ದೇವೇಂದ್ರ ಫಡ್ನವೀಸ್ ಮತ್ತು ಪಾರ್ಶೋತ್ತಮ್ ಖೋಡಾಭಾಯಿ ರೂಪಾಲಾ  
ದೇಶ

ಮುಖ್ಯಮಂತ್ರಿ ಹುದ್ದೆಯಿಂದ ಫಡ್ನವೀಸ್ ಗೆ ಕೊಕ್; ರಾಷ್ಟ್ರ ರಾಜಕಾರಣಕ್ಕೆ ಮಹಾರಾಷ್ಟ್ರ ಸಿಎಂ?; ಬಿಜೆಪಿ ರಾಷ್ಟ್ರಾಧ್ಯಕ್ಷ ರೇಸ್ ನಲ್ಲಿ ರೂಪಾಲಾ!

ಬಿಹಾರ ಚುನಾವಣೆಯ ನಂತರ ಫಡ್ನವೀಸ್ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುವಂತೆ ಸೂಚನೆ ನೀಡಲಾಗಿದೆ

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ಕಾಲ ಸನ್ನಿಹಿತವಾಗಿದೆ. ಬಿಹಾರ ಚುನಾವಣೆಗೂ ಮುನ್ನ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲು ಬಿಜೆಪಿ ಸಿದ್ಧತೆ ನಡೆಸಿದೆ. ಪಕ್ಷದ ಹಿರಿಯ ನಾಯಕರು ಮತ್ತು ಮುಖ್ಯಮಂತ್ರಿಗಳ ಅಭಿಪ್ರಾಯ ಸಂಗ್ರಹಿಸಿ, ಜಾತಿ ಸಮೀಕರಣ ಮತ್ತು ರಾಜಕೀಯ ಪರಿಗಣನೆಗಳನ್ನು ಗಮನದಲ್ಲಿಟ್ಟುಕೊಂಡು ಆಯ್ಕೆ ಮಾಡಲು ಮುಂದಾಗಿದೆ.

ಬಿಜೆಪಿ ತನ್ನ ಹೊಸ ಅಧ್ಯಕ್ಷರ ಆಯ್ಕೆಗೆ ಸಿದ್ಧತೆ ನಡೆಸುತ್ತಿರುವಾಗ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಗುಜರಾತ್‌ನ ಮಾಜಿ ಕೇಂದ್ರ ಸಚಿವ ಪಾರ್ಶೋತ್ತಮ್ ಖೋಡಾಭಾಯಿ ರೂಪಾಲಾ ಅವರ ಹೆಸರುಗಳು ಕೇಳಿ ಬರುತ್ತಿವೆ. ಹೀಗಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಜೊತೆಗೆ ಪ್ರಮುಖ ಸ್ಪರ್ಧಿಗಳಾಗಿ ಹೊರಹೊಮ್ಮಿದ್ದಾರೆ.

ಬಿಹಾರ ಚುನಾವಣೆಯ ನಂತರ ಫಡ್ನವೀಸ್ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುವಂತೆ ಸೂಚನೆ ನೀಡಲಾಗಿದೆ. ಆದರೆ ಅವರ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಇನ್ನೂ ಯಾವುದೇ ಚರ್ಚೆ ನಡೆದಿಲ್ಲ. ಅವರನ್ನು ಬಿಜೆಪಿ ಮುಖ್ಯಸ್ಥ ಹುದ್ದೆಗೆ ಪರಿಗಣಿಸುವ ಸಾಧ್ಯತೆಯಿದೆ. ಯುವ ನಾಯಕರಾಗಿರುವ ಫಡ್ನವೀಸ್ ಗೆ ಆರ್‌ಎಸ್‌ಎಸ್ ಬೆಂಬಲವಿದ್ದು ಪಕ್ಷದ ನಾಯಕತ್ವದ ವಿಶ್ವಾಸ ಹೊಂದಿದ್ದಾರೆ" ಎಂದು ಮೂಲಗಳು ತಿಳಿಸಿವೆ.

ರೂಪಾಲಾ ಹೆಸರು ಪಟ್ಟಿಯಲ್ಲಿ ಹೊಸದಾಗಿ ಸೇರ್ಪಡೆಯಾಗಿದೆ, ಆದರೆ ಅವರ ಹೆಸರು ಆರ್‌ಎಸ್‌ಎಸ್‌ನಿಂದ ಬೆಂಬಲಿಸಲ್ಪಟ್ಟಿದೆ. ಜೊತೆಗೆ ಪಕ್ಷದ ಉನ್ನತ ನಾಯಕರ ವಿಶ್ವಾಸಗಳಿಸಿದ್ದಾರ ಎಂದು ಹೇಳಲಾಗುತ್ತಿರುವುದರಿಂದ ಅವರ ಹೆಸರು ಕೂಡ ಜನಪ್ರಿಯತೆ ಗಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ರೂಪಾಲಾ ಅವರ ಆತ್ಮೀಯರಾಗಿದ್ದರು.

2024 ರ ಸಂಸತ್ ಚುನಾವಣೆಯ ಸಂದರ್ಭದಲ್ಲಿ ರೂಪಾಲಾ ಅವರ ಕ್ಷತ್ರಿಯ ವಿರೋಧಿ ಹೇಳಿಕೆಯಿಂದಾಗಿ ಅವರ ರಾಜಕೀಯ ಜೀವನದ ಮೇಲೆ ಮೋಡ ಕವಿದಿತ್ತು. ಆದರೆ ಅವರು "ಸಂಘ ಮತ್ತು ಪಕ್ಷದ ನಾಯಕತ್ವದ ನಡುವಿನ ನಿಷ್ಠಾವಂತ ನಾಯಕ ಎಂದು ಮೂಲಗಳು ತಿಳಿಸಿವೆ.

ಇನ್ನೂ ಧರ್ಮೇಂದ್ರ ಪ್ರಧಾನ್ ಅವರ ಹೆಸರು ಕೂಡ ಬಿಜೆಪಿ ರಾಷ್ಟ್ರಾಧ್ಯಕ್ಷಶ್ರ ರೇಸ್ ನಲ್ಲಿದೆ. ಅವರ ದಿವಂಗತ ತಂದೆ ಡಾ. ದೇಬೇಂದ್ರ ಪ್ರಧಾನ್ ಆರ್‌ಎಸ್‌ಎಸ್‌ನ ಆಜೀವ ಸದಸ್ಯರಾಗಿದ್ದರು. 1980 ರಲ್ಲಿ ಬಿಜೆಪಿಗೆ ಸೇರಿದರು.

ಪಕ್ಷವು ತನ್ನ ರಾಷ್ಟ್ರೀಯ ಅಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸುವ ಮೊದಲು ಚುನಾವಣಾ ಕಾಲೇಜನ್ನು ರಚಿಸಲು ಅದರ 37 ಸಾಂಸ್ಥಿಕ ರಾಜ್ಯ ಘಟಕಗಳಲ್ಲಿ ಕನಿಷ್ಠ 50% ರಷ್ಟು ಸಾಂಸ್ಥಿಕ ಕೂಲಂಕಷ ಪರೀಕ್ಷೆಗೆ ಒಳಗಾಗಬೇಕಾಗಿದೆ. ಪ್ರಾರಂಭದಿಂದಲೂ, ಬಿಜೆಪಿ ಯಾವಾಗಲೂ ಆರ್‌ಎಸ್‌ಎಸ್‌ನೊಂದಿಗೆ 'ಸಮನ್ವಯ'ದಲ್ಲಿ ಒಮ್ಮತದ ಅಭ್ಯರ್ಥಿಯನ್ನು ತನ್ನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇದೆಲ್ಲಾ ಒಂದೆರಡು ತಿಂಗಳಷ್ಟೆ, ಭಾರತ ಮತ್ತೆ ಮಾತುಕತೆಗೆ ಬರಲಿದೆ, ಕ್ಷಮೆಯಾಚಿಸುತ್ತದೆ: ಅಮೆರಿಕ ವಾಣಿಜ್ಯ ಸಚಿವ ಲುಟ್ನಿಕ್

'ಇಸ್ಲಾಂಗೆ ವಿರುದ್ಧ': ದರ್ಗಾದ ಫಲಕದಲ್ಲಿನ ಅಶೋಕ ಲಾಂಛನ ವಿರೂಪಗೊಳಿಸಿದ ಸ್ಥಳೀಯರು!: Video

ಕರಾಳ ಚೀನಾಕ್ಕೆ ಭಾರತವನ್ನು ಕಳೆದುಕೊಂಡಂತೆ ಅನಿಸಿದೆ: ಜಗತ್ತಿನ ಗಮನ ಸೆಳೆದ ಡೊನಾಲ್ಡ್ ಟ್ರಂಪ್ ಪೋಸ್ಟ್!

GST ವ್ಯಾಪ್ತಿಗೆ ಪೆಟ್ರೋಲ್, ಡೀಸೆಲ್ ಏಕಿಲ್ಲ?: GST 3.0 ಬಗ್ಗೆ Nirmala Sitharaman ಹೇಳಿದ್ದೇನು?

"GST ಇಳಿಕೆಯ ಲಾಭ ಗ್ರಾಹಕರಿಗೆ ತಲುಪಿಸಲು ಬದ್ಧ": TATA ಕಾರುಗಳ ಬೆಲೆಯಲ್ಲಿ ಭಾರಿ ಇಳಿಕೆ: ವಿವರ ಇಂತಿದೆ..

SCROLL FOR NEXT