ನವದೆಹಲಿ: ಕೋರ್ಟ್ ವರ್ಚುವಲ್ ವಿಚಾರಣೆ ವೇಳೆ ವಕೀಲರೊಬ್ಬರು ಮಹಿಳೆಯೊಬ್ಬರಿಗೆ ಚುಂಬಿಸಿರುವ ವಿಡಿಯೊವೊಂದು ವ್ಯಾಪಕ ವೈರಲ್ ಆಗುತ್ತಿದೆ.
ಹೌದು.. ದೆಹಲಿ ಹೈಕೋರ್ಟ್’ನ ವರ್ಚುವಲ್ ನ್ಯಾಯಾಲಯದ ವಿಚಾರಣೆಯ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು, ವ್ಯಾಪಕ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ವಕೀಲರೊಬ್ಬರು ಮಹಿಳೆಯೊಂದಿಗೆ ಸರಸದಲ್ಲಿ ತೊಡಗಿರುವುದು ಕಂಡುಬಂದಿದೆ.
ವರ್ಚುವಲ್ ವಿಚಾರಣೆಗೂ ಕೆಲ ಕ್ಷಣಗಳ ಮುನ್ನ ವಕೀಲರೊಬ್ಬರು ಮಹಿಳೆಗೆ ಚುಂಬಿಸುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಮೂಲಗಳ ಪ್ರಕಾರ ಈ ಘಟನೆ ಮಂಗಳವಾರ ನಡೆದಿರುವುದಾಗಿ ವರದಿಯಾಗಿದೆ. ಈ ವರ್ತನೆ ವೇಳೆ ನ್ಯಾಯಾಲಯದ ವರ್ಚುವಲ್ ವಿಚಾರಣೆ ಇನ್ನೂ ಆರಂಭವಾಗಿರಲಿಲ್ಲ ಎಂದು ಹೇಳಲಾಗಿದೆ.
ಜನರು ಮತ್ತು ವಾದ ಪ್ರತಿವಾದಿಗಳು ನ್ಯಾಯಾಧೀಶರ ಆಗಮನಕ್ಕಾಗಿ ಕಾಯುತ್ತಿದ್ದರು. ಈ ವೇಳೆ ವಕೀಲರು ನ್ಯಾಯಾಲಯದ ಸಮವಸ್ತ್ರ ಧರಿಸಿ ತಮ್ಮ ಕೋಣೆಯಲ್ಲಿ ಕುಳಿತಿದ್ದರು. ಇದೇ ಸಂದರ್ಭದಲ್ಲಿ ಅವರ ಸಮೀಪಕ್ಕೆ ಸೀರೆಯುಟ್ಟ ಮಹಿಳೆ ಬರುತ್ತಿದ್ದಂತೆಯೇ ವಕೀಲರು ಆ ಮಹಿಳೆಯ ಕೈ ಹಿಡಿದು ಎಳೆದುಕೊಂಡು ಚುಂಬಿಸುತ್ತಾರೆ.
ಈ ವೇಳೆ ಮಹಿಳೆ ಹಿಂಜರಿಯುತ್ತಿರುವಂತೆ ಕಾಣುತ್ತದೆ ಮತ್ತು ವಿರೋಧಿಸುತ್ತಿರುವಂತೆ ತೋರುತ್ತದೆ, ಆದರೆ ವಕೀಲರು ಮುಂದುವರಿಸಿ ಅವಳು ಹಿಂದೆ ಸರಿಯುವ ಮೊದಲು ಅವಳಿಗೆ ಒಂದು ಕಿಸ್ ನೀಡುತ್ತಾರೆ. ಇದು ವರ್ಚುವಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಇದೇ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ವ್ಯಾಪಕ ವೀಕ್ಷಣೆ
ಇನ್ನು ಈ ವೀಡಿಯೊ ಪೋಸ್ಟ್ ಮಾಡಿದ ಎರಡು ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ 89.7K ಗಿಂತ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ವೀಡಿಯೊದಲ್ಲಿರುವ ವಕೀಲರು ಮತ್ತು ಮಹಿಳೆಯ ಗುರುತುಗಳನ್ನು ಇನ್ನೂ ದೃಢೀಕರಿಸಲಾಗಿಲ್ಲ.