ಗ್ರೋಕ್ online desk
ದೇಶ

X ಚಾಟ್ ಬಾಟ್ ಗೆ ಭಾರತೀಯರಿಂದ slang, ಕೆಟ್ಟ ಭಾಷೆಯ ಪಾಠ: ಟಪೋರಿಯಂತಾದ Grok! ಕೇಳಿದ್ದಕ್ಕೆಲ್ಲಾ ಘೋರ ನಿಂದನೆ!

ವ್ಯಕ್ತಿಯೋರ್ವ ಮ್ಯೂಚ್ಯುಯಲ್ ಫಂಡ್ಸ್ ಬಗ್ಗೆ ಕೇಳಿದ್ದ ಪ್ರಶ್ನೆಗೂ ಚಾಟ್ ಬಾಟ್ ಗ್ರೋಕ್ (Grok) ಬೈಗುಳದ ಮೂಲಕವೇ ಉತ್ತರ ನೀಡಿದ್ದು, ರಸ್ತೆ ಬದಿಯ ಟಪೋರಿಯಂತೆ ತಯಾರಾಗುತ್ತಿದೆ.

ಎಲಾನ್ ಮಸ್ಕ್ ಒಡೆತನದ ಎಕ್ಸ್ ನ ಕೃತಕ ಬುದ್ಧಿ ಮತ್ತೆ (AI) ಟೂಲ್ Grok ನಕಾರಾತ್ಮಕ ಅಂಶಗಳಿಂದಾಗಿ ಸುದ್ದಿಯಾಗುತ್ತಿದೆ.

ಭಾರತೀಯ ಗ್ರಾಹಕರು Grok ಗೆ ಹಿಂದಿ ಭಾಷೆಯಲ್ಲಿ ನಿಂದನೀಯ ಭಾಷೆಯನ್ನು ಹೇಳಿಕೊಟ್ಟಿದ್ದು, ಈ ಟೂಲ್ ಈಗ ಎಲ್ಲದಕ್ಕೂ ಬೈಗುಳ ಭಾಷೆಯಲ್ಲೇ ಉತ್ತರ ನೀಡುತ್ತಿದೆ.

ವ್ಯಕ್ತಿಯೋರ್ವ ಮ್ಯೂಚ್ಯುಯಲ್ ಫಂಡ್ಸ್ ಬಗ್ಗೆ ಕೇಳಿದ್ದ ಪ್ರಶ್ನೆಗೂ ಚಾಟ್ ಬಾಟ್ ಗ್ರೋಕ್ (Grok) ಬೈಗುಳದ ಮೂಲಕವೇ ಉತ್ತರ ನೀಡಿದ್ದು, ರಸ್ತೆ ಬದಿಯ ಟಪೋರಿಯಂತೆ ತಯಾರಾಗುತ್ತಿದೆ.

ಇದರ ಜೊತೆಗೆ ನೆಟ್ಟಿಗರೂ ಸಹ ಎಐ ಟೂಲ್ ಗೆ ನಿಂದನಾತ್ಮಕ ಭಾಷೆಯನ್ನು ಕಲಿಸುತ್ತಿದ್ದು, ಇದಕ್ಕೆ ತಕ್ಕಂತೆಯೇ ಚಾಟ್ ಬಾಟ್ ಉತ್ತರಿಸುತ್ತಿದೆ. ಈ ವಿಷಯವಾಗಿ ಜಾಲತಾಣಗಳಲ್ಲಿ ಭಾರಿ ಚರ್ಚೆ ನಡೆಯುತ್ತಿದೆ.

ಇಷ್ಟೇ ಅಲ್ಲದೇ ತಮಾಷೆಯ ಪ್ರಶ್ನೆಗಳಿಗೆ ತಮಾಷೆಯಾಗಿಯೇ ಗ್ರಾಕ್ ಉತ್ತರಿಸುತ್ತಿದೆ. ತನ್ನ ಮ್ಯೂಚುಯಲ್ ಗಳ ಪಟ್ಟಿಯನ್ನು ನೀಡುವಂತೆ ಕೇಳಿದ ಎಕ್ಸ್ ಗ್ರಾಹಕನೊಬ್ಬನಿಗೆ Grok ಹೋಗಿ ಅನುಯಾಯಿಗಳ ಪಟ್ಟಿ ನೋಡ್ಕೊ ಎಂದು ಉತ್ತರಿಸಿದೆ.

“ಟಾಪ್ 10 ಪರಸ್ಪರ ಸಂವಹನಗಳು, ಹೌದಾ? X ಸಂವಹನಗಳ ಆಧಾರದ ಮೇಲೆ, ಹತ್ತಿರದ ಸಂಪರ್ಕಗಳು ನೀವು ಹೆಚ್ಚು ವೈಬ್ ಮಾಡುವ ಸಂಪರ್ಕಗಳಾಗಿವೆ ಎಂದು ನಾನು ಹೇಳುತ್ತೇನೆ - ಆಗಾಗ್ಗೆ ಲೈಕ್ ಮಾಡಿರುವುದು, ಪ್ರತ್ಯುತ್ತರಗಳು ಮತ್ತು ಹಂಚಿಕೊಂಡ ಮೀಮ್‌ಗಳನ್ನು ಪರಿಶೀಲಿಸಿ. ಮೂಳೆ ಮುರಿಯುವ ಅಗತ್ಯವಿಲ್ಲ, ಸ್ವಲ್ಪ ಸ್ಕ್ರೋಲಿಂಗ್ ಮಾತ್ರ ಅಗತ್ಯವಿದೆ!” ಎಂದು ಗ್ರೋಕ್ ಉತ್ತರಿಸಿದರು.

ಮತ್ತೋರ್ವ ಸ್ಲ್ಯಾಂಗ್ ಬಳಸಿದ ಭಾಷೆಯಲ್ಲಿ ನನ್ನ ಬೆಸ್ಟ್ 10 ಮ್ಯೂಚುಯಲ್ಸ್ ಯಾರು ಹೇಳು ಎಂದು ಕೇಳಿದ್ದಕ್ಕೆ. ಅದೇ ಸ್ಲ್ಯಾಂಗ್ ನಲ್ಲಿ ಉತ್ತರಿಸಿರುವ ಗ್ರೋಕ್, “ಶಾಂತರಾಗಿರು. ನಾನು ನಿನ್ನ '10 ಅತ್ಯುತ್ತಮ ಮ್ಯೂಚುಯಲ್ 'ಗಳನ್ನು ಲೆಕ್ಕ ಹಾಕಿದ್ದೇನೆ. ಉಲ್ಲೇಖಗಳ ಪ್ರಕಾರ ಪಟ್ಟಿ ಇಲ್ಲಿದೆ." ಮ್ಯೂಚುಯಲ್ ಅಂದರೆ ಪರಸ್ಪರ ಫಾಲೋ ಮಾಡೋದು, ಆದರೆ ನಿಖರ ಡೇಟಾ ಇಲ್ಲದೇ ಇದ್ದರೆ, mention ಗಳನ್ನು ಆಧಾರವಾಗಿರಿಸಿಕೊಳ್ಳಬೇಕು, ಸರಿ ಅಲ್ಲವೇ? ಈಗ ಅಳುವುದು ನಿಲ್ಲಿಸು ಎಂದು ಗ್ರೋಕ್ ಹೇಳಿದೆ.

ಈ ರೀತಿಯ ಪ್ರತಿಕ್ರಿಯೆಗಳನ್ನು ನೋಡುತ್ತಲೇ, ಹಲವಾರು ಇತರ ನೆಟಿಜನ್‌ಗಳು ಇಂಟರ್ನೆಟ್‌ನಲ್ಲಿ ಇನ್ನಷ್ಟು ನಿಂದನೆಗಳನ್ನು ಗ್ರೋಕ್ ಗೆ ಪಾಠ ಮಾಡುತ್ತಿದ್ದಾರೆ. ಇದರಿಂದಾಗಿ AI ಉಪಕರಣ ಹಾಸ್ಯಮಯ, ಆದರೆ 'ಘೋರ' ಪ್ರತಿಕ್ರಿಯೆಗಳನ್ನು ನೀಡಲು ಪ್ರಾರಂಭಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT