ಕೀನ್ಯಾ ಮಾಜಿ ಪ್ರಧಾನಮಂತ್ರಿ ರೈಲಾ ಒಡಿಂಗಾ 
ದೇಶ

ಆಯುರ್ವೇದ ಚಿಕಿತ್ಸೆಗೆ ಕೇರಳಕ್ಕೆ ಬಂದಿದ್ದ ಕೀನ್ಯಾ ಮಾಜಿ ಪ್ರಧಾನಿ ಹೃದಯಸ್ತಂಭನದಿಂದ ನಿಧನ

ಇಂದು ಬೆಳಿಗ್ಗೆ ವಾಕಿಂಗ್ ಮಾಡುತ್ತಿದ್ದ ವೇಳೆ ಹಠಾತ್ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಕೂಥಾಟುಕುಳಂನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊಚ್ಚಿ: ಆಯುರ್ವೇದ ಚಿಕಿತ್ಸೆಗೆಂದು ಕೇರಳ ರಾಜ್ಯಕ್ಕೆ ಬಂದಿದ್ದ ಕೀನ್ಯಾ ಮಾಜಿ ಪ್ರಧಾನಮಂತ್ರಿ ರೈಲಾ ಒಡಿಂಗಾ ಹೃದಯಸ್ತಂಭನದಿಂದ ಬುಧವಾರ ನಿಧನರಾಗಿದ್ದಾರೆ.

80 ವರ್ಷದ ರೈಲಾ ಒಡಿಂಗಾ ಆಯುರ್ವೇದ ಚಿಕಿತ್ಸೆಗಾಗಿ ಕೇರಳದ ಎರ್ನಾಕುಲಂ ಜಿಲ್ಲೆಯ ಕೂಥಾಟುಕುಳಂಗೆ ಬಂದಿದ್ದರು.

ಇಂದು ಬೆಳಿಗ್ಗೆ ವಾಕಿಂಗ್ ಮಾಡುತ್ತಿದ್ದ ವೇಳೆ ಹಠಾತ್ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಕೂಥಾಟುಕುಳಂನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಿಸದೇ ಬೆಳಗ್ಗೆ 9:25ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ರೈಲಾ ಒಡಿಂಗಾ ಅವರ ಮೃತದೇಹವನ್ನು ಆಸ್ಪತ್ರೆಯಲ್ಲೇ ಇರಿಸಲಾಗಿದೆ. ಮೃತದೇಹ ಹಸ್ತಾಂತರ ಸೇರಿದಂತೆ ಮುಂದಿನ ಪ್ರಕ್ರಿಯೆಗಾಗಿ ಪ್ರಾದೇಶಿಕ ನೋಂದಣಿ ಕಚೇರಿಗೆ ಮಾಹಿತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ

ರೈಲಾ ಒಡಿಂಗಾ ಕುಟುಂಬ ಇದಕ್ಕೂ ಮೊದಲು ಈ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ಹಿಂದೆ ರೈಲಾ ಒಡಿಂಗಾ ಅವರ ಪುತ್ರಿ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಕಣ್ಣಿನ ದೃಷ್ಟಿ ಮರಳಿ ಪಡೆದಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬೆಂಗಳೂರಿಗರಿಗೆ ಗುಡ್​​ನ್ಯೂಸ್: ನವೆಂಬರ್ 1ರಿಂದ A ಖಾತಾ ಅಭಿಯಾನ; ಆನ್‌ಲೈನ್ ವ್ಯವಸ್ಥೆಗೆ DCM ಚಾಲನೆ

"ಎಲ್ಲದಕ್ಕೂ ಒಂದು ಮಿತಿ ಇದೆ": ಕಿರಣ್ ಮಜುಂದಾರ್ ಷಾ ವಿರುದ್ಧ DCM ಡಿ.ಕೆ ಶಿವಕುಮಾರ್ ಕಿಡಿ

ಔರಂಗಜೇಬ್ ಆಡಳಿತಕ್ಕೆ ಹೋಲಿಕೆ: ಸಿಎಂ ಮಮತಾ ಬ್ಯಾನರ್ಜಿ ಕ್ಷಮೆ ಕೋರಿದ ದುರ್ಗಾಪುರ ಅತ್ಯಾಚಾರ ಸಂತ್ರಸ್ತೆ ತಂದೆ!

ಡೊನಾಲ್ಡ್ ಟ್ರಂಪ್ ಎಚ್ಚರಿಕೆಗೂ ಬಗ್ಗದ ಹಮಾಸ್, 8 ಗಾಜಾ ನಿವಾಸಿಗಳ 'ಗುಂಡಿಟ್ಟು ಹತ್ಯೆ', Video

ಆಂಧ್ರ vs ಕರ್ನಾಟಕ: 'ಅವರು ಅಸಮರ್ಥರಾದರೆ ನಾವೇನು ಮಾಡಲು ಸಾಧ್ಯ..': ಬೆಂಗಳೂರು ರಸ್ತೆಗುಂಡಿ, ಉದ್ಯಮಗಳ ಸ್ಥಳಾಂತರದ ಬಗ್ಗೆ ಸಚಿವ ನಾರಾ ಲೋಕೇಶ್ ಹೊಸ ಬಾಂಬ್!

SCROLL FOR NEXT