ಸಿಂಗ್ ವಿಡಿಯೋ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಮೇ ತಿಂಗಳ ಮುಂದಿನ ವಿಚಾರಣೆಯ ತನಕ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳುವುದನ್ನು ಸಾರ್ವಜನಿಕರಿಗೆ ನಿರ್ಬಂಧಿಸಲಾಗಿದೆ ಎಂದು ನ್ಯಾಯಾಧೀಶರು ಹೇಳಿದರು.

ಸದ್ಗುರು ಬಹಿರಂಗ: ಜಗ್ಗಿ ವಾಸುದೇವ್ ಅವರ ಆಶ್ರಮದಲ್ಲಿ ಏನಾಗುತ್ತಿದೆ? ಎಂಬ ವಿಡಿಯೋ ಈಗಾಗಲೇ 9 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಪಡೆದುಕೊಂಡಿದ್ದು, 13,500 ಕ್ಕೂ ಹೆಚ್ಚು ಕಾಮೆಂಟ್‌ ಬಂದಿದೆ. ಮಾನಹಾನಿಕರ ವೀಡಿಯೊ ಮತ್ತು ಅದರ ಎಲ್ಲಾ ಕಂಟೆಂಟ್ ತೆಗೆದುಹಾಕಲು ನ್ಯಾಯಾಲಯವು ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಆದೇಶಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಅದೇಶ ಪಾಲನೆ: ಗುರುವಾರ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ; Video

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

Mysuru Rain: ಸಿಡಿಲು ಬಡಿದು ಬೆಂಗಳೂರಿನ ಟೆಕ್ಕಿ ಸಾವು

ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಹೆಸರು ಬಹುತೇಕ ಫೈನಲ್? ಕಾಂಗ್ರೆಸ್‌ನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ..!

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

SCROLL FOR NEXT