ಭದ್ರತಾ ಪಡೆಗಳು 
ದೇಶ

ಪಹಲ್ಗಾಮ್ ಮುನ್ನಾ ಶ್ರೀನಗರದಲ್ಲಿ ಉಗ್ರರ ದಾಳಿ ಬಗ್ಗೆ Intel ಎಚ್ಚರಿಕೆ ನೀಡಿತ್ತು! ಆದ್ರೆ ಭದ್ರತಾ ಪಡೆಗಳು...

ಇಂಟೆಲ್ ಎಚ್ಚರಿಕೆ ಹಿನ್ನೆಲೆಯಲ್ಲಿ ಈ ಪ್ರದೇಶದಾದ್ಯಂತ ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು. ಶ್ರೀನಗರದ ಉನ್ನತ ಪೊಲೀಸ್ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ದಚಿಗಮ್, ನಿಶಾತ್ ಮತ್ತು ಪಕ್ಕದ ಪ್ರದೇಶಗಳ ಸುತ್ತಮುತ್ತ ಬಿಗಿ ಭದ್ರತೆ ಮಾಡಲಾಗಿತ್ತು.

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೂ ಕೆಲವು ದಿನಗಳ ಮುಂಚೆ ಗುಪ್ತಚರ ಸಂಸ್ಥೆಗಳು, ಶ್ರೀನಗರದ ಹೊರವಲಯದಲ್ಲಿರುವ ಜಬರ್ವಾನ್ ಶ್ರೇಣಿಯ ತಪ್ಪಲಿನಲ್ಲಿರುವ ಹೋಟೆಲ್‌ಗಳಲ್ಲಿ ತಂಗಿರುವ ಪ್ರವಾಸಿಗರನ್ನು ಗುರಿಯಾಗಿಸಿ ಸಂಭಾವ್ಯ ದಾಳಿ ಕುರಿತು ಮಾಹಿತಿ ನೀಡಿದ್ದವು ಎಂದು ಶನಿವಾರ ತಿಳಿದ ಅಧಿಕಾರಿಗಳು ತಿಳಿಸಿದ್ದಾರೆ.

ಇಂಟೆಲ್ ಎಚ್ಚರಿಕೆ ಹಿನ್ನೆಲೆಯಲ್ಲಿ ಈ ಪ್ರದೇಶದಾದ್ಯಂತ ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು. ಶ್ರೀನಗರದ ಉನ್ನತ ಪೊಲೀಸ್ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ದಚಿಗಮ್, ನಿಶಾತ್ ಮತ್ತು ಪಕ್ಕದ ಪ್ರದೇಶಗಳ ಸುತ್ತಮುತ್ತ ಬಿಗಿ ಭದ್ರತೆ ಮಾಡಲಾಗಿತ್ತು.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಗಂಗಾಂಗೀರ್, ಸೋನಾಮಾರ್ಗ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ವೈದ್ಯರು ಸೇರಿದಂತೆ ಏಳು ಜನರು ಸಾವನ್ನಪ್ಪಿದರು. ಈ ಪ್ರದೇಶವು ಶ್ರೀನಗರದ ಮೇಲಿರುವ ಜಬರ್ವಾನ್ ಶ್ರೇಣಿಯ ಇನ್ನೊಂದು ಬದಿಯಲ್ಲಿದೆ.

ಶೋಧ ಕಾರ್ಯಾಚರಣೆ ನಿಲ್ಲಿಸಿದ ಭದ್ರತಾ ಪಡೆಗಳು: ಎರಡು ವಾರಗಳ ಕಾರ್ಯಾಚರಣೆಯ ಹೊರತಾಗಿಯೂ, ಗುಪ್ತಚರ ಆಧಾರದ ಮೇಲೆ ಶ್ರೀನಗರದ ಹೊರವಲಯದಲ್ಲಿ ಭದ್ರತಾ ಪಡೆಗಳು ವ್ಯಾಪಕ ಶೋಧಗಳನ್ನು ನಡೆಸಿದವು, ಆದರೆ ಈ ಪ್ರಯತ್ನಗಳು ಯಾವುದೇ ಫಲ ನೀಡಲಿಲ್ಲ ಹಾಗಾಗಿ, ಏಪ್ರಿಲ್ 22 ರಂದು ಕಾರ್ಯಾಚರಣೆಯನ್ನು ನಿಲ್ಲಿಸಲಾಗಿತ್ತು. ಅಂದೇ ಉಗ್ರರು ಪಹಲ್ಗಾಮ್ ನಲ್ಲಿ ಗುಂಡಿನ ದಾಳಿ ನಡೆಸಿ 26 ಜನರನ್ನು ಬಲಿಪಡೆದರು.

ಕಳೆದ ತಿಂಗಳ ಆರಂಭದಲ್ಲಿ ಕತ್ರಾದಿಂದ ಶ್ರೀನಗರ ಸಂಪರ್ಕಿಸುವ ವಂದೇ ಭಾರತ್ ರೈಲಿಗೆ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ನೀಡುವ ಸಂದರ್ಭದಲ್ಲಿ ಭಯೋತ್ಪಾದಕರು ಇಂತಹ ನೀಚಕೃತ್ಯ ವೆಸಗಲು ಬಯಸಿದ್ದರು ಎಂಬ ಮಾಹಿತಿ ಇತ್ತು. ಕಾಶ್ಮೀರ ಕಣಿವೆಯನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ಗುರಿ ಹೊಂದಿರುವ ರೈಲ್ವೆ ಸಂಪರ್ಕದ ಬಗ್ಗೆ ಪಾಕಿಸ್ತಾನ ಖಂಡಿತವಾಗಿಯೂ ಸಂತೋಷವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದಾಗ್ಯೂ, ಕತ್ರಾ ಪ್ರದೇಶದಲ್ಲಿ ಪ್ರತಿಕೂಲ ಹವಾಮಾನ ಮುನ್ಸೂಚನೆಯಿಂದಾಗಿ ಈ ಹಿಂದೆ ಏಪ್ರಿಲ್ 19 ಕ್ಕೆ ನಿಗದಿಯಾಗಿದ್ದ ಪ್ರಧಾನಿಯ ಭೇಟಿಯನ್ನು ಮುಂದೂಡಲಾಗಿದೆ. ಹೊಸ ದಿನಾಂಕಗಳನ್ನು ಶೀಘ್ರದಲ್ಲೇ ಘೋಷಿಸುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಗಡಿಯಾಚೆಗಿನ ರಾಷ್ಟ್ರ ಮತ್ತು ಉಗ್ರರು ಮೊದಲ ರೈಲು ಸೇವೆಯ ಮೂಲಕ ಅಂತಾರಾಷ್ಟ್ರೀಯ ಗಮನ ಸೆಳೆಯಲು ಎಂದಿಗೂ ಬಯಸುವುದಿಲ್ಲ ಹಾಗಾಗಿ, ಇಂತಹ ಬರ್ಬರ ಹತ್ಯೆಗಳೊಂದಿಗೆ ಆ ಕಾರ್ಯಕ್ರಮ ಮರೆಮಾಡಲು ಯೋಜಿಸಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಹಲ್ಗಾಮ್ ದಾಳಿಯಲ್ಲಿ ಏನಾಯಿತು ಅಂದ್ರೆ ಈಗಾಗಲೇ ಪ್ರವಾಸಿಗರೊಂದಿಗೆ ಬೆರೆತಿದ್ದ ಇಬ್ಬರು ಸ್ಥಳೀಯ ಉಗ್ರರು, ಮೊದಲ ಗುಂಡು ಹಾರಿಸಿದ ತಕ್ಷಣ ಪ್ರವಾಸಿಗರನ್ನು ಫುಡ್ ಕೋರ್ಟ್ ಸಂಕೀರ್ಣಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಪಾಕ್ ನ ಇತರ ಇಬ್ಬರು ಭಯೋತ್ಪಾದಕರು ಗುಂಡು ಹಾರಿಸಿ 26 ಜನರನ್ನು ಕೊಂದಿದ್ದಾರೆ. ದಾಳಿಯ ಉದ್ದೇಶವು ನಾಗರಿಕರಲ್ಲಿ ಭಯವನ್ನು ಉಂಟುಮಾಡುತ್ತಿದೆ ಮತ್ತು ಬಹುಶಃ ದೇಶದ ಇತರೆಡೆ ಕಾಶ್ಮೀರಿಗಳ ವಿರುದ್ಧ ಪ್ರತೀಕಾರದ ದಾಳಿಗೆ ಕಾರಣವಾಗಬಹುದು ಎಂದು ಮೂಲಗಳು ತಿಳಿಸಿವೆ.

ಆದರೆ ದೆಹಲಿಯಲ್ಲಿ ಉನ್ನತಾಧಿಕಾರಿಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಒಮರ್ ಅಬ್ದುಲ್ಲ, ಆಯಾ ರಾಜ್ಯಗಳಲ್ಲಿನ ಕಾಶ್ಮೀರಿ ಸ್ಥಳೀಯರು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರಗಳಿಗೆ ನಿರ್ದೇಶನಗಳನ್ನು ನೀಡಲಾಗಿತ್ತು ಎಂದು ತಿಳಿಸಿದರು.

ಆತಂಕಕಾರಿ ಪ್ರವೃತ್ತಿ:

ಅಫ್ಘಾನಿಸ್ತಾನದಲ್ಲಿ ನ್ಯಾಟೋ ಪಡೆಗಳ ಉಳಿದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ಎಂದು ಶಂಕಿಸಲಾದ ಎಂ-ಸಿರೀಸ್ ರೈಫಲ್ಸ್, ಸ್ನೈಪರ್ ರೈಫಲ್‌ಗಳು ಮತ್ತು ರಕ್ಷಾಕವಚ-ಚುಚ್ಚುವ ಬುಲೆಟ್‌ಗಳಂತಹ ಸುಧಾರಿತ ಶಸ್ತ್ರಾಸ್ತ್ರಗಳನ್ನು ಎನ್‌ಕೌಂಟರ್ ಸ್ಥಳಗಳಿಂದ ವಶಪಡಿಸಿಕೊಂಡ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯ ಪ್ರಕಾರದಲ್ಲಿ ಆತಂಕಕಾರಿ ಪ್ರವೃತ್ತಿಯನ್ನು ಅಧಿಕಾರಿಗಳು ವರದಿ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

ಧರ್ಮಸ್ಥಳ ಪ್ರಕರಣ NIA ತನಿಖೆ ಮಾಡಿದರೆ ಆಕ್ಷೇಪವಿಲ್ಲ: ಸಚಿವ ಸತೀಶ್ ಜಾರಕಿಹೊಳಿ

ಭಾರತ- ಫಿಜಿ ರಕ್ಷಣಾ ಸಹಕಾರ ಕ್ರಿಯಾ ಯೋಜನೆ ಸಿದ್ಧ: ಇಂಡೋ ಪೆಸಿಫಿಕ್‌ ವಲಯದಲ್ಲಿ ಚೀನಾದ ಪ್ರಾಬಲ್ಯ ತಡೆಗೆ ಮಾಸ್ಟರ್ ಪ್ಲಾನ್!

US tariff deadline: ಅಮೆರಿಕದ ಶೇ. 50 ರಷ್ಟು ಸುಂಕ ಆಗಸ್ಟ್ 27 ರಿಂದ ಜಾರಿ; ಮಂಗಳವಾರ ಮಹತ್ವದ PMO ಸಭೆ; ಮೋದಿ ಹೇಳಿದ್ದೇನು? Video

SCROLL FOR NEXT