ಸಿಜೆಐ ಬಿಆರ್ ಗವಾಯಿ ಸಾಂದರ್ಭಿಕ ಚಿತ್ರ 
ದೇಶ

ಶೂ ಎಸೆತ ಪ್ರಕರಣ: ಅದೊಂದು 'ಮರೆತ ಅಧ್ಯಾಯ'; CJI ಬಿ.ಆರ್ ಗವಾಯಿ ಅಚ್ಚರಿಯ ಹೇಳಿಕೆಗೆ ಕಾರಣವೇನು?

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಈ ಕೃತ್ಯವನ್ನು ಕ್ಷಮಿಸಲಾಗದು ಎಂದು ಹೇಳಿದರು. ಇದು ತಪ್ಪು ಮಾಹಿತಿಯ ಫಲಿತಾಂಶ ಮತ್ತು ಅಗ್ಗದ ಪ್ರಚಾರದ ಪ್ರಯತ್ನ ಎಂದು ಕರೆದರು.

ನವದೆಹಲಿ: ಭಾರತದ ಅತ್ಯುನ್ನತ ಸ್ಥಾನವಾದ ಮುಖ್ಯ ನ್ಯಾಯಮೂರ್ತಿಯತ್ತ ಶೂ ಎಸೆತ ಪ್ರಕರಣ ದೇಶಾದ್ಯಂತ ತೀವ್ರ ಹಾಗೂ ಖಂಡನೆಗೆ ಗುರಿಯಾಗಿರುವಂತೆಯೇ 'ಅದೊಂದು ಮರೆತ ಅಧ್ಯಾಯ' ಎಂದು CJI ಬಿಆರ್ ಗವಾಯಿ ಗುರುವಾರ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಅಕ್ಟೋಬರ್ 6 ರಂದು ವಕೀಲರೊಬ್ಬರು ಶೂ ಎಸೆಯಲು ಪ್ರಯತ್ನಿಸಿದಾಗ ನಾನು ಮತ್ತು ನ್ಯಾಯಮೂರ್ತಿ ಕೆ ವಿನೋದ್ ಚಂದ್ರನ್ ಆಘಾತಕ್ಕೊಳಗಾಗಿದ್ದೇವು. ಆದರೆ 'ಇದೊಂದು ಮರೆತ ಅಧ್ಯಾಯ' ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಹೇಳಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಈ ವಿಚಾರ ಕುರಿತು ಇಂದು ಸುಪ್ರೀಂಕೋರ್ಟ್ ನಲ್ಲಿ ಮಾತನಾಡಿದ ಬಿಆರ್ ಗವಾಯಿ, ಸೋಮವಾರ ನಡೆದ ಘಟನೆಯಿಂದ ನನ್ನ ಸಹೋದರ ಸಹೋದ್ಯೋಗಿ ತುಂಬಾ ಆಘಾತಕ್ಕೊಳಗಾಗಿದ್ದೇವೆ. ಆದರೆ ನಮ್ಮ ಪಾಲಿಗೆ ಇದು ಮರೆತು ಹೋದ ಅಧ್ಯಾಯ ಎಂದು ಹೇಳಿದರು. ಈ ವೇಳೆ ಸಿಜೆಐ ಅವರ ಪಕ್ಕದಲ್ಲಿದ್ದ ಕುಳಿತಿದ್ದ ನ್ಯಾ, ಉಜ್ವಲ್‌ ಭುಯಾನ್‌, ತಪ್ಪಿತಸ್ಥ ವಕೀಲರ ವಿರುದ್ಧದ ಕ್ರಮಕ್ಕೆ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದರು.

ನನಗೆ ಈ ಬಗ್ಗೆ ನನ್ನದೇ ಆದ ಅಭಿಪ್ರಾಯವಿದೆ. ಅವರು ಸಿಜೆಐ, ಇದು ತಮಾಷೆಯ ವಿಷಯವಲ್ಲ! ಈ ದಾಳಿಯು "ಸುಪ್ರೀಂ ಕೋರ್ಟ್‌ಗೆ ಮಾಡಿದ ಅವಮಾನ" ಮತ್ತು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಈ ಕೃತ್ಯವನ್ನು ಕ್ಷಮಿಸಲಾಗದು ಎಂದು ಹೇಳಿದರು. ಇದು ತಪ್ಪು ಮಾಹಿತಿಯ ಫಲಿತಾಂಶ ಮತ್ತು ಅಗ್ಗದ ಪ್ರಚಾರದ ಪ್ರಯತ್ನ ಎಂದು ಕರೆದರು. ಅಲ್ಲದೇ CJI ಅವರ ಉದಾತ್ತತೆ ಮತ್ತು "ಗಾಂಭೀರ್ಯ" ವನ್ನು ಶ್ಲಾಘಿಸಿದರು. ಕೋರ್ಟ್‌ನಲ್ಲಿದ್ದ ಹಿರಿಯ ವಕೀಲ ಕಪಿಲ್ ಸಿಬಲ್, ಆಘಾತಕಾರಿ ಘಟನೆಯ ಬಗ್ಗೆ ಇನ್ನು ಮುಂದೆ ಚರ್ಚಿಸಬೇಡಿ ಎಂದು ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಅವರನ್ನು ಕೇಳಿಕೊಂಡರು.

ನಮಗೆ ಇದು ಮರೆತುಹೋದ ಅಧ್ಯಾಯವಾಗಿದೆ, ”ಎಂದು ಸಿಜೆಐ ಪುನರುಚ್ಚರಿಸಿದರು ಮತ್ತು ವಿಚಾರಣೆಯನ್ನು ಮುಂದುವರೆಸಿದರು. ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಇಡೀ ಘಟನೆಯನ್ನು ಒಟ್ಟಾರೆ ಸಾಂಸ್ಥಿಕ ಸಂಸ್ಥೆಯ ಮೇಲಿನ ದಾಳಿ ಎಂದು ಬಣ್ಣಿಸಿದ್ದಾರೆ. ನಾನು ಘಟನೆಗೆ ಪ್ರತ್ಯಕ್ಷದರ್ಶಿ ಅಲ್ಲ. ಪತ್ರಿಕಾ ವರದಿಗಳಿಂದ ಇದು ನನಗೆ ತಿಳಿಯಿತು. ಇದು ತನಿಖೆಗೆ ಅರ್ಹವಾಗಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಲಸೆ ವೀಸಾ ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಲಸೆ ನೀತಿ ಮತ್ತಷ್ಟು ಕಠಿಣ, ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌..!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!