ಮೆಹಬೂಬಾ ಮುಫ್ತಿ PTI
ದೇಶ

ಭಾರತ, ಪಾಕ್ ಸಂಯಮ ಕಾಯ್ದುಕೊಳ್ಳಬೇಕು, ಮಾತುಕತೆ ಮುಂದುವರಿಸಬೇಕು: ಮೆಹಬೂಬಾ ಮುಫ್ತಿ ಮನವಿ

ಭಾರತ ಮತ್ತು ಪಾಕಿಸ್ತಾನ ಎರಡೂ ರಾಷ್ಟ್ರಗಳ ನಾಯಕರು ಶಾಂತಿಯುತ ಸಹಬಾಳ್ವೆಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಮಾಜಿ ಸಿಎಂ ಒತ್ತಾಯಿಸಿದ್ದಾರೆ.

ಶ್ರೀನಗರ: ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳ ಸಂಯಮದಿಂದ ವರ್ತಿಸಬೇಕು ಮತ್ತು ಯುದ್ಧವನ್ನು ಕೊನೆಗೊಳಿಸಲು ಮಾತುಕತೆ ನಡೆಸಬೇಕು ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ(ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಗುರುವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದಾರೆ.

"ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಉಗ್ರ ದಾಳಿಯು ಭಾರತ-ಪಾಕಿಸ್ತಾನ ಸಂಬಂಧಗಳನ್ನು "ಮತ್ತಷ್ಟು ಅಪಾಯಕಾರಿ ಹಂತಕ್ಕೆ ತಳ್ಳಿದೆ" ಎಂದು ಜಮ್ಮು ಮತ್ತು ಕಾಶ್ಮೀರ ಮಾಜಿ ಸಿಎಂ ಮುಫ್ತಿ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಎಕ್ಸ್‌ ನಲ್ಲಿ ಪೋಸ್ಟ್ ಮಾಡಿದ್ದಾರೆ.

"ಎರಡೂ ಕಡೆಯ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಮುಗ್ಧ ಜೀವಗಳ ದುರಂತ ಅಂತ್ಯ ಹೃದಯವಿದ್ರಾವಕವಾಗಿದೆ. ಉಲ್ಬಣಗೊಳ್ಳುವ ಸಂಘರ್ಷವೂ ಪ್ರತಿ ಕ್ಷಣವೂ ಹೆಚ್ಚು ಜೀವಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಮಿಲಿಟರಿಯಿಂದ ಯಾವುದೇ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ" ಎಂದು ಮುಫ್ತಿ ಹೇಳಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ಎರಡೂ ರಾಷ್ಟ್ರಗಳ ನಾಯಕರು ಶಾಂತಿಯುತ ಸಹಬಾಳ್ವೆಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಮಾಜಿ ಸಿಎಂ ಒತ್ತಾಯಿಸಿದ್ದಾರೆ.

"ವಿಶೇಷವಾಗಿ ಭಾರತದ ಪ್ರಧಾನಿಯವರು ಯುದ್ಧವನ್ನು ಕೊನೆಗೊಳಿಸಲು ಮಾತುಕತೆ ಆರಿಸಿಕೊಳ್ಳಬೇಕೆಂದು ನಾನು ಮನವಿ ಮಾಡುತ್ತೇನೆ. ಈಗ, ಎಂದಿಗಿಂತಲೂ ಹೆಚ್ಚಾಗಿ ಶಾಂತಿಯುತ ಸಹಬಾಳ್ವೆ ಮತ್ತು ಮಾತುಕತೆ ನಮ್ಮ ಏಕೈಕ ಸಾಧನವಾಗಿ ಕಾರ್ಯನಿರ್ವಹಿಸಬೇಕು" ಎಂದು ಮುಫ್ತಿ ಬರೆದಿದ್ದಾರೆ.

"ಪ್ರಾಮಾಣಿಕ ಮತ್ತು ನಿರಂತರ ಪ್ರಯತ್ನಗಳ ಮೂಲಕ ಮಾತ್ರ ನಾವು ಉದ್ವಿಗ್ನತೆಯನ್ನು ಕಡಿಮೆ ಮಾಡಬಹುದು ಮತ್ತು ಶಾಂತಿಯನ್ನು ಪುನಃಸ್ಥಾಪಿಸುವ ಕಠಿಣ ಪರಿಶ್ರಮವನ್ನು ಪ್ರಾರಂಭಿಸಬಹುದು" ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತೀವ್ರ ಕುತೂಹಲ ಘಟ್ಟಕ್ಕೆ ತಲುಪಿದ ಪಶ್ಚಿಮ ಏಷ್ಯಾ ಸಂಘರ್ಷ: ಇಂದು ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ಇರಾನ್-ಅಮೆರಿಕ ನಡುವೆ ಸಂಧಾನ ಮಾತುಕತೆ-Video

5 ದಶಕಗಳ ಬಳಿಕ ದಾಖಲೆ ನಿರ್ಮಿಸಿದ ಚಂದ್ರಯಾನ: ಯಶಸ್ವಿಯಾಗಿ ಭೂಮಿಗೆ ಮರಳಿದ Artemis II ಗಗನ ಯಾತ್ರಿಗಳು-Video

'ಹಸಿರು ಲ್ಯಾಂಬೊರ್ಗಿನಿ ಕಾರಲ್ಲಿ ಹೋಗಿ, ರಸ್ತೆ ಕಸ ಗುಡಿಸಿ ಬನ್ನಿ': ಸಂಚಾರ ನಿಯಮ ಉಲ್ಲಂಘಿಸಿ ದರ್ಪ ತೋರಿದ ಚಾಲಕನಿಗೆ ಹೈಕೋರ್ಟ್‌ ಶಿಕ್ಷೆ!

ಉಪಚುನಾವಣೆ ಗೆಲ್ಲುವ ಉಮೇದು: ಪ್ರಚಾರದಲ್ಲಿ ನಿರತರಾದ ಸಿಎಂ -ಡಿಸಿಎಂ; ನಿಯಂತ್ರಣ ಕಳೆದುಕೊಂಡ ಆಡಳಿತ ಯಂತ್ರ!

'ನನ್ನ ಹಣೆಬರಹ ಎಲ್ಲಿದೆಯೋ, ಜನ ಎಲ್ಲಿ ಗೆಲ್ಲಿಸ್ತಾರೋ ನೋಡೋಣ: ನಮ್ಮ ಸಂಖ್ಯೆ ನೋಡಿ ಅಪಹಾಸ್ಯ ಮಾಡಿದ್ದಾರೆ, 2028 ರಲ್ಲಿ ಸರ್ಕಾರ ರಚಿಸ್ತಿವಿ'

SCROLL FOR NEXT