ಕುಡಿದ ಮತ್ತಿನಲ್ಲಿ ಶಾಲೆಗೆ ನುಗ್ಗಿದ ವ್ಯಕ್ತಿ online desk
ದೇಶ

ಕುಡಿದ ಮತ್ತಿನಲ್ಲಿ ಶಾಲೆಗೆ ನುಗ್ಗಿದ ವ್ಯಕ್ತಿ: ಶಿಕ್ಷಕಿಯರೊಂದಿಗೆ.. ವಿಡಿಯೋ ವೈರಲ್!

ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ. ಶಿವ ಕುಮಾರ್ ಎಂಬ ವ್ಯಕ್ತಿ ಮದ್ಯ ಸೇವಿಸಿ ಶಾಲೆಗೆ ನುಗ್ಗಿದ್ದಾನೆ. ತನ್ನ ಪ್ಯಾಂಟ್‌ನಲ್ಲಿ ಮದ್ಯದ ಬಾಟಲಿಯನ್ನು ಇಟ್ಟುಕೊಂಡು...

ಲಖನೌ: ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ಶಾಲೆಗೆ ನುಗ್ಗಿ ದಾಂಧಲೆ ನಡೆಸಿರುವ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗತೊಡಗಿದೆ.

ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ. ಶಿವ ಕುಮಾರ್ ಎಂಬ ವ್ಯಕ್ತಿ ಮದ್ಯ ಸೇವಿಸಿ ಶಾಲೆಗೆ ನುಗ್ಗಿದ್ದಾನೆ. ತನ್ನ ಪ್ಯಾಂಟ್‌ನಲ್ಲಿ ಮದ್ಯದ ಬಾಟಲಿಯನ್ನು ಇಟ್ಟುಕೊಂಡು ಶಾಲೆಯಲ್ಲಿ ದಾಂಧಲೆ ನಡೆಸಿದ್ದಾನೆ. ಶಾಲೆಯ ಬೆಂಚ್ ಮೇಲೆ ಕುಳಿತುಕೊಂಡ ಈ ವ್ಯಕ್ತಿ ಮಹಿಳಾ ಶಿಕ್ಷಕರೊಂದಿಗೆ ಅಸಭ್ಯವಾಗಿ ವರ್ತಿಸಿ, ಬೆದರಿಕೆ ಹಾಕಿದ್ದಾನೆ.

ಈ ವ್ಯಕ್ತಿಯ ಅಸಭ್ಯ ವರ್ತನೆಯನ್ನು ಮಹಿಳಾ ಶಿಕ್ಷಕಿಯೊಬ್ಬರು ಫೋನ್‌ನಲ್ಲಿ ರೆಕಾರ್ಡ್ ಮಾಡಿದ್ದಾರೆ. ತರಗತಿಯಲ್ಲಿದ್ದ ಓರ್ವ ಹುಡುಗ ಶಿವಕುಮಾರ್ ಗೆ ಹೊರಗೆ ಹೋಗುವಂತೆ ಹೇಳಿ ಗದರಿಸಲು ಪ್ರಯತ್ನಿಸಿದ್ದಾನೆ. ಆದರೆ ಆತ ತನ್ನ ಹುಚ್ಚಾಟವನ್ನು ಇನ್ನಷ್ಟು ಹೆಚ್ಚು ಮಾಡಿ ತನ್ನ ಶರ್ಟ್ ತೆಗೆದು ತರಗತಿಯಲ್ಲಿ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಅಲ್ಲದೇ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನುದ್ದೇಶಿಸಿ "ನಿಮ್ಮ ಕರ್ತವ್ಯದ ಸಮಯ ಮುಗಿದಿದೆ, ಇಲ್ಲಿಂದ ಹೊರಡಿ" ಎಂದು ಬೆದರಿಕೆ ಹಾಕಿದ್ದಾನೆ.

ಶಿಕ್ಷಕರು ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಶಿವಕುಮಾರ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT