ಸಾಂದರ್ಭಿಕ ಚಿತ್ರ  
ದೇಶ

ಭಾರತ ಸೇನೆಯಲ್ಲಿ ಹಿರಿಯ ಅಧಿಕಾರಿಗಳನ್ನು ತೆಗೆದುಹಾಕಲಾಗುತ್ತಿದೆ: ಪಾಕಿಸ್ತಾನ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳ ಭರಾಟೆ!

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್(New Indian express) ಈ ಹಿಂದೆ ವರದಿ ಮಾಡಿದಂತೆ, ಲೆಫ್ಟಿನೆಂಟ್ ಜನರಲ್ ರಾಣಾ ಅವರನ್ನು ಸೇನಾ ಕಮಾಂಡರ್ ಹುದ್ದೆಗೆ ಬಡ್ತಿ ನೀಡಲಾಗಿದೆ.

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯಿಸಲು ಭಾರತೀಯ ಸೇನೆ ಕಾರ್ಯಾಚರಣೆ ಕೇಂದ್ರ ಸರ್ಕಾರ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದು, ಎರಡೂ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಡುವೆ ಲೆಫ್ಟಿನೆಂಟ್ ಜನರಲ್ ಡಿಎಸ್ ರಾಣಾ ಅವರನ್ನು ಅನಿಯಂತ್ರಿತವಾಗಿ ತೆಗೆದುಹಾಕಲಾಗಿದೆ ಎಂಬ ನಕಲಿ ಸುದ್ದಿಯನ್ನು ಪಾಕಿಸ್ತಾನ ಮೂಲದ ಮಾಧ್ಯಮ ಸಂಸ್ಥೆಗಳು ಮತ್ತು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು.

ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ದಾಳಿ ನಡೆಸಿ 26 ಜನರನ್ನು ಹತ್ಯೆ ಮಾಡಿದ ನಂತರ ಭಾರತೀಯ ಸೇನೆಗೆ ಸಂಬಂಧಿಸಿದ ಸುಳ್ಳು ವದಂತಿಗಳು ಪಾಕಿಸ್ತಾನದಲ್ಲಿ ಹೆಚ್ಚಾಗಿ ಹರಡುತ್ತಿವೆ. ಭಾರತೀಯ ಸೇನೆಯ ಮಹಾ ನಿರ್ದೇಶಕ-ರಕ್ಷಣಾ ಗುಪ್ತಚರ ಸಂಸ್ಥೆ (DIA) ಲೆಫ್ಟಿನೆಂಟ್ ಜನರಲ್ (Lt.General) ಡಿಎಸ್ ರಾಣಾ ಅವರನ್ನು ತೆಗೆದುಹಾಕಿ ಅಂಡಮಾನ್ ಗೆ ಗಡಿಪಾರು ಮಾಡಲಾಗಿದೆ ಎಂಬ ಸುದ್ದಿಯನ್ನು ಪಾಕಿಸ್ತಾನಿ ಚಾನೆಲ್‌ಗಳು ಮತ್ತು ಸೋಷಿಯಲ್ ಮೀಡಿಯಾ ನೆಟ್‌ವರ್ಕ್‌ಗಳು "ಕಲಾ ಪಾನಿ" ಎಂದು ಹೇಳಿಕೊಂಡು ಹಬ್ಬಿಸುತ್ತಿವೆ.

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್(New Indian express) ಈ ಹಿಂದೆ ವರದಿ ಮಾಡಿದಂತೆ, ಲೆಫ್ಟಿನೆಂಟ್ ಜನರಲ್ ರಾಣಾ ಅವರನ್ನು ಸೇನಾ ಕಮಾಂಡರ್ ಹುದ್ದೆಗೆ ಬಡ್ತಿ ನೀಡಲಾಗಿದೆ ಮತ್ತು ಭಾರತದ ಪ್ರತಿಷ್ಠಿತ ತ್ರಿ-ಸೇನಾ ಕಾರ್ಯಾಚರಣೆ ಕಮಾಂಡ್ ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್ (ANC) ನ ಕಮಾಂಡ್ ಆಗಿ ವಹಿಸಿಕೊಳ್ಳಲಿದ್ದಾರೆ ಎಂಬುದು ಸತ್ಯವಾದ ವರದಿಯಾಗಿದೆ.

ಏಪ್ರಿಲ್ 30 ರಂದು ನಿವೃತ್ತರಾದ ಅಥವಾ ಬಡ್ತಿ ಪಡೆದು ಹೊಸ ಹುದ್ದೆಗಳಿಗೆ ನೇಮಕಗೊಂಡ ಇತರ ಹಿರಿಯ ಅಧಿಕಾರಿಗಳ ಬಗ್ಗೆ ಪಾಕಿಸ್ತಾನ ಮಾಧ್ಯಮಗಳಲ್ಲಿ ಸುಳ್ಳು ವರದಿಗಳಾಗುತ್ತಿವೆ.

"#ಪಾಕಿಸ್ತಾನ ಮೂಲದ ಸುದ್ದಿ ವಾಹಿನಿ @ARYNEWSOFFICIAL ಮತ್ತು ಹಲವಾರು ಪಾಕಿಸ್ತಾನ ಪರ ಸಾಮಾಜಿಕ ಮಾಧ್ಯಮ ಖಾತೆಗಳು ರಕ್ಷಣಾ ಗುಪ್ತಚರ ಸಂಸ್ಥೆಯ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಡಿಎಸ್ ರಾಣಾ ಅವರನ್ನು ಅವರ ಹುದ್ದೆಯಿಂದ ತೆಗೆದುಹಾಕಿ ಅಂಡಮಾನ್ ಮತ್ತು ನಿಕೋಬಾರ್‌ಗೆ ನಿಯೋಜಿಸಲಾಗಿದೆ ಎಂದು ಸುಳ್ಳು ಹೇಳುತ್ತಿವೆ" ಎಂದು ಪತ್ರಿಕಾ ಮಾಹಿತಿ ಬ್ಯೂರೋ (PIB) ಫ್ಯಾಕ್ಟ್ ಚೆಕ್ ಶನಿವಾರ X ನಲ್ಲಿ ಪೋಸ್ಟ್ ಮಾಡಿದೆ.

ಇದರ ನಂತರ ಭಾರತೀಯ ಸೇನೆಯಲ್ಲಿ ಆಂತರಿಕ ಬಿರುಕು ಇದೆ ಎಂದು ಹೇಳಿಕೊಳ್ಳುವ ನಕಲಿ ಪತ್ರದ ಬಗ್ಗೆ ಮತ್ತೊಂದು ಸತ್ಯ ಪರಿಶೀಲನೆ ನಡೆಸಲಾಗಿದೆ. ಮೂರು ದಿನಗಳ ಹಿಂದೆ ಭಾರತೀಯ ಸೇನೆಯ ಉನ್ನತ ಮಟ್ಟದ ಉತ್ತರ ಕಮಾಂಡ್‌ನ ಕಮಾಂಡರ್ ವಿರುದ್ಧ ನಕಲಿ ಸುದ್ದಿ ಹರಡಲಾಗಿತ್ತು, ಪಹಲ್ಗಾಮ್ ಕೂಡ ಅದರ ಜವಾಬ್ದಾರಿಯಡಿಯಲ್ಲಿದೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಇತ್ತೀಚೆಗೆ 26 ಜನರು ಮೃತಪಟ್ಟ ಭಯೋತ್ಪಾದಕ ದಾಳಿಯ ನಂತರ ಉತ್ತರ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಎಂವಿ ಸುಚೀಂದ್ರ ಕುಮಾರ್ ಅವರನ್ನು ಅವರ ಹುದ್ದೆಯಿಂದ ತೆಗೆದುಹಾಕಲಾಗಿದೆ ಎಂದು ಸೂಚಿಸುವ ಸೋಷಿಯಲ್ ಮೀಡಿಯಾ ವದಂತಿಗಳನ್ನು ಪತ್ರಿಕಾ ಮಾಹಿತಿ ಬ್ಯೂರೋ ಬುಧವಾರ ಸತ್ಯ ಪರಿಶೀಲನೆ ನಡೆಸಿತ್ತು.

"ಪಹಲ್ಗಾಮ್ ಘಟನೆಯ ನಂತರ ಉತ್ತರ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಸುಚೀಂದ್ರ ಕುಮಾರ್ ಅವರನ್ನು ಅವರ ಹುದ್ದೆಯಿಂದ ತೆಗೆದುಹಾಕಲಾಗಿದೆ ಎಂದು ಹಲವಾರು ಪಾಕಿಸ್ತಾನ ಪರ ಸಾಮಾಜಿಕ ಮಾಧ್ಯಮ ಖಾತೆಗಳು ತಪ್ಪಾಗಿ ಹೇಳಿಕೊಳ್ಳುತ್ತಿವೆ. ಈ ಪೋಸ್ಟ್‌ಗಳಲ್ಲಿ ಮಾಡಲಾಗುತ್ತಿರುವ ಸುದ್ದಿಗಳು ಸುಳ್ಳು ಎಂದು ಪಿಐಬಿಯ ಫ್ಯಾಕ್ಟ್ ಚೆಕ್ ಘಟಕವು ಎಕ್ಸ್‌ ಪೋಸ್ಟ್‌ನಲ್ಲಿ ತಿಳಿಸಿದೆ.

ಲೆಫ್ಟಿನೆಂಟ್ ಜನರಲ್ ಎಂವಿ ಸುಚೀಂದ್ರ ಕುಮಾರ್ ಫೆಬ್ರವರಿ 2024 ರಲ್ಲಿ ಭಾರತೀಯ ಸೇನೆಯ ಉತ್ತರ ಕಮಾಂಡ್‌ನ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿ ಅಧಿಕಾರ ವಹಿಸಿಕೊಂಡರು, ಜನರಲ್ ಉಪೇಂದ್ರ ದ್ವಿವೇದಿ ಅವರ ನಂತರ, ಅವರು ಈಗ ಸೇನಾ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಭಾರತೀಯ ಸೇನೆಯ ಉತ್ತರ ಕಮಾಂಡ್ ವಿಶಿಷ್ಟ ಗಡಿಗಳು ಮತ್ತು ಬಯಲು ಪ್ರದೇಶದಿಂದ ಅತಿ ಎತ್ತರದವರೆಗಿನ ವೈವಿಧ್ಯಮಯ ಭೂಪ್ರದೇಶಗಳನ್ನು ಹಾಗೂ ಸಾಮಾನ್ಯದಿಂದ ತೀವ್ರ ಪರಿಸ್ಥಿತಿಗಳನ್ನು ಎದುರಿಸುತ್ತದೆ. ತಾಪಮಾನವು ಮೈನಸ್ 50 ರಿಂದ 70 ಡಿಗ್ರಿಗಳಷ್ಟು ಕಡಿಮೆ ಇರುತ್ತದೆ. ಜಮ್ಮುವಿನ ಬಯಲು ಪ್ರದೇಶದಿಂದ ಸಿಯಾಚಿನ್ ಹಿಮನದಿಯವರೆಗೆ ಮತ್ತು ಪೂರ್ವ ಲಡಾಖ್‌ವರೆಗಿನ ನಿಯೋಜನೆಗಳು, ಜಮ್ಮು ಮತ್ತು ಕಾಶ್ಮೀರದಲ್ಲಿನ ಕ್ರಿಯಾತ್ಮಕ ಆಂತರಿಕ ಭದ್ರತಾ ಪರಿಸ್ಥಿತಿಯನ್ನು ನೋಡಿಕೊಳ್ಳುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

SCROLL FOR NEXT