ರಕ್ಷಣಾ ಸಚಿವ ರಾಜನಾಥ್ ಸಿಂಗ್ 
ದೇಶ

ರಾಕ್ಷಸ ರಾಷ್ಟ್ರದ ಕೈಯಲ್ಲಿ ಪರಮಾಣು ಅಣ್ವಸ್ತ್ರ ಇರುವುದು ಸುರಕ್ಷಿತವೇ?: ವಿಶ್ವ ನಾಯಕರಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರಶ್ನೆ

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಹೊರವಲಯದಲ್ಲಿರುವ ಬಾದಾಮಿ ಬಾಗ್ ಕಂಟೋನ್ಮೆಂಟ್‌ನಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಸೈನಿಕರೊಂದಿಗೆ ಸಂವಾದ ನಡೆಸಿದರು.

ಶ್ರೀನಗರ: ರಾಕ್ಷಸ ರಾಷ್ಟ್ರದ ಕೈಯಲ್ಲಿ ಪರಮಾಣು ಅಣ್ವಸ್ತ್ರ ಇರುವುದು ಸುರಕ್ಷಿತವೇ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ವಿಶ್ವ ನಾಯಕರಿಗೆ ಗುರುವಾರ ಪ್ರಶ್ನೆ ಮಾಡಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಹೊರವಲಯದಲ್ಲಿರುವ ಬಾದಾಮಿ ಬಾಗ್ ಕಂಟೋನ್ಮೆಂಟ್‌ನಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಸೈನಿಕರೊಂದಿಗೆ ಸಂವಾದ ನಡೆಸಿದರು.

ಬಾದಾಮಿ ಬಾಗ್ ಕಂಟೋನ್ಮೆಂಟ್‌ನಲ್ಲಿ ಯೋಧರನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ವೇಳೆ ಪಾಕಿಸ್ತಾನದ ವಿರುದ್ಧ ಹರಿಹಾಯ್ದರು.

ಇದೇ ವೇಳೆ ಪರಮಾಣು ಅಣ್ವಸ್ತ್ರಗಳನ್ನು ನಿರ್ವಹಿಸುವ ಪಾಕಿಸ್ತಾನದ ಸಾಮರ್ಥ್ಯವನ್ನು ಟೀಕಿಸಿದರು. ಪಾಕಿಸ್ತಾನದಂತಹ "ರಾಕ್ಷಸ" ರಾಷ್ಟ್ರದ ಕೈಯಲ್ಲಿ ಪರಮಾಣು ಅಣ್ವಸ್ತ್ರ ಇರುವುದು ಸುರಕ್ಷಿತವಾಗಿವೆಯೇ ಎಂದು ಪ್ರಶ್ನೆ ಮಾಡಿದರು.

ಮೊದಲನೆಯದಾಗಿ, ಭಯೋತ್ಪಾದನೆ ಮತ್ತು ಭಯೋತ್ಪಾದಕರ ವಿರುದ್ಧ ಹೋರಾಡುವಾಗ ವೀರ ಯೋಧರ ಅತ್ಯುನ್ನತ ತ್ಯಾಗಕ್ಕೆ ನಾನು ತಲೆಬಾಗುತ್ತೇನೆ. ಅವರ ಸ್ಮರಣೆಗೆ ನಾನು ಗೌರವ ಸಲ್ಲಿಸುತ್ತೇನೆ. ಪಹಲ್ಗಾಮ್‌ನಲ್ಲಿ ಕೊಲ್ಲಲ್ಪಟ್ಟ ಮುಗ್ಧ ನಾಗರಿಕರಿಗೂ ನಾನು ಗೌರವ ಸಲ್ಲಿಸುತ್ತೇನೆ. ಗಾಯಗೊಂಡ ಸೈನಿಕರ ಶೌರ್ಯಕ್ಕೂ ನಾನು ನಮಸ್ಕರಿಸುತ್ತೇನೆ, ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.

ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ನನಗೆ ನಿಮ್ಮೊಂದಿಗೆ ಇರಲು ಹೆಮ್ಮೆಯಾಗುತ್ತಿದೆ. ಆಪರೇಷನ್‌ ಸಿಂದೂರ್‌ ಸಮಯದಲ್ಲಿ ಮೋದಿ ಅವರ ದಕ್ಷ ನಾಯಕತ್ವದಲ್ಲಿ ನೀವು ಮಾಡಿದ ಕಾರ್ಯದ ಬಗ್ಗೆ ಇಡೀ ದೇಶ ಗರ್ವ ಪಡುತ್ತಿದೆ. ನಾನು ರಕ್ಷಣಾ ಸಚಿವನಾಗುವ ಮೊದಲು ಈ ದೇಶದ ನಾಗರಿಕ. ಕೇವಲ ಒಬ್ಬ ರಕ್ಷಣಾ ಸಚಿವನಾಗಿ ಮಾತ್ರವಲ್ಲದೆ ಒಬ್ಬ ಭಾರತೀಯ ಪ್ರಜೆಯಾಗಿ ನಿಮಗೆ ಕೃತಜ್ಞತೆ ಸಲ್ಲಿಸಲು ನಾನು ಇಲ್ಲಿಗೆ ಬಂದಿದ್ದೇನೆಂದು ಹೇಳಿದರು.

ಶತ್ರುಗಳನ್ನು ನಾಶಮಾಡುವ ನಿಮ್ಮ ಶಕ್ತಿಯನ್ನು ನಾನು ಅನುಭವಿಸಲು ಬಂದಿದ್ದೇನೆ. ಗಡಿಯಾಚೆಗಿನ ಪಾಕಿಸ್ತಾನದ ಪೋಸ್ಟ್‌ಗಳು ಮತ್ತು ಬಂಕರ್‌ಗಳನ್ನು ನೀವು ನಾಶಪಡಿಸಿದ ರೀತಿಯನ್ನು ಶತ್ರುಗಳು ಎಂದಿಗೂ ಮರೆಯುವುದಿಲ್ಲ. ಉಗ್ರರ ದಾಳಿ ಬಳಿಕ ಜನರು ಸಾಮಾನ್ಯವಾಗಿ ಉದ್ರೇಕದಲ್ಲಿದ್ದರು. ಆದರೆ, ನಿಮ್ಮ ಉತ್ಸಾಹ, ಹಿಡಿತವನ್ನು ಕಾಯ್ದುಕೊಂಡಿತ್ತು. ಬುದ್ಧಿವಂತಿಕೆಯಿಂದ ಶತ್ರುಗಳ ಅಡಗುತಾಣಗಳನ್ನು ನಾಶಮಾಡಿದರು.

ಇಂದು ನಾನು ಇಲ್ಲಿಗೆ ರಕ್ಷಣಾ ಸಚಿವನಾಗಿಯೂ, ಸಂದೇಶವಾಹಕನಾಗಿಯೂ ಬಂದಿದ್ದೇನೆ. ಇಡೀ ದೇಶದ ಶುಭ ಹಾರೈಕೆಗಳು, ಪ್ರಾರ್ಥನೆಗಳು ಮತ್ತು ಕೃತಜ್ಞತೆಯನ್ನು ಹೊತ್ತುಕೊಂಡು ನಾನು ನಿಮ್ಮ ನಡುವೆ ಬಂದಿದ್ದೇನೆ. ಒಂದು ರೀತಿಯಲ್ಲಿ, ನಾನು ನಿಮ್ಮ ನಡುವೆ ಒಬ್ಬ ಪೋಸ್ಟ್‌ಮ್ಯಾನ್ ಆಗಿ ಬಂದು ದೇಶವಾಸಿಗಳಿಂದ ಸಂದೇಶವನ್ನು ತಂದಿದ್ದೇನೆ. ನಮ್ಮ ಪಡೆಗಳ ಬಗ್ಗೆ ನಮಗೆ ಹೆಮ್ಮೆ ಇದೆ' ಎಂಬುದು ದೇಶದ ಸಂದೇಶ.

ಆಪರೇಷನ್ ಸಿಂಧೂರ್ ಕೇವಲ ಒಂದು ಕಾರ್ಯಾಚರಣೆಯ ಹೆಸರಲ್ಲ, ಬದಲಾಗಿ ಅದು ಒಂದು ಬದ್ಧತೆಯಾಗಿದೆ. ಭಾರತವು ಕೇವಲ ರಕ್ಷಣೆಯನ್ನು ಮಾತ್ರ ಮಾಡುವುದಿಲ್ಲ ಎಂದು ತೋರಿಸಿದ ಬದ್ಧತೆ. ಸಮಯ ಬಂದಾಗ, ನಾವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಈ ಕಾರ್ಯಾಚರಣೆಯು ಪ್ರತಿಯೊಬ್ಬ ಸೈನಿಕನ ಕಣ್ಣಲ್ಲಿ ಕಂಡ ಕನಸಾಗಿತ್ತು, ನಾವು ಪ್ರತಿಯೊಂದು ಉಗ್ರರ ಅಡಗುತಾಣವನ್ನು ತಲುಪುತ್ತೇವೆ, ಅದು ಕಣಿವೆಗಳಲ್ಲಿ ಅಡಗಿರಲಿ ಅಥವಾ ಬಂಕರ್‌ಗಳಲ್ಲಿರಲಿ ಮತ್ತು ಶತ್ರುಗಳ ಎದೆಯನ್ನು ಹರಿದು ಹಾಕಿ, ಆ ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸಿದ ನಂತರವೇ ನಾವು ಹಿಂತಿರುಗುತ್ತೇವೆ.

ಭಯೋತ್ಪಾದನೆಯ ವಿರುದ್ಧ ಭಾರತವು ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿತು. ಇದು ಇತಿಹಾಸದಲ್ಲಿ ಇದೂವರೆಗಿನ ಅತಿದೊಡ್ಡ ಕಾರ್ಯಾಚರಣೆಯಾಗಿದೆ. ಭಾರತವು ಕಳೆದ 35ರಿಂದ 40 ವರ್ಷಗಳಿಂದ ಗಡಿಯಾಚೆಗಿನ ಭಯೋತ್ಪಾದನೆಯನ್ನು ಎದುರಿಸುತ್ತಿದೆ. ಭಯೋತ್ಪಾದನೆಯ ವಿರುದ್ಧ ನಾವು ಯಾವುದೇ ಹಂತಕ್ಕಾದರೂ ಹೋಗಬಹುದು ಎಂಬುದನ್ನು ಇಂದು ಇಡೀ ಜಗತ್ತಿಗೆ ತೋರಿಸಿಕೊಡಲಾಗಿದೆ.

ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಇ ನಡೆಸುವ ಮೂಲಕ ಭಾರತಕ್ಕೆ ನೋವುಂಟು ಮಾಡುವ ಪ್ರಯತ್ನ ಮಾಡಲಾಯಿತು. ಭಾರತದ ಸಾಮಾಜಿಕ ಏಕತೆಯನ್ನು ಮುರಿಯುವ ಪ್ರಯತ್ನ ಮಾಡಲಾಯಿತು. ಭಾರತದ ಹಣೆಯ ಮೇಲೆ ದಾಳಿ ಮಾಡಿದರು, ನಾವು ಅವರ ಎದೆಯ ಮೇಲೆ ಗಾಯಗಳನ್ನು ಮಾಡಿದೆವು. ಪಾಕಿಸ್ತಾನದ ಗಾಯಗಳನ್ನು ಗುಣಪಡಿಸುವ ಏಕೈಕ ಮಾರ್ಗವೆಂದರೆ ಭಾರತ ವಿರೋಧಿ ಮತ್ತು ಭಯೋತ್ಪಾದಕ ಸಂಘಟನೆಗಳಿಗೆ ಆಶ್ರಯ ನೀಡುವುದನ್ನು ನಿಲ್ಲಿಸುವುದು ಮತ್ತು ಅದರ ನೆಲವನ್ನು ಭಾರತದ ವಿರುದ್ಧ ಬಳಸಲು ಬಿಡದಿರುವುದು.

ಸುಮಾರು ಇಪ್ಪತ್ತೊಂದು ವರ್ಷಗಳ ಹಿಂದೆ, ಇದೇ ಪಾಕಿಸ್ತಾನವು ಇಸ್ಲಾಮಾಬಾದ್‌ನಲ್ಲಿ ಅಟಲ್ ಜಿ ಅವರ ಮುಂದೆ ತನ್ನ ನೆಲದಿಂದ ಇನ್ನು ಮುಂದೆ ಭಯೋತ್ಪಾದನೆಯನ್ನು ರಫ್ತು ಮಾಡುವುದಿಲ್ಲ ಎಂದು ಘೋಷಿಸಿತ್ತು. ಆದರೆ, ಪಾಕಿಸ್ತಾನ ಭಾರತಕ್ಕೆ ದ್ರೋಹ ಬಗೆದಿದೆ. ಇಂದಿಗೂ ದ್ರೋಹ ಮಾಡಲಾಗುತ್ತಿದೆ. ಈಗ ಇದಕ್ಕಾಗಿ ಅವರು ಭಾರೀ ಬೆಲೆ ತೆರಬೇಕಾಗಿದೆ. ಈ ಬೆಲೆ ನಿರಂತರವಾಗಿ ಹೆಚ್ಚಾಗುತ್ತಲೇ ಇರುತ್ತದೆ.

ಪ್ರಧಾನಿ ಮೋದಿ ಅವರು ಭಯೋತ್ಪಾದನೆ ವಿರುದ್ಧ ಭಾರತದ ನೀತಿಯನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಿದ್ದಾರೆ, ಇದು ಭಾರತದ ನೆಲದಲ್ಲಿ ಯಾವುದೇ ಭಯೋತ್ಪಾದಕ ದಾಳಿಯನ್ನು ಯುದ್ಧದ ಕೃತ್ಯವೆಂದು ಪರಿಗಣಿಸಲಾಗುತ್ತದೆ ಎಂದು ಹೇಳುತ್ತದೆ. ಗಡಿಯುದ್ದಕ್ಕೂ ಯಾವುದೇ ಅನುಚಿತ ಕ್ರಮ ಕೈಗೊಳ್ಳಬಾರದು ಎಂಬ ಅಂಶದ ಬಗ್ಗೆ ಎರಡೂ ದೇಶಗಳ ನಡುವೆ ಇದೀಗ ರೂಪುಗೊಂಡಿರುವ ತಿಳುವಳಿಕೆ. ಹೀಗೆ ಮಾಡಿದರೆ ವಿಷಯ ಹೊರಬರುತ್ತದೆ ಮತ್ತು ಬಹಳ ದೂರ ಹೋಗುತ್ತದೆ. ನಮ್ಮ ಪ್ರಧಾನಿ ಕೂಡ ಭಯೋತ್ಪಾದನೆ ಮತ್ತು ಮಾತುಕತೆ ಒಟ್ಟಿಗೆ ಹೋಗುವುದಿಲ್ಲ. ಮಾತುಕತೆ ನಡೆದರೆ ಅದು ಭಯೋತ್ಪಾದನೆ ಮತ್ತು ಪಿಒಕೆ ಬಗ್ಗೆ ಎಂದು ಸ್ಪಷ್ಟಪಡಿಸಿದ್ದಾರೆ.

ನಮ್ಮ ಸೇನಾ ಪಡೆಗಳು ಮತ್ತು ಸೈನಿಕರನ್ನು ದೇಶಾದ್ಯಂತ ಗೌರವದಿಂದ ನೋಡಲಾಗುತ್ತದೆ. ಸಶಸ್ತ್ರ ಪಡೆಗಳಿಗೆ ಗೌರವ ನೀಡುವುದರ ಜೊತೆಗೆ, ಅವರಿಗೆ ಅಗತ್ಯವಿರುವ ಆಧುನಿಕ ಶಸ್ತ್ರಾಸ್ತ್ರಗಳು ಮತ್ತು ಸಲಕರಣೆಗಳನ್ನು ಒದಗಿಸುವ ರಾಷ್ಟ್ರವೇ ಬಲಿಷ್ಠ ರಾಷ್ಟ್ರ. ಇಂದು ಸರ್ಕಾರ ನಮ್ಮ ಪಡೆಗಳಿಗಾಗಿ ಇದನ್ನೆಲ್ಲಾ ಮಾಡುತ್ತಿದೆ ಎಂಬುದು ನನಗೆ ಹೆಮ್ಮೆ ತಂದಿದೆ.

ನಮ್ಮ ಸೇನಾಪಡೆಗಳು ಯಾವುದೇ ಪರಿಸ್ಥಿತಿ ಎದುರಾದರೂ ಎದುರಿಸಲು ಸನ್ನದ್ದವಾಗಿವೆ. ಇದಕ್ಕಾಗಿ ನಾವು ನಮ್ಮ ಸೇನೆಗಳಿಗೆ ವಿಶ್ವ ದರ್ಜೆಯ ಮತ್ತು ಉತ್ತಮ ಗುಣಮಟ್ಟದ ಉಪಕರಣಗಳನ್ನು ಒದಗಿಸುತ್ತಿದ್ದೇವೆ. ಇಂದು, ಆಧುನಿಕ ರೈಫಲ್‌ಗಳು, ಕ್ಷಿಪಣಿ ರಕ್ಷಣಾ ಗುರಾಣಿಗಳು ಮತ್ತು ಡ್ರೋನ್‌ಗಳಂತಹ ಅನೇಕ ಹೊಸ ಪೀಳಿಗೆಯ ಉಪಕರಣಗಳು ಭಾರತದಲ್ಲಿ ವೇಗವಾಗಿ ತಯಾರಿಸಲ್ಪಡುತ್ತಿವೆ. ಇದಲ್ಲದೆ, ಗಡಿ ಪ್ರದೇಶಗಳಲ್ಲಿ ನಾವು ಮಾಡಿದ ಕೆಲಸವನ್ನು ನೀವೆಲ್ಲರೂ ನೋಡುತ್ತಿರಬೇಕು. LAC ಮತ್ತು LoC ಯಲ್ಲಿ ಇಂದು ಇರುವ ಸಂಪರ್ಕವು ಹಿಂದೆಂದೂ ಇರಲಿಲ್ಲ ಎಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Kabaddi World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ, ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

ಧರ್ಮಸ್ಥಳ ಬುರುಡೆ ಪ್ರಕರಣ: ಸಾಕ್ಷಿ-ದೂರುದಾರ ಚಿನ್ನಯ್ಯನಿಗೆ ಜಾಮೀನು ಮಂಜೂರು

KSCA ಅಧ್ಯಕ್ಷರಾಗಿ ಕನ್ನಡಿಗ ವೆಂಕಟೇಶ್ ಪ್ರಸಾದ್ ಅವಿರೋಧ ಆಯ್ಕೆ!

12 ಸಾವಿರ ವರ್ಷಗಳಲ್ಲೇ ಮೊದಲು: ಹೈಲಿ ಗುಬ್ಬಿ ಜ್ವಾಲಾಮುಖಿ ಸ್ಫೋಟ; ಭಾರತ ಸೇರಿ ಹಲವು ದೇಶಗಳ ವಿಮಾನಗಳ ಮಾರ್ಗ ಬದಲಾವಣೆ!

"ಧರ್ಮ ಗ್ರಂಥಗಳಲ್ಲಿ ಧ್ವಜಾರೋಹಣದ ಉಲ್ಲೇಖ ಇಲ್ಲ": ರಾಮ ಮಂದಿರದಲ್ಲಿ ಕೇಸರಿ ಧ್ವಜಾರೋಹಣಕ್ಕೆ ಅವಿಮುಕ್ತೇಶ್ವರಾನಂದ ಸರಸ್ವತಿ ಮತ್ತೆ ತಗಾದೆ!

SCROLL FOR NEXT