ತೇಜಸ್‌ ಎಂಕೆ 1ಎ ಜೆಟ್ 
ದೇಶ

ಭಾರತದ ವಾಯು ರಕ್ಷಣಾ ಸಾಮರ್ಥ್ಯಕ್ಕೆ ಮತ್ತಷ್ಟು ಬಲ: ನಾಸಿಕ್‌ನಲ್ಲಿ ಸ್ವದೇಶಿ ನಿರ್ಮಿತ Tejas Mk1A ಫೈಟರ್ ಜೆಟ್ ಹಾರಾಟ; Video

ಇತ್ತೀಚೆಗೆ ನಿವೃತ್ತಿ ಪಡೆದ ಮಿಗ್‌ 21 ಯುದ್ಧ­ವಿಮಾ­­ನಗಳ ಸ್ಥಾನವನ್ನು ಈ ತೇಜಸ್‌ ಎಂಕೆ 1ಎ ತುಂಬಲಿದೆ. ಆದ್ದರಿಂದ ಭಾರತೀಯ ವಾಯುಪಡೆಗೆ ಇದೊಂದು ಮೈಲಿಗ­ಲ್ಲಾ­­ಗಲಿದೆ.

ನವದೆಹಲಿ: ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿ. ನಿರ್ಮಿಸಿರುವ ದೇಸಿ ಲಘು ಯುದ್ಧ ವಿಮಾನ ತೇಜಸ್‌ ಎಂಕೆ 1ಎ ಜೆಟ್ ನಾಸಿಕ್‌ನಲ್ಲಿ ಶುಕ್ರವಾರ ಮೊದಲ ಬಾರಿಗೆ ಆಗಸದಲ್ಲಿ ಹಾರಾಟ ನಡೆಸಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಸಮ್ಮುಖದಲ್ಲಿ ತೇಜಸ್ ಎಲ್‌ಸಿಎ ಎಂಕೆ1ಎ ಫೈಟರ್ ಜೆಟ್ ಹಾರಾಟ ನಡೆಸಿದೆ.

ಈ ಸಂದರ್ಭದಲ್ಲಿ ರಾಜನಾಥ್ ಸಿಂಗ್ ಅವರು, ಎಲ್‌ಸಿಎ ತೇಜಸ್ ಎಂಕೆ1ಎಯ ಮೂರನೇ ಉತ್ಪಾದನಾ ಘಟಕ ಮತ್ತು ಎಚ್‌ಟಿಟಿ-40 ರ ಎರಡನೇ ಉತ್ಪಾದನಾ ಘಟಕವನ್ನು ಉದ್ಘಾಟಿಸಿದರು.

ತೇಜಸ್‌ ಎಂಕೆ 1ಎ ಜೆಟ್ ಭಾರತೀಯ ವಾಯುಪಡೆ ಮತ್ತು ಭಾರತೀಯ ನೌಕಾಪಡೆ ಗಾಗಿ ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ನ‌ (ಎಚ್‌ಎಎಲ್‌) ವಿಮಾನ ಸಂಶೋಧನೆ ಮತ್ತು ವಿನ್ಯಾಸ ಕೇಂದ್ರ (ಎಆರ್‌­­ಡಿಸಿ)ದ ಸಹಯೋಗದೊಂದಿಗೆ ಏರೋನಾಟಿಕಲ್‌ ಅಭಿ­­ವೃದ್ಧಿ ಏಜೆನ್ಸಿ (ಎಡಿಎ) ವಿನ್ಯಾಸಗೊಳಿಸಿದ ಭಾರತೀಯ ಬಹುವಿಧದ ಕಾರ್ಯಕ್ಷಮತೆಯ ಲಘು ಯುದ್ಧ ವಿಮಾನ ಇದಾಗಿದೆ.

ಇತ್ತೀಚೆಗೆ ನಿವೃತ್ತಿ ಪಡೆದ ಮಿಗ್‌ 21 ಯುದ್ಧ­ವಿಮಾ­­ನಗಳ ಸ್ಥಾನವನ್ನು ಈ ತೇಜಸ್‌ ಎಂಕೆ 1ಎ ತುಂಬಲಿದೆ. ಆದ್ದರಿಂದ ಭಾರತೀಯ ವಾಯುಪಡೆಗೆ ಇದೊಂದು ಮೈಲಿಗ­ಲ್ಲಾ­­ಗಲಿದೆ. ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಎಚ್‌ಎಎಲ್‌ ಕೇಂದ್ರದಲ್ಲಿ ಈ ಲಘು ಯುದ್ಧ ವಿಮಾನಗಳು ತಯಾರಾಗುತ್ತಿವೆ.

ತೇಜಸ್‌ ಎಂಕೆ1ಎ ಯುದ್ಧ ವಿಮಾನವು ತೇಜಸ್‌ ವಿಮಾನದ ಅತ್ಯಾಧುನಿಕ ಆವೃತ್ತಿಯಾಗಿದೆ. ಇದರಲ್ಲಿ ಸುಮಾರು 40ಕ್ಕೂ ಹೆಚ್ಚು ಮಹತ್ವದ ಸುಧಾರಣೆಗಳನ್ನು ಮಾಡಲಾಗಿದೆ. ಇದರಲ್ಲಿ ಜಿಇ ಏರೋಸ್ಪೇಸ್‌ನ ಎಫ್‌404 ಎಂಜಿನ್‌ ಉಪಯೋಗಿಸಿ ತಯಾರಿಸಲಾಗಿದೆ. ಇದು ಒಂದೇ ಎಂಜಿನ್‌ನಿಂದ ಕೂಡಿದ್ದು, 4.5 ಜನರೇಷನ್‌ ವಿಮಾನವಾಗಿದೆ. ಇಸ್ರೇಲ್‌ ನಿರ್ಮಿತ ಇಎಲ್‌­/ಎಂ-2052 ಐಸಾ ರಾಡಾರ್‌ಅಥವಾ ನಮ್ಮ ಲ್ಲೇ ಅಭಿವೃದ್ಧಿಯಾಗಿರುವ "ಉತ್ತಮ್‌' ಎನ್ನುವ ಆಕ್ಟಿವ್‌ ಎಲೆಕ್ಟ್ರಾನಿಕಲಿ ಸ್ಕ್ಯಾನ್ಡ್ ಅರೇ ರಾಡಾರ್‌ (ಇದೊಂದು ಆಂಟೆನವಾಗಿದ್ದು, ವಿವಿಧ ಕಡೆಯಿಂದ ಬರುವ ತರಂಗಗಳನ್ನು ಆಕರ್ಷಿಸುತ್ತದೆ) ಅನ್ನು ಅಳವಡಿಸಲಾಗಿದ್ದು, ಇದು ವಿಮಾನದ ಕಣ್ಣಿನಂತೆ ಕೆಲಸ ಮಾಡುತ್ತದೆ.

ದೂರದ ಗುರಿಗಳನ್ನು ನಿಖರವಾಗಿ ಪತ್ತೆಹಚ್ಚಲು ಸಹಾಯ ಮಾಡುತ್ತದೆ. ಶತ್ರುಗಳ ರಾಡಾರ್‌ಗಳಿಂದ ತಪ್ಪಿಸಿ­ಕೊಳ್ಳಲು ಮತ್ತು ಅವರ ಕ್ಷಿಪಣಿಗಳನ್ನು ದಾರಿತಪ್ಪಿಸಲು ಸ್ವಯಂ ರಕ್ಷಾ ಕವಚ ಮತ್ತು ಅತ್ಯಾಧುನಿಕ ಎಲೆಕ್ಟ್ರಾನಿಕ್‌ ಯುದ್ಧ ತಂತ್ರಜ್ಞಾನ ವನ್ನು ಇದು ಹೊಂದಿದೆ.

ಈ ವಿಮಾನವು ಹಾರಾಟದಲ್ಲಿರುವಾಗಲೇ ಇಂಧನವನ್ನು ತುಂಬಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಇದರಿಂದಾಗಿ ಇದರ ಕಾರ್ಯಾಚರಣೆ ವ್ಯಾಪ್ತಿ ಗಣನೀಯವಾಗಿ ಹೆಚ್ಚಾಗು ತ್ತದೆ. ಕಣ್ಣಿಗೆ ಕಾಣದ ಕ್ಷಿಪಣಿಗಳನ್ನು ಮತ್ತು ಅಸ್ರಾಂನಂತಹ ಅತ್ಯಾಧುನಿಕ ಕ್ಷಿಪಣಿಗಳನ್ನು ಹೊತ್ತೂಯ್ಯುವ ಸಾಮರ್ಥ್ಯವನ್ನು ಹೊಂದಿದೆ.

ಈ ವಿಮಾನ ತ್ರಿಕೋನ ರೀತಿಯ ರೆಕ್ಕೆಗಳನ್ನು ಹೊಂದಿದ್ದು, ಹಗುರ ಉಪಕರಣಗಳನ್ನು ಹೊಂದಿರಲಿದೆ. ಸೂಪರ್‌ಸಾನಿಕ್‌ ಸ್ಪೀಡ್‌ ಹೊಂದಿದ್ದು, 1.8 ಮ್ಯಾಕ್‌ ವೇಗದಲ್ಲಿ (1 ಗಂಟೆಗೆ 2220 ಕಿ.ಮೀ. ವೇಗ) ಸಂಚರಿಸಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹತ್ಯೆಗೆ ಸಂಚು ರೂಪಿಸಿದರೆ ಇರಾನ್ 'ಈ ಭೂಮಿ ಮೇಲಿಂದ ನಾಶವಾಗುತ್ತದೆ': Donal Trump

ಧಾರವಾಡ: ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಬರ್ಬರ ಹತ್ಯೆ; ಶವ ಬಿಸಾಡಿ ಹೋದ ದುಷ್ಕರ್ಮಿಗಳು!

ಸನಾತನ ಧರ್ಮ ಕುರಿತ ಉದಯನಿಧಿ ಹೇಳಿಕೆ ದ್ವೇಷ ಭಾಷಣಕ್ಕೆ ಸಮ: ಹಿಂದೂ ಧರ್ಮದ ಮೇಲಿನ ಸ್ಪಷ್ಟ ದಾಳಿ; ಮದ್ರಾಸ್ ಹೈಕೋರ್ಟ್ ತಪರಾಕಿ

ಯುಪಿಐ ಟಿಕೆಟ್ ಸ್ಕ್ಯಾನರ್ ದುರುಪಯೋಗ: ಮೂವರು ನಿರ್ವಾಹಕರನ್ನು ಅಮಾನತುಗೊಳಿಸಿದ BMTC

"ಹಣಕಾಸು ಯೋಜನೆಗಳನ್ನು ಉತ್ತೇಜಿಸಲು ನನ್ನ ಇಮೇಜ್, ಧ್ವನಿ ಬಳಸಿ ನಕಲಿ ವಿಡಿಯೋ, ನಂಬಬೇಡಿ"; ಸುಧಾ ಮೂರ್ತಿ ಸ್ಪಷ್ಟನೆ

SCROLL FOR NEXT