ಅಮಿತ್ ಶಾ-ಒಮರ್ ಅಬ್ದುಲ್ಲಾ 
ದೇಶ

ಜಮ್ಮು-ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ 'ಸೂಕ್ತ ಸಮಯದಲ್ಲಿ': ಅಮಿತ್ ಶಾ; ಸುಪ್ರೀಂ ಕೋರ್ಟ್ ಮೊರೆ ಹೋಗುವ ಸಾಧ್ಯತೆ!

ಬಿಜೆಪಿ ಪ್ರಾಮಾಣಿಕವಾಗಿರಬೇಕು. ಹೀಗಾಗಿ ಜನರ ನಂಬಿಕೆ ಉಳಿಸಿಕೊಳ್ಳಬೇಕಾದರೆ ರಾಜ್ಯ ಸ್ಥಾನಮಾನ ನೀಡಬೇಕು.

ನವದೆಹಲಿ: ಚುನಾಯಿತ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದಿದ್ದರೂ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನವನ್ನು ಪುನಃಸ್ಥಾಪಿಸಬೇಕೆಂಬ ದೀರ್ಘಕಾಲದ ಬೇಡಿಕೆಯನ್ನು 'ಸೂಕ್ತ ಸಮಯದಲ್ಲಿ' ಈಡೇರಿಸಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಹೇಳಿದ್ದಾರೆ. ಜಮ್ಮು-ಕಾಶ್ಮೀರ ಮತ್ತು ನವದೆಹಲಿಯ ನಡುವಿನ 'ಅಂತರ'ದ ಕುರಿತು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರ ಇತ್ತೀಚಿನ ಹೇಳಿಕೆಗಳ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾ, ಒಮರ್ ಅಬ್ದುಲ್ಲಾ ರಾಜಕೀಯ ಒತ್ತಡಗಳಿಂದ ಇದನ್ನು ಹೇಳುತ್ತಿರಬಹುದು. ಆದರೆ ಸೂಕ್ತ ಸಮಯದಲ್ಲಿ ರಾಜ್ಯ ಸ್ಥಾನಮಾನವನ್ನು ಪುನಃಸ್ಥಾಪಿಸಲಾಗುವುದು. ಸಿಎಂ ಜೊತೆ ಚರ್ಚಿಸಿದ ನಂತರ ಅದನ್ನು ಮಾಡಲಾಗುತ್ತದೆ ಎಂದು ಶಾ ಭರವಸೆ ನೀಡಿದರು.

ಗುರುವಾರ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿ ಒಂದು ವರ್ಷವನ್ನು ಪೂರ್ಣಗೊಳಿಸಿದ ಒಮರ್ ಅಬ್ದುಲ್ಲಾ, ರಾಜ್ಯ ಸ್ಥಾನಮಾನವನ್ನು ಪುನಃಸ್ಥಾಪಿಸಲು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾದ ಅರ್ಜಿಯಲ್ಲಿ ಮುಖ್ಯ ಅರ್ಜಿದಾರನಾಗುವ ಸಾಧ್ಯತೆಯನ್ನು ಅನ್ವೇಷಿಸುತ್ತಿರುವುದಾಗಿ ಹೇಳಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಕೇಸರಿ ಪಕ್ಷ ಅಧಿಕಾರಕ್ಕೆ ಬರುವುದರ ಮೇಲೆ ರಾಜ್ಯ ಸ್ಥಾನಮಾನದ ಪುನಃಸ್ಥಾಪನೆ ಅವಲಂಬಿತವಾಗಿದೆಯೇ ಎಂದು ಬಿಜೆಪಿ ಸ್ಪಷ್ಟಪಡಿಸಬೇಕು ಎಂದು ಮುಖ್ಯಮಂತ್ರಿ ಹೇಳಿದರು.

ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಮತ್ತು ಸಂಸತ್ತಿಗೆ ಮತ್ತು ಸುಪ್ರೀಂ ಕೋರ್ಟ್‌ಗೆ ನೀಡಿದ ಭರವಸೆಗಳಲ್ಲಿ ರಾಜ್ಯತ್ವವು ಜಮ್ಮು-ಕಾಶ್ಮೀರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮಾತ್ರ ಕೊಡಲಾಗುತ್ತದೆ ಎಂದು ಎಲ್ಲೂ ಹೇಳಿಲ್ಲ. ಬಿಜೆಪಿ ಪ್ರಾಮಾಣಿಕವಾಗಿರಬೇಕು. ಹೀಗಾಗಿ ಜನರ ನಂಬಿಕೆ ಉಳಿಸಿಕೊಳ್ಳಬೇಕಾದರೆ ರಾಜ್ಯ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿದರು. ಕೇಂದ್ರವು ಬೇಡಿಕೆಯನ್ನು ಈಡೇರಿಸುವಂತೆ ಮಾಡಲು ತನ್ನ ಪಕ್ಷವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಅಬ್ದುಲ್ಲಾ ಪುನರುಚ್ಚರಿಸಿದರು. 2015ರಲ್ಲಿ ಪಿಡಿಪಿ-ಬಿಜೆಪಿ ಮೈತ್ರಿಕೂಟದ 'ಪರಿಣಾಮಗಳನ್ನು ಜೆ & ಕೆ ಇನ್ನೂ ಅನುಭವಿಸುತ್ತಿದೆ ಎಂದು ಒತ್ತಿ ಹೇಳಿದರು.

ರಾಜ್ಯ ಸ್ಥಾನಮಾನದ ಪುನಃಸ್ಥಾಪನೆಯು ಅಬ್ದುಲ್ಲಾ ಅವರ ಪಕ್ಷವಾದ ನ್ಯಾಷನಲ್ ಕಾನ್ಫರೆನ್ಸ್ ನೀಡಿದ ಪ್ರಮುಖ ಭರವಸೆಗಳಲ್ಲಿ ಒಂದಾಗಿತ್ತು. ಹೀಗಾಗಿ 2024ರ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿತು. ಆದಾಗ್ಯೂ, ಒಂದು ವರ್ಷದ ನಂತರ, ಸರ್ಕಾರವು ಕಣಿವೆ ಮೂಲದ ವಿರೋಧ ಪಕ್ಷಗಳಿಂದ ಮತ್ತು ತನ್ನದೇ ಆದ ಶ್ರೇಣಿಯೊಳಗಿನಿಂದ ಟೀಕೆಗಳನ್ನು ಎದುರಿಸುತ್ತಿದೆ. ಒಮರ್ ಅಬ್ದುಲ್ಲಾ ಏನನ್ನು ಮಾಡಿಲ್ಲ ಬದಲಿಗೆ ನವದೆಹಲಿ ಮತ್ತು ಬಿಜೆಪಿಯನ್ನು ಮಾತ್ರ ಸಮಾಧಾನಪಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಾರತಕ್ಕೆ ಬಂದ ಆಪ್ತ ಗೆಳೆಯ Putin ಗೆ ಭಗವದ್ಗೀತೆ ಉಡುಗೊರೆ ಕೊಟ್ಟ ಪ್ರಧಾನಿ ಮೋದಿ! ವಿಶೇಷ ಏನು?

ನನ್ನ ಸ್ನೇಹಿತ ಪುಟಿನ್‌ರನ್ನು ಸ್ವಾಗತಿಸಲು ತುಂಬಾ ಸಂತೋಷವಾಗುತ್ತಿದೆ: ಪ್ರಧಾನಿ ಮೋದಿ

IndiGo: ಮತ್ತೆ 550 ವಿಮಾನ ರದ್ದು; ಸಂಸ್ಥೆಯ 20 ವರ್ಷದ ಇತಿಹಾಸದಲ್ಲಿ ಇದೇ ಮೊದಲು!

ಸ್ನೇಹ, ನಂಬಿಕೆ: ಮೋದಿ ಜೊತೆ ಸಾಮಾನ್ಯ ಕಾರಿನಲ್ಲಿ Putin ಪ್ರಯಾಣ! Video

ಅಮೆರಿಕವೇ ನಮ್ಮಿಂದ ಪರಮಾಣು ಇಂಧನ ಖರೀದಿಸುತ್ತಿದೆ; ರಷ್ಯಾ-ಭಾರತ ಸಂಬಂಧ ಯಾರ ವಿರುದ್ಧದ ಗುರಿ ಹೊಂದಿಲ್ಲ: Putin

SCROLL FOR NEXT