ಶಬರಿಮಲೆ ಅಯ್ಯಪ್ಪ ದೇವಸ್ಥಾನ 
ದೇಶ

ಶಬರಿಮಲೆ: ಅಯ್ಯಪ್ಪ ಸನ್ನಿದ್ಧಿಗೆ ಬರುವ ಭಕ್ತರಿಗೆ ಗುಡ್ ನ್ಯೂಸ್; TDB ಮುಖ್ಯಸ್ಥರಿಂದ ಘೋಷಣೆ

ಬೆಟ್ಟದ ದೇವಾಲಯದಲ್ಲಿ ಅನ್ನದಾನದ ಭಾಗವಾಗಿ ಇಲ್ಲಿಯವರೆಗೂ ಪುಲಾವ್ ಮತ್ತು ಸಾಂಬಾರ್ ನೀಡಲಾಗುತ್ತಿತ್ತು

ತಿರುವನಂತಪುರಂ: ಶಬರಿಮಲೆಯ ಅಯ್ಯಪ್ಪ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಶೀಘ್ರದಲ್ಲೇ "ಕೇರಳ ಸದ್ಯ"ವನ್ನು ಸವಿಯಬಹುದು ಎಂದು ತಿರುವಾಂಕೂರು ದೇವಸ್ವಂ ಮಂಡಳಿ ಮಂಗಳವಾರ ತಿಳಿಸಿದೆ.

ಬೆಟ್ಟದ ದೇವಾಲಯದಲ್ಲಿ ಅನ್ನದಾನದ ಭಾಗವಾಗಿ ಇಲ್ಲಿಯವರೆಗೂ ಪುಲಾವ್ ಮತ್ತು ಸಾಂಬಾರ್ ನೀಡಲಾಗುತ್ತಿತ್ತು. ಇದು ಭಕ್ತರಿಗೆ ಸೂಕ್ತವಲ್ಲ ಎಂದು ಹೇಳಿರುವ ಮಂಡಳಿಯು 'ಪಾಯಸ' (ಸಿಹಿ ಕಡುಬು) ಮತ್ತು ಪಪ್ಪಡ್‌ ಜೊತೆಗೆ 'ಕೇರಳ ಸದ್ಯ' ನೀಡಲು ನಿರ್ಧರಿಸಿದೆ ಎಂದು ಟಿಡಿಬಿ ಅಧ್ಯಕ್ಷ ಕೆ ಜಯಕುಮಾರ್ ಸುದ್ದಿಗಾರರಿಗೆ ತಿಳಿಸಿದರು.

ಮಂಡಳಿ ಸಭೆ ನಂತರ ಮಾತನಾಡಿದ ಜಯಕುಮಾರ್,"ಅನ್ನದಾನಕ್ಕೆ ದೇವಸ್ವಂ ಮಂಡಳಿಯಿಂದ ಹಣವನ್ನು ತೆಗೆದುಕೊಳ್ಳಲಾಗುವುದಿಲ್ಲ ಎಂದರು.

ಇದು ಅಯ್ಯಪ್ಪ ಭಕ್ತರಿಗೆ ಉತ್ತಮ ಆಹಾರ ಒದಗಿಸಲು ಭಕ್ತರು ಮಂಡಳಿಗೆ ನೀಡಿರುವ ನಿಧಿಯಾಗಿದೆ. ಶಬರಿಮಲೆಯಲ್ಲಿ ಅನ್ನದಾನದ ಗುಣಮಟ್ಟ ಖಾತ್ರಿ ಹೊಣೆ ಹೊಂದಿರುವ ಮಂಡಳಿಯು ಸೂಕ್ತ ನಿರ್ಧಾರ ತೆಗೆದುಕೊಂಡಿದೆ.ಈ ನಿರ್ಧಾರವನ್ನು ಈಗಾಗಲೇ ಆಯಾ ಅಧಿಕಾರಿಗಳಿಗೆ ತಿಳಿಸಲಾಗಿದ್ದು, ಬುಧವಾರ ಅಥವಾ ಗುರುವಾರದಿಂದ ಜಾರಿಗೆ ಬರುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.

ಶಬರಿಮಲೆ ಮಾಸ್ಟರ್ ಪ್ಲಾನ್ ಕುರಿತು ಚರ್ಚಿಸಲು ಮತ್ತು ಮುಂದಿನ ವರ್ಷದ ವಾರ್ಷಿಕ ಯಾತ್ರೆಯ ಸಿದ್ಧತೆಗಳಿಗೆ ಸಂಬಂಧಿಸಿದಂತೆ ಅಗತ್ಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಡಿಸೆಂಬರ್ 18 ರಂದು ಪರಿಶೀಲನಾ ಸಭೆ ಕರೆಯಲಾಗುವುದು ಎಂದು ಅವರು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Geneva ಸಭೆಯಲ್ಲಿ ಭಾರತದ ವಿರುದ್ಧ ಟೀಕೆ; ‘ರಾಜಕೀಯ ಪ್ರೇರಿತ ಹೇಳಿಕೆಗಳ ಒಪ್ಪಲ್ಲ’ ಎಂದ MEA, ವಿಶ್ವಸಂಸ್ಥೆ ಸಮಿತಿ ವಿರುದ್ಧ ಕಿಡಿ..!

'ವಿರೋಧವಿದ್ದರೂ ಮೋಹನ್ ಭಾಗವತ್ ಅಮೆರಿಕಕ್ಕೆ ಯಾಕೆ ಹೋದ್ರು? ಮಹಾರಾಷ್ಟ್ರ ಕಾಂಗ್ರೆಸ್ ಶಾಸಕ ನಾನಾ ಪಟೋಲೆ ಪ್ರಶ್ನೆ!

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!