ಗೋಪೇಶ್ವರ: ಉತ್ತರಾಖಂಡದ ಚಮೋಲಿ ಜಿಲ್ಲೆಯ ಮಳೆಯಿಂದ ತತ್ತರಿಸಿದ್ದು, ಹಾನಿಗೊಳಗಾದ ಹಳ್ಳಿಗಳಲ್ಲಿ ಶುಕ್ರವಾರ ಮತ್ತೆ ಐದು ಶವಗಳು ಪತ್ತೆಯಾಗಿವೆ. ಇದರೊಂದಿಗೆ ಸಾವಿನ ಸಂಖ್ಯೆ ಏಳಕ್ಕೆ ಏರಿದೆ.
ರಕ್ಷಣಾ ತಂಡ, ಅವಶೇಷಗಳನ್ನು ಅಗೆದು ಕೆಸರಿನಲ್ಲಿ ಕಾಣೆಯಾದವರನ್ನು ಹುಡುಕುತ್ತಿದ್ದು, ಗುರುವಾರ ಎರಡು ಶವಗಳು ಪತ್ತೆಯಾಗಿವೆ. ಇಂದು ಮತ್ತೆ ಐದು ಶವಗಳು ಪತ್ತೆಯಾಗಿವೆ.
ಡೆಹ್ರಾಡೂನ್‌ನಿಂದ ಸುಮಾರು 260 ಕಿ.ಮೀ ಮತ್ತು ಗೋಪೇಶ್ವರದಲ್ಲಿರುವ ಚಮೋಲಿ ಜಿಲ್ಲಾ ಕೇಂದ್ರದಿಂದ 50 ಕಿ.ಮೀ ದೂರದಲ್ಲಿರುವ ಚಮೋಲಿಯ ನಂದನಗರ ಪ್ರದೇಶದ ಕುಂಟಾರಿ ಲಗಾ ಫಾಲಿ, ಕುಂಟಾರಿ ಲಗಾ ಸರ್ಪಾನಿ, ಸೆರಾ ಮತ್ತು ಧುರ್ಮಾ ಎಂಬ ನಾಲ್ಕು ಗ್ರಾಮಗಳಲ್ಲಿ ಭಾರೀ ಮಳೆಯಿಂದ ನಿನ್ನೆ ಭೂಕುಸಿತ ಮತ್ತು ಪ್ರವಾಹ ಸಂಭವಿಸಿದೆ.
ನಂದನಗರವು ಈಗಾಗಲೇ ಭೂ ಕುಸಿತದಿಂದ ತತ್ತರಿಸಿದ್ದು, ಚಮೋಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂದೀಪ್ ತಿವಾರಿ ಅವರು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳ ಮೇಲ್ವಿಚಾರಣೆಗೆ ನಂದನಗರದಲ್ಲಿದ್ದಾರೆ.
ಗುರುವಾರ, ಕುಂಟಾರಿ ಲಗಾ ಫಾಲಿ ಮತ್ತು ಧುರ್ಮಾ ಗ್ರಾಮಗಳಿಂದ ಜೀವಂತವಾಗಿ ರಕ್ಷಿಸಲ್ಪಟ್ಟ ಐದು ಜನ ಸೇರಿದಂತೆ 12 ಜನ ಗಾಯಗೊಂಡಿದ್ದು, ಅವರು ಋಷಿಕೇಶದ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.