ಸಾಂದರ್ಭಿಕ ಚಿತ್ರ 
ದೇಶ

Vipin to Noor Alam: ಅಪ್ರಾಪ್ತ ಹಿಂದೂ ಬಾಲಕನನ್ನು ಮತಾಂತರಿಸಿ, ಮುಸ್ಲಿಂ ಹೆಸರಿಟ್ಟಿದ್ದ ಮದರಸಾದ ಪ್ರಾಂಶುಪಾಲನ ಬಂಧನ!

ತನ್ನ ಮಗನನ್ನು ವಾಪಸ್ ಮನೆಗೆ ಕಳುಹಿಸಲು ಕೋರಿದಾಗ ಆರೋಪಿಗಳು ತನ್ನನ್ನು ನಿಂದಿಸಿ ತಳ್ಳಿದ್ದಾರೆ. ಕೊಲೆ ಬೆದರಿಕೆ ಹಾಕಿದರು ಎಂದು ಅವರು ಆರೋಪಿಸಿದ್ದಾರೆ.

ಉತ್ತರ ಪ್ರದೇಶ: ಅಪ್ರಾಪ್ತ ಹಿಂದೂ ಬಾಲಕನೊಬ್ಬನನ್ನು ಮತಾಂತರಿಸಿ, ಹೆಸರು ಬದಲಾಯಿಸಿ ಮದರಸಾಕ್ಕೆ ಸೇರಿಸಿಕೊಂಡಿದ್ದ ಆರೋಪದ ಮೇರೆಗೆ ಪ್ರಾಂಶುಪಾಲರೊಬ್ಬರನ್ನು ಬಂಧಿಸಲಾಗಿದೆ. ಇತ್ತೀಚೆಗಷ್ಟೇ ಜೈಲಿನಿಂದ ಹೊರಬಂದ ಬಾಲಕನ ತಂದೆ ಖಡ್ಡಾ ಪೊಲೀಸ್ ಠಾಣಾ ವ್ಯಾಪ್ತಿಯ ಕೊಹರಗಡ್ಡಿ ಗ್ರಾಮದ ಮದರಸಾದಲ್ಲಿ ಭಾನುವಾರ ಗಲಾಟೆ ನಡೆಸಿದ ಬಳಿಕ ಈ ವಿಚಾರ ಬೆಳಕಿಗೆ ಬಂದಿದೆ.

ಮದರಸಾ ಪ್ರಾಂಶುಪಾಲ ಮುಜಿಬುರಹ್ಮಾನ್ ತನ್ನ ಮಗನಿಗೆ ಉಚಿತ ಊಟ, ಶಿಕ್ಷಣದ ಆಮಿಷವೊಡ್ಡಿ ಮತಾಂತರಗೊಳಿಸಿದ್ದು, ಬಾಲಕನಿಗೆ ನೂರ್ ಆಲಂ ಎಂದು ಹೆಸರಿಡಲಾಗಿದೆ. ಮದರಸಾದಲ್ಲಿಯೇ ಇರಿಸಿಕೊಳ್ಳಲಾಗಿದೆ ಎಂದು ದೂರುದಾರರಾದ ರಾಬ್ರಿ ದೇವಿ ಆರೋಪಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತನ್ನ ಮಗನನ್ನು ವಾಪಸ್ ಮನೆಗೆ ಕಳುಹಿಸಲು ಕೋರಿದಾಗ ಆರೋಪಿಗಳು ತನ್ನನ್ನು ನಿಂದಿಸಿ ತಳ್ಳಿದ್ದಾರೆ. ಕೊಲೆ ಬೆದರಿಕೆ ಹಾಕಿದರು ಎಂದು ಅವರು ಆರೋಪಿಸಿದ್ದಾರೆ.

ಈ ಸಂಬಂಧ ಖಡ್ಡಾ ಎಸ್‌ಎಚ್‌ಒ ಗಿರಿಜೇಶ್ ಉಪಾಧ್ಯಾಯ ಅವರು ಉತ್ತರ ಪ್ರದೇಶ ಕಾನೂನುಬಾಹಿರ ಧಾರ್ಮಿಕ ಮತಾಂತರ ನಿಷೇಧ ಕಾಯ್ದೆ, 2021 ರ ಅಡಿಯಲ್ಲಿ ಸೋಮವಾರ ಪ್ರಕರಣ ದಾಖಲಿಸಿದ್ದಾರೆ. ಆರೋಪಿಯನ್ನು ಮುಜಿಬುರ್ರಹ್ಮಾನ್ ಎಂದು ಗುರುತಿಸಲಾಗಿದೆ. ಆತ ಮಹಾರಾಜ್‌ಗಂಜ್ ಜಿಲ್ಲೆಯವರಾಗಿದ್ದಾರೆ ಮತ್ತು ಪ್ರಸ್ತುತ ಮದರಸಾದಲ್ಲಿ ವಾಸಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಆರಂಭದಲ್ಲಿ ಮದರಸಾಕ್ಕೆ ಭೇಟಿ ನೀಡಿದ ಹುಡುಗ ಅಲ್ಲಿಯೇ ಇರಲು ಪ್ರಾರಂಭಿಸಿ ಸ್ಥಳೀಯ ಹುಡುಗಿಯೊಂದಿಗೆ ನಿಕಟ ಸಂಬಂಧವನ್ನು ಬೆಳೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅತ್ಯಾಚಾರ ಪ್ರಕರಣದಲ್ಲಿ 2015 ರಲ್ಲಿ ಜೈಲುವಾಸ ಅನುಭವಿಸಿ ಸುಮಾರು 10 ವರ್ಷಗಳ ನಂತರ ಬಿಡುಗಡೆಯಾದ ಅವರ ತಂದೆ ಮಹೇಂದ್ರ ಕುಶ್ವಾಹಾ ಅವರು ಮದರಸಾದಲ್ಲಿ ತಮ್ಮ ಮಗ ಇರುವುದನ್ನು ಪತ್ತೆ ಹಚ್ಚಿದ್ದಾರೆ. ಈ ಬಗ್ಗೆ ವಿವರವಾದ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Vice President Election 2025: ನೂತನ ಉಪ ರಾಷ್ಟ್ರಪತಿಯಾಗಿ ಸಿ ಪಿ ರಾಧಾಕೃಷ್ಣನ್ ಆಯ್ಕೆ

ಮದ್ದೂರಿನಲ್ಲಿ ಕಲ್ಲು ತೂರಾಟ: ಶಾಂತಿ ಕದಡುವುದೇ ಬಿಜೆಪಿ ಉದ್ದೇಶ; ಜಾತಿ, ಧರ್ಮ, ಪಕ್ಷ ಲೆಕ್ಕಿಸದೆ ಕ್ರಮ; Video

ಆಜ್ ತಕ್ ನಿರೂಪಕನ ವಿರುದ್ಧ ದ್ವೇಷ ಭಾಷಣ ಆರೋಪ: ಎಫ್‌ಐಆರ್ ದಾಖಲಿಸಲು UP ನ್ಯಾಯಾಲಯ ಆದೇಶ

Amruta Fadnavis: 'ನೀತಿ ಪಾಠ ಹೇಳುವವರೆ ಈ ರೀತಿಯ ಬಟ್ಟೆ ಧರಿಸಿದರೆ ಹೇಗೆ? ಮಹಾ ಸಿಎಂ 'ಫಡ್ನವೀಸ್ ಪತ್ನಿ' ವಿರುದ್ಧ ನೆಟ್ಟಿಗರ ಆಕ್ರೋಶ, Video ವೈರಲ್

ಅಕ್ರಮ ಬೆಟ್ಟಿಂಗ್ ಪ್ರಕರಣ: ವೀರೇಂದ್ರ ಪಪ್ಪಿ ಚಿನ್ನದ ಖಜಾನೆ ಕಂಡು ED ಶಾಕ್; 21 ಕೆಜಿ ಗೋಲ್ಡ್ ಬಿಸ್ಕೇಟ್ ಜಪ್ತಿ

SCROLL FOR NEXT