ಸಾಂದರ್ಭಿಕ ಚಿತ್ರ 
ದೇಶ

ಯುಕೆಯಲ್ಲಿ ಸಿಖ್ ಮಹಿಳೆ ಮೇಲೆ 'ಜನಾಂಗೀಯ ಪ್ರೇರಿತ' ಅತ್ಯಾಚಾರ: ಆರೋಪಿ ಬಂಧನ

ತನ್ನ ಮೇಲೆ ದೌರ್ಜನ್ಯದ ವೇಳೆ ದಾಳಿಕೋರು ಜನಾಂಗೀಯ ನಿಂದನೆ ಮಾಡಿದ್ದಾರೆ. "ನೀನು ಈ ದೇಶಕ್ಕೆ ಸೇರಿದವಳಲ್ಲ" ಮತ್ತು "ನಿನ್ನ ದೇಶಕ್ಕೆ ತೊಲಗು" ಎಂದು ಬೆದರಿಕೆ ಹಾಕಿದರು.

ಚಂಡೀಗಢ: ಬ್ರಿಟನ್ ನಲ್ಲಿ ಭಾರತೀಯ ಮೂಲದ 20ರ ವರ್ಷದ ಸಿಖ್ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಮತ್ತು ಹಲ್ಲೆ ನಡೆಸಿ, ಜನಾಂಗೀಯ ನಿಂದನೆ ಮಾಡಿದ ಆರೋಪದ ಮೇಲೆ ಯುನೈಟೆಡ್ ಕಿಂಗ್‌ಡಂನ ವೆಸ್ಟ್ ಮಿಡ್‌ಲ್ಯಾಂಡ್ಸ್ ಪೊಲೀಸರು 30 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಇದು "ಜನಾಂಗೀಯ ಪ್ರೇರಿತ ಅಪರಾಧ" ಎಂದು ಕರೆಯಲಾಗುತ್ತಿದೆ.

"ಓಲ್ಡ್‌ಬರಿಯಲ್ಲಿ ಜನಾಂಗೀಯ ಪ್ರೇರಿತ ಅತ್ಯಾಚಾರದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಇಂದು ಸಂಜೆ(ಭಾನುವಾರ) ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಮಂಗಳವಾರ ಬೆಳಗ್ಗೆ ಟೇಮ್ ರೋಡ್ ಪ್ರದೇಶದಲ್ಲಿ ನಡೆದ ಹಲ್ಲೆಯ ವಿಚಾರಣೆಯ ಭಾಗವಾಗಿ 30 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಅತ್ಯಾಚಾರದ ಶಂಕೆಯ ಮೇಲೆ ಬಂಧಿಸಲಾಗಿದೆ ಎಂದು ವೆಸ್ಟ್ ಮಿಡ್‌ಲ್ಯಾಂಡ್ಸ್ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

"ತನಿಖೆ ಮುಂದುವರೆದಂತೆ ಮಹಿಳೆಗೆ ಬೆಂಬಲ ಸಿಗುತ್ತಿದೆ" ಎಂದು ಪೊಲೀಸರು ತಿಳಿಸಿದ್ದಾರೆ.

ಸೆಪ್ಟೆಂಬರ್ 9 ರಂದು ಬೆಳಿಗ್ಗೆ 8:30ರ ಸುಮಾರಿಗೆ ಟೇಮ್ ರೋಡ್ ಬಳಿ ನಡೆದ ಈ ಘಟನೆಯನ್ನು ಜನಾಂಗೀಯವಾಗಿ ಉಲ್ಬಣಿಸಿದ ದಾಳಿ ಎಂದು ಪೋಲಿಸರು ಪರಿಗಣಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತನ್ನ ಮೇಲೆ ದೌರ್ಜನ್ಯದ ವೇಳೆ ದಾಳಿಕೋರು ಜನಾಂಗೀಯ ನಿಂದನೆ ಮಾಡಿದ್ದಾರೆ. "ನೀನು ಈ ದೇಶಕ್ಕೆ ಸೇರಿದವಳಲ್ಲ" ಮತ್ತು "ನಿನ್ನ ದೇಶಕ್ಕೆ ತೊಲಗು" ಎಂದು ಬೆದರಿಕೆ ಹಾಕಿದರು ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ ಎಂದು ವೆಸ್ಟ್ ಮಿಡ್‌ಲ್ಯಾಂಡ್ಸ್ ಪೋಲಿಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಕ್ರಮ ನಡೆದರೆ ಮಧ್ಯಪ್ರವೇಶಿಸುತ್ತೇವೆ- ಸುಪ್ರೀಂ ಕೋರ್ಟ್: ಬಿಹಾರ SIR ವಿರುದ್ಧದ ಅರ್ಜಿಗಳ ಅಂತಿಮ ವಿಚಾರಣೆ ಅಕ್ಟೋಬರ್ 7ಕ್ಕೆ ನಿಗದಿ

ಜಾರ್ಖಂಡ್‌: ತಲೆಗೆ 1 ಕೋಟಿ ರೂ. ಬಹುಮಾನ ಹೊಂದಿದ್ದ ನಕ್ಸಲ್ ನಾಯಕ ಸೇರಿ ಮೂವರ ಹತ್ಯೆ!

ಬಿಹಾರದಲ್ಲಿ 36,000 ಕೋಟಿ ರೂ. ಮೊತ್ತದ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

ದೆಹಲಿ: ಬೈಕ್​ಗೆ BMW ಕಾರು ಡಿಕ್ಕಿ; ಕೇಂದ್ರ ಹಣಕಾಸು ಸಚಿವಾಲಯದ ಉಪ ಕಾರ್ಯದರ್ಶಿ ಸಾವು, ಪತ್ನಿಗೆ ಗಾಯ

Waqf Amendment Act: ಕೆಲವೊಂದು ಅಂಶಗಳಿಗೆ ತಡೆ ನೀಡಿ ಸುಪ್ರೀಂ ಕೋರ್ಟ್ 'ಮಧ್ಯಂತರ ಆದೇಶ' ಪ್ರಕಟ

SCROLL FOR NEXT