ಹನುಮಾನ್ ಚಾಲೀಸಾ online desk
ದೇಶ

ಉತ್ತರ ಪ್ರದೇಶ: ಧ್ವನಿವರ್ಧಕದಲ್ಲಿ 'ಹನುಮಾನ್ ಚಾಲೀಸಾ' ಹಾಕಿದ್ದ ಅರ್ಚಕರಿಗೆ ಬೆದರಿಕೆ!

ಟೇಪ್ ರೆಕಾರ್ಡರ್‌ನಲ್ಲಿ ಭಕ್ತಿಗೀತೆಗಳನ್ನು ನುಡಿಸಿದಾಗ ಅಬ್ದುಲ್ ನಾಸಿರ್ ಮತ್ತು ಅವರ ಮಗ ಅಲ್ಲಿಗೆ ಬಂದು ಅವರನ್ನು ನಿಂದಿಸಲು ಪ್ರಾರಂಭಿಸಿದರು ಎಂದು ಅರ್ಚಕ ಸಂಜಯ್ ಪ್ರಜಾಪತಿ ಪೊಲೀಸರಿಗೆ ತಿಳಿಸಿದ್ದಾರೆ.

ನವದೆಹಲಿ: ವಾರಣಾಸಿಯ ಮದನಪುರ ಪ್ರದೇಶದಲ್ಲಿ ಧ್ವನಿ ವರ್ಧಕದಲ್ಲಿ ಹನುಮಾನ್ ಚಾಲೀಸಾ ಹಾಕಿದ್ದ ದೇವಾಲಯದ ಅರ್ಚಕರಿಗೆ ಬೆದರಿಕೆ ಹಾಕಲಾಗಿದೆ. ಈ ಘಟನೆ ಸಂಬಂಧ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಶುಕ್ರವಾರ ಹನುಮಾನ್ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ, ಟೇಪ್ ರೆಕಾರ್ಡರ್‌ನಲ್ಲಿ ಭಕ್ತಿಗೀತೆಗಳನ್ನು ನುಡಿಸಿದಾಗ ಅಬ್ದುಲ್ ನಾಸಿರ್ ಮತ್ತು ಅವರ ಮಗ ಅಲ್ಲಿಗೆ ಬಂದು ಅವರನ್ನು ನಿಂದಿಸಲು ಪ್ರಾರಂಭಿಸಿದರು ಎಂದು ಅರ್ಚಕ ಸಂಜಯ್ ಪ್ರಜಾಪತಿ ಪೊಲೀಸರಿಗೆ ತಿಳಿಸಿದ್ದಾರೆ.

ಅವರು ಧ್ವನಿವರ್ಧಕವನ್ನು ಆಫ್ ಮಾಡಲು ಕೇಳಿದರು ಮತ್ತು ಭಕ್ತಿಗೀತೆಯನ್ನು ಮತ್ತೆ ನುಡಿಸಿದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದರು. ಶೀಘ್ರದಲ್ಲೇ, ಡಜನ್ಗಟ್ಟಲೆ ಜನರು ಅರ್ಚಕರನ್ನು ಸುತ್ತುವರೆದು ಅವರಿಗೆ ಬೆದರಿಕೆ ಹಾಕಿದರು ಎಂದು ಪ್ರಜಾಪತಿ ತಮ್ಮ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.

ಕಾಶಿ ವಲಯದ ಉಪ ಪೊಲೀಸ್ ಆಯುಕ್ತ ಗೌರವ್ ಬನ್ಸಾಲ್ ಅವರು ಪ್ರಕರಣ ದಾಖಲಿಸಲಾಗಿದ್ದು, ಇಬ್ಬರು ಆರೋಪಿಗಳನ್ನು ಶುಕ್ರವಾರ ರಾತ್ರಿ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಂಚ ಪಡೆಯುತ್ತಿದ್ದ ಸಚಿವ ಕೆ.ಜೆ. ಜಾರ್ಜ್‌ OSD ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ

ಜಿಲ್ಲೆಗೊಂದು ಮೆಡಿಕಲ್ ಕಾಲೇಜು, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವುದು ನನ್ನ ಗುರಿ: ಸಿಎಂ ಸಿದ್ದರಾಮಯ್ಯ

11 ಮಕ್ಕಳ ಸಾವು: ಕೇರಳದಲ್ಲೂ ಕೋಲ್ಡ್ರಿಫ್ ಸಿರಪ್ ಮಾರಾಟ, ವಿತರಣೆ ನಿಷೇಧ

ಎಂಎಂ ಹಿಲ್ಸ್‌ನಲ್ಲಿ ಮತ್ತೊಂದು ಹುಲಿಗೆ ವಿಷಪ್ರಾಶನ; ಇಬ್ಬರು ಶಂಕಿತರು ವಶಕ್ಕೆ

ತಮಿಳುನಾಡಿನಲ್ಲಿ ಬದಲಾದ ರಾಜಕೀಯ ಸಮೀಕರಣ: ವಿಜಯ್ ಜೊತೆ ಬಿಜೆಪಿ ಮಾತುಕತೆ? ಕಾಲ್ತುಳಿತ ಘಟನೆಯ ನಂತರ TVKಗೆ ಪ್ರಮುಖ ಭರವಸೆ?

SCROLL FOR NEXT