ಅಹ್ಮದಾಬಾದ್: ರಿಸಿನ್ ಎಂಬ ರಾಸಾಯನಿಕ ಬಳಸಿ ದೇಶಾದ್ಯಂತ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಿದ್ದ ಉಗ್ರ ಡಾ. ಅಹ್ಮದ್ ಗೆ ಗುಜರಾತ್ ಜೈಲಿನಲ್ಲಿ ಭರ್ಜರಿ ಧರ್ಮದೇಟು ಬಿದ್ದಿದೆ.
ಈತನನ್ನು ಬಂಧಿಸಿ ಹೈದರಾಬಾದ್ನಿಂದ ಬಂಧಿಸಿ ಗುಜರಾತ್ನ ಸಬರಮತಿ ಜೈಲಿನಲ್ಲಿರಿಸಲಾಗಿತ್ತು. ಈತನ ದೇಶದ್ರೋಹ ಕೃತ್ಯ ತಿಳಿದ ಜೈಲಿನ ಕೈದಿಗಳು ಆಕ್ರೋಶಗೊಂಡು ಹಿಗ್ಗಾ-ಮುಗ್ಗಾ ಥಳಿಸಿದ್ದಾರೆ. ಹೆಚ್ಚಿನ ಭದ್ರತೆಯ ಸೆಲ್‌ನಲ್ಲಿದ್ದ ಕೈದಿಗಳು ಡಾ. ಅಹ್ಮದ್ ಮೇಲೆ ದಾಳಿ ಮಾಡಿದ್ದಾರೆ. ಉಗ್ರನಿಗೆ ಥಳಿಸಿದ ಪ್ರಕರಣದ ಸಂಬಂಧ ತನಿಖೆ ಜಾರಿಯಲ್ಲಿದೆ.
ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗಳು ಮಧ್ಯಪ್ರವೇಶಿಸದೇ ಇದ್ದಿದ್ದರೆ ಈತನ ಜೀವಕ್ಕೇ ಅಪಾಯ ಉಂಟಾಗುತ್ತಿತ್ತು. ಕೈದಿಗಳು ಈತನ ಮೇಲೆ ನಡೆಸಿದ ದಾಳಿಯ ತೀವ್ರತೆ ಆ ಪ್ರಮಾಣದಲ್ಲಿತ್ತು ಎಂದು ತಿಳಿದುಬಂದಿದೆ. ಸೆಲ್ ಹೊರಗೆ ನಿಂತಿದ್ದ ಕಾವಲುಗಾರರು ಗದ್ದಲ, ಈತನ ಚೀರಾಟ ಕೇಳಿದ ತಕ್ಷಣ, ಧಾವಿಸಿ ಬಂದು ದಾಳಿ ಮಾಡುತ್ತಿದ್ದವರಿಂದ ಉಗ್ರನನ್ನು ದೂರ ಎಳೆದೊಯ್ದಿದ್ದಾರೆ. ಥಳಿತದಿಂದ ಉಗ್ರ ಡಾ. ಅಹ್ಮದ್ ಗೆ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಚೀನಾದಿಂದ ವೈದ್ಯಕೀಯ ಕೋರ್ಸ್‌ನ ಪದವಿ ಪೂರೈಸಿರುವ ಈತ, ಭಾರತದಲ್ಲಿ ವೃತ್ತಿ ನಡೆಸಲು ಅಗತ್ಯವಿರುವ ಎಂಸಿಐ ಪರೀಕ್ಷೆ ಪಾಸು ಮಾಡುವಲ್ಲಿ ವಿಫಲನಾಗಿದ್ದ. ಹರಳೆಣ್ಣೆ ತಯಾರಿಸಲು ಬಳಸುವ ಬೀಜದಿಂದ ಎಣ್ಣೆ ತೆಗೆದ ನಂತರ ಉಳಿಯುವ ಅತ್ಯಲ್ಪ ವಿಷವನ್ನೇ ಈತ ತನ್ನ ಕೃತ್ಯಕ್ಕೆ ಬಳಸಲು ಯೋಜನೆ ರೂಪಿಸಿದ್ದ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.