ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ 
ದೇಶ

ತಮಿಳು ಶ್ರೇಷ್ಠ ಎನ್ನುವ ಮನೋಭಾವ ಹಿಂದಿ ಮಾತ್ರವಲ್ಲ, ತೆಲುಗು, ಕನ್ನಡ, ಮಲಯಾಳಂ ಭಾಷೆಯನ್ನೂ ದ್ವೇಷಿಸುತ್ತದೆ: ರಾಜ್ಯಪಾಲ ಆರ್‌.ಎನ್‌ ರವಿ

ತಮಿಳುನಾಡಿನ ರಾಜಕಾರಣಿಗಳು ತಮಿಳು ಭಾಷೆಯನ್ನು ನಿಜವಾಗಿಯೂ ಪ್ರೀತಿಸುವುದಿಲ್ಲ. ಏಕೆಂದರೆ, ಅವರು ತಮಿಳು ಭಾಷೆ ಅಥವಾ ತಮಿಳು ಸಂಸ್ಕೃತಿಯ ಪ್ರಚಾರಕ್ಕಾಗಿ ಏನನ್ನೂ ಮಾಡಿಲ್ಲ.

ಚೆನ್ನೈ: ತಮಿಳುನಾಡು ರಾಜಕೀಯವು 'ಪ್ರಾದೇಶಿಕತೆ'ಗೆ ಮಾತ್ರ ಸಂಬಂಧಿಸಿದ್ದಲ್ಲಲ್ಲ, ಅದು ಮೂಲಭೂತವಾಗಿ ತಮಿಳನ್ನು 'ಅಸಾಧಾರಣ' ಎಂಬಂತೆ ನೋಡಲಾಗುತ್ತದೆ. ತಮಿಳು ಭಾಷೆ, ಸಂಸ್ಕೃತಿ ಮತ್ತು ಗುರುತನ್ನು ಭಾರತದ ಇತರ ಭಾಗಗಳಿಗಿಂತ ವಿಶೇಷ ಮತ್ತು ವಿಭಿನ್ನವಾಗಿ ನೋಡಲಾಗುತ್ತದೆ ಎಂದು ರಾಜ್ಯಪಾಲ ಆರ್.ಎನ್. ರವಿ ಹೇಳಿದ್ದಾರೆ.

'ತಮಿಳು ಎಲ್ಲಕ್ಕಿಂತ ಶ್ರೇಷ್ಠ ಎನ್ನುವಂತಹ ಮನೋಭಾವವು ಹಿಂದಿಯನ್ನು ವಿರೋಧಿಸುವುದರ ಬಗ್ಗೆ ಮಾತ್ರವಲ್ಲ ಬದಲಿಗೆ ತೆಲುಗು, ಕನ್ನಡ ಮತ್ತು ಮಲಯಾಳಂನಂತಹ ದ್ರಾವಿಡ ಕುಟುಂಬಕ್ಕೆ ಸೇರಿದ ಭಾಷೆಗಳನ್ನೂ ದ್ವೇಷದಿಂದಲೇ ನೋಡಲಾಗುತ್ತದೆ' ಎಂದಿದ್ದಾರೆ.

'ತಮಿಳುನಾಡಿನ ರಾಜಕಾರಣಿಗಳು ತಮಿಳು ಭಾಷೆಯನ್ನು ನಿಜವಾಗಿಯೂ ಪ್ರೀತಿಸುವುದಿಲ್ಲ. ಏಕೆಂದರೆ, ಅವರು ತಮಿಳು ಭಾಷೆ ಅಥವಾ ತಮಿಳು ಸಂಸ್ಕೃತಿಯ ಪ್ರಚಾರಕ್ಕಾಗಿ ಏನನ್ನೂ ಮಾಡಿಲ್ಲ. ವಾಸ್ತವವೆಂದರೆ, ಪ್ರತಿ ವರ್ಷವೂ ಇಲ್ಲಿನ ವಿದ್ಯಾರ್ಥಿಗಳು ತಮಿಳು ಮಾಧ್ಯಮದಿಂದ ಇಂಗ್ಲಿಷ್ ಮಾಧ್ಯಮದತ್ತ ಮುಖ ಮಾಡುತ್ತಿದ್ದಾರೆ. ತಮಿಳಿನಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳ ಸಂಖ್ಯೆ ಸ್ಥಿರವಾಗಿ ಮತ್ತು ತೀವ್ರವಾಗಿ ಕಡಿಮೆಯಾಗುತ್ತಿದೆ' ಎಂದು ಅವರು ಟಿವಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

ತಮಿಳು ಭಾಷೆ ಮತ್ತು ಸಂಸ್ಕೃತಿಯ ಕುರಿತಾದ ಸಂಶೋಧನೆಗೆ ತಮಿಳುನಾಡು ಸರ್ಕಾರ 'ಶೂನ್ಯ ಬಜೆಟ್' ನೀಡಿದೆ. ರಾಜ್ಯದ ಆರ್ಕೈವ್‌ನಲ್ಲಿ 11 ಲಕ್ಷಕ್ಕೂ ಹೆಚ್ಚು ತಾಳೆಗರಿ ಹಸ್ತಪ್ರತಿಗಳು ಕೊಳೆಯುತ್ತಿವೆ. ಅವುಗಳ ಸಂರಕ್ಷಣೆಗಾಗಿ ಯಾವುದೇ ಹಣವನ್ನು ಮೀಸಲಿಟ್ಟಿಲ್ಲ' ಎಂದು ಅವರು ಗಮನಸೆಳೆದರು.

2024ರ ಅಕ್ಟೋಬರ್‌ನಲ್ಲಿ ದೂರದರ್ಶನ ಕಾರ್ಯಕ್ರಮವೊಂದರಲ್ಲಿ 'ದ್ರಾವಿಡ' ಎಂಬ ಪದವಿಲ್ಲದೆ 'ತಮಿಳು ಥಾಯ್ ವಳ್ತು' ನಾಡ ಗೀತೆಯನ್ನು ಹಾಡಲಾಗಿದೆ ಎಂಬುದರ ಸುತ್ತ ಉಂಟಾದ ವಿವಾದವನ್ನು ಉಲ್ಲೇಖಿಸಿದ ರಾಜ್ಯಪಾಲರು, ಈ ವಿಚಾರದಲ್ಲಿ ಡಿಎಂಕೆ ನೇತೃತ್ವದ ತಮಿಳುನಾಡು ಸರ್ಕಾರವು ಅನಗತ್ಯ ವಿವಾದವನ್ನು ಸೃಷ್ಟಿಸಿತು ಎಂದು ಹೇಳಿದರು.

ನಾನು ಕಾರ್ಯಕ್ರಮದಲ್ಲಿ ಕೇವಲ ಅತಿಥಿಯಾಗಿ ಭಾಗವಹಿಸಿದ್ದೆ ಮತ್ತು ಆಯೋಜಕರು ತಪ್ಪು ಮಾಡಿದ್ದರು ಮತ್ತು ಅದಕ್ಕಾಗಿ ಕ್ಷಮೆಯಾಚಿಸಿದರು. ವಾಸ್ತವವಾಗಿ, ತಮಿಳು ಬಗ್ಗೆ ಮಾತನಾಡುವ ಅನೇಕ ಜನರಿಗಿಂತ ನಾನು ತಮಿಳು ಥಾಯ್ ವಳ್ತು ಗೀತೆಯನ್ನು ತುಂಬಾ ಚೆನ್ನಾಗಿ ಹಾಡಬಲ್ಲೆ ಎಂದು ತಿಳಿಸಿದರು.

ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ತಿಕ್ಕಾಟದ ಮತ್ತೊಂದು ಘಟನೆಯನ್ನು ನೆನಪಿಸಿಕೊಂಡ ಅವರು, ಕಳೆದ ಜನವರಿಯಲ್ಲಿ ತಮ್ಮ ಸಾಂಪ್ರದಾಯಿಕ ಭಾಷಣ ಮಾಡುವ ಬದಲು ವಿಧಾನಸಭೆಯ ಮೊದಲ ಅಧಿವೇಶನದಿಂದ ನಾನು ಹೊರನಡೆದಿದ್ದೆ. 'ಇದು 'ನೋವಿನ ನಿರ್ಧಾರ'. ನಾನು ವಿಧಾನಸಭೆಗೆ ಹೋಗುವುದು ಸಭಾತ್ಯಾಗ ಮಾಡಬಾರದು ಎಂಬ ಹೇಳಿಕೆಯನ್ನು ಓದಲು. ಆದರೆ, ನಿಮಗೆ ಗೊತ್ತಾ, ಸಂವಿಧಾನ ಮತ್ತು ರಾಷ್ಟ್ರಗೀತೆಯನ್ನು ಗೌರವಿಸಬೇಕು ಎಂದು ಹೇಳುವ ಸಂವಿಧಾನದ 51A ವಿಧಿಯನ್ನು ರಕ್ಷಿಸುವ ಸಾಂವಿಧಾನಿಕ ಬಾಧ್ಯತೆ ಕೂಡ ನನಗಿದೆ ಎಂದು ರಾಜ್ಯಪಾಲರು ಹೇಳಿದರು.

ಅಧಿವೇಶನದ ಆರಂಭದಲ್ಲಿ ರಾಷ್ಟ್ರಗೀತೆ ನುಡಿಸಲಿಲ್ಲ. ರಾಜ್ಯಪಾಲರು ಅಥವಾ ರಾಷ್ಟ್ರಪತಿಗಳು ಭಾಗವಹಿಸುವ ಅಂತಹ ಕಾರ್ಯಕ್ರಮಗಳಲ್ಲಿ, ರಾಷ್ಟ್ರಗೀತೆಯೊಂದಿಗೆ ಪ್ರಾರಂಭವಾಗಿ ಅದರೊಂದಿಗೆ ಕೊನೆಗೊಳ್ಳುತ್ತದೆ ಎಂದು ಅವರು ಗಮನಸೆಳೆದರು.

ಗುಪ್ತಚರ ಅಧಿಕಾರಿಯಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ ರವಿ ಅವರು ಜಮ್ಮು ಮತ್ತು ಕಾಶ್ಮೀರದ ಸಮಸ್ಯೆಗಳ ಬಗ್ಗೆ ಮತ್ತು ಈಶಾನ್ಯ ಭಾಗದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ತಮಿಳುನಾಡಿಗೂ ಮುನ್ನ, ರವಿ ಅವರು ಮೇಘಾಲಯದ ಹೆಚ್ಚುವರಿ ಉಸ್ತುವಾರಿಯೊಂದಿಗೆ ನಾಗಾಲ್ಯಾಂಡ್ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೇಂದ್ರ ಬಜೆಟ್ 2026-27: ರಾಜ್ಯದ ಹಣಕಾಸು ಸಮತೋಲನ ಪುನಃಸ್ಥಾಪಿಸಲು ಹೆಚ್ಚಿನ ಅನುದಾನ ಒದಗಿಸಿ; ಕೇಂದ್ರಕ್ಕೆ ರಾಜ್ಯ ಸರ್ಕಾರ ಆಗ್ರಹ

ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಹೋರಾಟ ನಡೆಸುತ್ತೇವೆಂದ ಸಿಎಂ ಸಿದ್ದರಾಮಯ್ಯ

ಇರಾನ್ ನಲ್ಲಿ 2 ವಾರ ಪೂರೈಸಿದ ಪ್ರತಿಭಟನೆ: ಸರ್ಕಾರಿ ಕಟ್ಟಡಗಳಿಗೆ ಬೆಂಕಿ, ಪ್ರತಿಭಟನಾಕಾರರಿಗೆ 'ಮರಣ ದಂಡನೆ' ಬೆದರಿಕೆ!

"Surely It's Time": ಕೊಹ್ಲಿ ನಿವೃತ್ತಿ ಬಗ್ಗೆ ದೊಡ್ಡ ಸಂದೇಶ ರವಾನಿಸಿದ ಉತ್ತಪ್ಪ!

'ಮನ್ರೇಗಾ ಬಚಾವೋ' ಸಂಗ್ರಾಮ: ಕಾಂಗ್ರೆಸ್ ಪಕ್ಷದಿಂದ ದೇಶಾದ್ಯಂತ 45 ದಿನಗಳ ಹೋರಾಟ ಆರಂಭ!

SCROLL FOR NEXT