ಗುಂಥರ್ ಫೆಹ್ಲಿಂಗರ್-ಜಾನ್ ವಿವಾದಿತ ಪೋಸ್ಟ್ 
ದೇಶ

"Dismantle India": 'ಭಾರತವನ್ನು ಕೆಡವಿ, ವಿಭಜಿಸಿ' ಎಂದ ಆಸ್ಟ್ರಿಯಾ ಅರ್ಥಶಾಸ್ತ್ರಜ್ಞನ 'X' ಖಾತೆ ನಿಷೇಧ!

ಭಾರತವನ್ನು ವಿಭಜಿಸಿ ‘ಹಿಂದಿನ ಭಾರತ’ (ExIndia) ಮಾಡಬೇಕೆಂದು ಕರೆ ನೀಡಿದ್ದ ಆಸ್ಟ್ರಿಯಾದ ಅರ್ಥಶಾಸ್ತ್ರಜ್ಞ ಗುಂಥರ್ ಫೆಹ್ಲಿಂಗರ್-ಜಾನ್ ಎಂಬುವವರ ಎಕ್ಸ್ ಖಾತೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.

ನವದೆಹಲಿ: 'ಭಾರತವನ್ನು ಕೆಡವಿ ಹಾಕಿ, ವಿಭಜಿಸಬೇಕು' ಎಂದು ವಿವಾದಾತ್ಮಕ ಪೋಸ್ಟ್ ಮಾಡುವುದರ ಜೊತೆಗೆ ಖಲಿಸ್ತಾನ ಪರ ನಕ್ಷೆಯನ್ನು ಹಂಚಿಕೊಂಡ ಆಸ್ಟ್ರಿಯನ್ ಅರ್ಥಶಾಸ್ತ್ರಜ್ಞ ಗುಂಥರ್ ಫೆಹ್ಲಿಂಗರ್-ಜಾನ್ ಅವರ ಎಕ್ಸ್ (ಟ್ವಿಟರ್) ಖಾತೆಯನ್ನು ಭಾರತ ಸರ್ಕಾರ ನಿರ್ಬಂಧಿಸಿದೆ.

ಭಾರತವನ್ನು ವಿಭಜಿಸಿ ‘ಹಿಂದಿನ ಭಾರತ’ (ExIndia) ಮಾಡಬೇಕೆಂದು ಕರೆ ನೀಡಿದ್ದ ಆಸ್ಟ್ರಿಯಾದ ಅರ್ಥಶಾಸ್ತ್ರಜ್ಞ ಗುಂಥರ್ ಫೆಹ್ಲಿಂಗರ್-ಜಾನ್ ಎಂಬುವವರ ಎಕ್ಸ್ ಖಾತೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.

'ನಾನು ಭಾರತವನ್ನು ವಿಭಜಿಸಿ ‘ಹಿಂದಿನ ಭಾರತ’ (ExIndia) ಮಾಡಬೇಕೆಂದು ಕರೆ ನೀಡುತ್ತೇನೆ. ನರೇಂದ್ರ ಮೋದಿಯವರು ರಷ್ಯಾದ ವ್ಯಕ್ತಿ. ನಮಗೆ ಖಲಿಸ್ತಾನ ನಿರ್ಮಿಸಲು ಸ್ವಾತಂತ್ರ್ಯದ ಸ್ನೇಹಿತರು ಬೇಕು' ಎಂದು ಕರೆ ನೀಡಿದ್ದಾರೆ.

ಮಾತ್ರವಲ್ಲದೇ 'ಪಂಜಾಬ್, ದೆಹಲಿ, ಉತ್ತರ ಪ್ರದೇಶ ಮತ್ತು ರಾಜಸ್ಥಾನ ಸೇರಿದಂತೆ ಉತ್ತರ ಮತ್ತು ವಾಯುವ್ಯ ಭಾರತದ ರಾಜ್ಯಗಳನ್ನು “ಖಾಲಿಸ್ತಾನ್”ನ ಭಾಗವಾಗಿ ತೋರಿಸುವ ನಕ್ಷೆಯನ್ನು ಫೆಹ್ಲಿಂಗರ್ ಪ್ರಸಾರ ಮಾಡಿದ್ದಾರೆ. ಅದೇ ನಕ್ಷೆಯಲ್ಲಿ, ಜಮ್ಮು ಮತ್ತು ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿದೆ ಎಂದು ಚಿತ್ರಿಸಲಾಗಿದೆ, ಈ ಕ್ರಮವು ಆನ್‌ಲೈನ್‌ ನಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.

ಫೆಹ್ಲಿಂಗರ್-ಜಾನ್ ಅವರ ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಇದೀಗ ಕೇಂದ್ರ ಸರ್ಕಾರ ಕೂಡ ತನ್ನ ಕ್ರಮ ಕೈಗೊಂಡಿದೆ.

ಈ ವೈರಲ್ ಪೋಸ್ಟ್ ಅನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಗೃಹ ಸಚಿವಾಲಯ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ಫೆಹ್ಲಿಂಗರ್-ಜಾನ್ ಅವರ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸುವಂತೆ ಎಕ್ಸ್ (X) ಕಂಪನಿಗೆ ನಿರ್ದೇಶನ ನೀಡಿದ್ದವು. ಈ ನಿರ್ದೇಶನದ ಅನ್ವಯ, ಭಾರತದಲ್ಲಿ ಅವರ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

‘ಅವನೊಬ್ಬ ಹುಚ್ಚ’ ಎಂದ ವಿದೇಶಾಂಗ ಸಚಿವಾಲಯ

ಇನ್ನು ಗುಂಥರ್ ಫೆಹ್ಲಿಂಗರ್-ಜಾನ್ ಪೋಸ್ಟ್ ಕುರಿತು ಕಿಡಿಕಾರಿರುವ ವಿದೇಶಾಂಗ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು, “ಅದಕ್ಕೆ ಅಷ್ಟೊಂದು ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಅವನೊಬ್ಬ ಹುಚ್ಚ. ಆತ ಯಾವುದೇ ಅಧಿಕೃತ ಹುದ್ದೆಯಲ್ಲಿಲ್ಲ,” ಎಂದು ಹೇಳಿ, ಈ ವಿಷಯವನ್ನು ತಳ್ಳಿಹಾಕಿದ್ದಾರೆ.

ಜುಲೈ 2024 ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 41 ವರ್ಷಗಳ ನಂತರ ಆಸ್ಟ್ರಿಯಾಕ್ಕೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿಯಾಗಿದ್ದರು. ಭಾರತ ಮತ್ತು ಆಸ್ಟ್ರಿಯಾ ನಡುವಿನ ರಾಜತಾಂತ್ರಿಕ ಸಂಬಂಧಗಳ 75ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಈ ಐತಿಹಾಸಿಕ ಭೇಟಿ ನಡೆದಿತ್ತು.

ಅಂದಹಾಗೆ ಆಸ್ಟ್ರಿಯನ್ ಅರ್ಥಶಾಸ್ತ್ರಜ್ಞ ಗುಂಥರ್ ಫೆಹ್ಲಿಂಗರ್-ಜಾನ್ ಉಕ್ರೇನ್, ಕೊಸೊವೊ, ಮತ್ತು ಆಸ್ಟ್ರಿಯಾಗಳ ನ್ಯಾಟೋ (NATO) ಸದಸ್ಯತ್ವಕ್ಕಾಗಿ ಇರುವ ಆಸ್ಟ್ರಿಯನ್ ಸಮಿತಿಯ ಅಧ್ಯಕ್ಷರಾಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಭೋವಿ' ನಿಗಮದಲ್ಲಿ 'ಕಮಿಷನ್' ಆರೋಪ ಬೆನ್ನಲ್ಲೇ ಮೊದಲ ತಲೆದಂಡ: ಅಧ್ಯಕ್ಷ ಸ್ಥಾನಕ್ಕೆ ಎಸ್. ರವಿಕುಮಾರ್ ರಾಜೀನಾಮೆ

Dharmasthala ಬುರುಡೆ ಪ್ರಕರಣಕ್ಕೆ ಸ್ಫೋಟಕ ತಿರುವು: 'ಬುರುಡೆ' ಕೊಟ್ಟಿದ್ದು Girish Mattannavar, SIT ಮುಂದೆ ಸತ್ಯ ಬಿಚ್ಚಿಟ್ಟ ದೂರುದಾರ ಜಯಂತ್!

ಕರಾಳ ಚೀನಾಕ್ಕೆ ಭಾರತವನ್ನು ಕಳೆದುಕೊಂಡಂತೆ ಅನಿಸಿದೆ': ಜಗತ್ತಿನ ಗಮನ ಸೆಳೆದ ಡೊನಾಲ್ಡ್ ಟ್ರಂಪ್ ಫೋಸ್ಟ್!

Shreyas Iyer ಟೀಂ ಇಂಡಿಯಾ ಕಮ್ ಬ್ಯಾಕ್ ಕನಸು ಮತ್ತಷ್ಟು ದೂರ, Duleep Trophy Semi-Final ಪಂದ್ಯ..? ಇಷ್ಟಕ್ಕೂ ಆಗಿದ್ದೇನು?

ನಿಜವಾದ ಒಕ್ಕಲಿಗನೂ ಎಂದಿಗೂ ರೈತರ ಬಗ್ಗೆ ದರ್ಪದ ಮಾತು ಆಡಲ್ಲ: ಡಿಕೆ ಶಿವಕುಮಾರ್ ವಿರುದ್ಧ ಅಶೋಕ್ ಆಕ್ರೋಶ

SCROLL FOR NEXT