ಸಾಂದರ್ಭಿಕ ಚಿತ್ರ online desk
ದೇಶ

ಮಧ್ಯ ಪ್ರದೇಶ: ಆಯುರ್ವೇದಿಕ್ ಕೆಮ್ಮಿನ ಸಿರಪ್ ಸೇವಿಸಿದ ನಂತರ ಮಗು ಸಾವು

ಇದಕ್ಕೂ ಮೊದಲು, ಛಿಂದ್ವಾರಾದ 21, ಬೇತುಲ್‌ನ ಇಬ್ಬರು ಮತ್ತು ಪಂಧುರ್ನಾದ ಒಬ್ಬ ಮಗು ಸೇರಿದಂತೆ 24 ಮಕ್ಕಳು ಅಲೋಪತಿ ಕೆಮ್ಮಿನ ಸಿರಪ್ 'ಕೋಲ್ಡ್ರಿಫ್' ಸೇವನೆಯಿಂದ ಮೃತಪಟ್ಟಿದ್ದರು.

ಛಿಂದ್ವಾರಾ: 'ಕೋಲ್ಡ್ರಿಫ್' ಕೆಮ್ಮಿನ ಸಿರಪ್ ಸೇವಿಸಿ ಹಲವು ಮಕ್ಕಳ ಸಾವಿನ ಬೆನ್ನಲ್ಲೇ ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯಲ್ಲಿ ಆಯುರ್ವೇದಿಕ್ ಕೆಮ್ಮಿನ ಸಿರಪ್ ಮತ್ತು ಔಷಧೀಯ ಪುಡಿ ಸೇವಿಸಿದ ನಂತರ ಐದು ತಿಂಗಳ ಹೆಣ್ಣು ಮಗುವೊಂದು ಸಾವನ್ನಪ್ಪಿದೆ ಆಘಾತಕಾರಿ ಘಟನೆ ಶುಕ್ರವಾರ ವರದಿಯಾಗಿದೆ.

ಇದಕ್ಕೂ ಮೊದಲು, ಛಿಂದ್ವಾರಾದ 21, ಬೇತುಲ್‌ನ ಇಬ್ಬರು ಮತ್ತು ಪಂಧುರ್ನಾದ ಒಬ್ಬ ಮಗು ಸೇರಿದಂತೆ 24 ಮಕ್ಕಳು ಅಲೋಪತಿ ಕೆಮ್ಮಿನ ಸಿರಪ್ 'ಕೋಲ್ಡ್ರಿಫ್' ಸೇವನೆಯಿಂದ ಮೃತಪಟ್ಟಿದ್ದರು.

'ಕೋಲ್ಡ್ರಿಫ್' ಸೇವನೆಗೆ ಸಂಬಂಧಿಸಿದ ಕೊನೆಯ ಸಾವಿನ ಎರಡು ವಾರಗಳ ನಂತರ ಆಯುರ್ವೇದಿಕ್ ಕೆಮ್ಮಿನ ಸಿರಪ್ ಸೇವಿಸಿ ಐದು ತಿಂಗಳ ಹೆಣ್ಣು ಮಗು ಸಾವನ್ನಪ್ಪಿದೆ. ಇದರೊಂದಿಗೆ ಸಿರಪ್ ಸೇವನೆಯಿಂದ ಸಾವನ್ನಪ್ಪಿದ ಮಕ್ಕಳ ಸಂಖ್ಯೆ 25ಕ್ಕೆ ತಲುಪಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

"ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿದ್ದ ರುಹಿ ಮಿನೋಟೆ ಎಂಬ ಮಗು ಗುರುವಾರ ಮೃತಪಟ್ಟಿದೆ. ಅವರ ಕುಟುಂಬವು ನಾಲ್ಕು ದಿನಗಳ ಹಿಂದೆ ಕುರತಾ ಮೆಡಿಕಲ್ ಶಾಪ್‌ನಿಂದ ಆಯುರ್ವೇದಿಕ್ ಸಿರಪ್ ಮತ್ತು ಕೆಲವು ಔಷಧೀಯ ಪುಡಿಯನ್ನು ಖರೀದಿಸಿತ್ತು. ಮೆಡಿಕಲ್ ಶಾಪ್ ಅನ್ನು ಸೀಲ್ ಮಾಡಲಾಗಿದೆ," ಎಂದು ಚೌರೈ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್(SDM) ಪ್ರಭಾತ್ ಮಿಶ್ರಾ ಪಿಟಿಐಗೆ ತಿಳಿಸಿದ್ದಾರೆ.

"ಪೊಲೀಸರು ಅಸಹಜ ಸಾವಿನ ಪ್ರಕರಣ ದಾಖಲಿಸಿದ್ದು, ಸಿರಪ್ ಮತ್ತು ಪುಡಿಯ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿಗಾಗಿ ನಾವು ಕಾಯುತ್ತಿದ್ದೇವೆ" ಎಂದು ಎಸ್‌ಡಿಎಂ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

IPL 2026 Qualifier 1: GT ವಿರುದ್ದ ಸ್ಫೋಟಕ ಬ್ಯಾಟಿಂಗ್, ಇತಿಹಾಸ ಬರೆದ RCB

IPL 2026 Qualifier 1: ಐಪಿಎಲ್ ಅಷ್ಟೇ ಅಲ್ಲ.. ಜಾಗತಿಕ ಟಿ20 ಕ್ರಿಕೆಟ್ ನಲ್ಲೂ RCB ಐತಿಹಾಸಿಕ ದಾಖಲೆ, ರೆಕಾರ್ಡ್ ಗಳ ಪಟ್ಟಿ!

SCROLL FOR NEXT