ಮಾತಾ ಅಮೃತಾನಂದಮಯಿಗೆ ಗೌರವ ಪ್ರದಾನ ಮಾಡಿದ ಸಚಿವ ಸಾಜಿ ಚೆರಿಯನ್. 
ದೇಶ

ಮಾತಾ ಅಮೃತಾನಂದಮಯಿಗೆ ಕೇರಳ ಸರ್ಕಾರ ಸನ್ಮಾನ

ಮಾತಾ ಅಮೃತಾನಂದಮಯಿ ಅವರು ಮಲಯಾಳಂ ಭಾಷೆ ಮತ್ತು ಸಂಸ್ಕೃತಿಯ ಶಕ್ತಿಯನ್ನು ಇಡೀ ಜಗತ್ತಿಗೆ ತೋರಿಸಿದ್ದಾರೆ. ಇದು ಜಾಗತಿಕ ವೇದಿಕೆಯಲ್ಲಿ ಮಾತೃಭಾಷೆಯನ್ನು ನಿರ್ಲಕ್ಷಿಸುವವರಿಗೆ ಪ್ರಬಲ ಸಂದೇಶವಾಗಿತ್ತು.

ಕೊಲ್ಲಂ: ಮಲಯಾಳಂ ಭಾಷೆ ಮತ್ತು ಸಂಸ್ಕೃತಿಯ ಶಕ್ತಿಯನ್ನು ಇಡೀ ಜಗತ್ತಿಗೆ ತೋರಿಸಿದ ಮಾತಾ ಅಮೃತಾನಂದಮಯಿ ಅವರಿಗೆ ಕೇರಳ ಸರ್ಕಾರ ಶುಕ್ರವಾರ ಸನ್ಮಾನಿಸಿದೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಸಭಾಂಗಣದಲ್ಲಿ ಮಲಯಾಳಂನಲ್ಲಿ ಭಾಷಣದ ಮಾಡಿದ ಬೆಳ್ಳಿ ಮಹೋತ್ಸವ ಸಮಾರಂಭದಲ್ಲಿ ಕೇರಳ ಸರ್ಕಾರ ಮಾತಾ ಅಮೃತಾನಂದಮಯಿ ಅವರನ್ನು ಸನ್ಮಾನಿಸಿದೆ.

ಕೇರಳ ರಾಜ್ಯ ಸರ್ಕಾರದ ಪರವಾಗಿ ಸಾಂಸ್ಕೃತಿಕ ವ್ಯವಹಾರಗಳ ಸಚಿವ ಸಾಜಿ ಚೆರಿಯನ್ ಅವರು ಗೌರವ ಪ್ರದಾನ ಮಾಡಿದರು.

ಬಳಿಕ ಮಾತನಾಡಿದ ಅವರು, ಮಾತಾ ಅಮೃತಾನಂದಮಯಿ ಅವರು ಮಲಯಾಳಂ ಭಾಷೆ ಮತ್ತು ಸಂಸ್ಕೃತಿಯ ಶಕ್ತಿಯನ್ನು ಇಡೀ ಜಗತ್ತಿಗೆ ತೋರಿಸಿದ್ದಾರೆ. ಇದು ಜಾಗತಿಕ ವೇದಿಕೆಯಲ್ಲಿ ಮಾತೃಭಾಷೆಯನ್ನು ನಿರ್ಲಕ್ಷಿಸುವವರಿಗೆ ಪ್ರಬಲ ಸಂದೇಶವಾಗಿತ್ತು. ಇದು ಕೇವಲ ಸನ್ಮಾನವಲ್ಲ - ಇದು ಸಾಂಸ್ಕೃತಿಕ ಜಾಗೃತಿ ಎಂದು ಹೇಳಿದರು. ಇದೇ ವೇಳೆ ಕೇರಳ ಮುಖ್ಯಮಂತ್ರಿಗಳು ತಮ್ಮ ಗೌರವ ಹಾಗೂ ಶುಭಾಶಯಗಳನ್ನು ತಿಳಿಸಿರುವುದಾಗಿ ತಿಳಿಸಿದರು.

ನಂತರ ಮಾತನಾಡಿದ ಮಾತಾ ಅಮೃತಾನಂದಮಯಿ ಅವರು, ಗೌರವವನ್ನು ಮಲಯಾಳಂ ಭಾಷೆಗೆ ಅರ್ಪಿಸಿದರು. ಈ ಪ್ರಶಸ್ತಿ ಮಲಯಾಳಂಗೆ ಸೇರಿದ್ದು, ನಮ್ಮ ಭಾಷೆ ನಮಗೆ ಗುರುತು ಮತ್ತು ರೂಪ ನೀಡಿದೆ. ಪೋಷಕರು ತಮ್ಮ ಮಕ್ಕಳಿಗೆ ತಮ್ಮ ಮಾತೃಭಾಷೆಯ ಬಗ್ಗೆ ಹೆಮ್ಮೆ ಪಡುವಂತೆ ಮತ್ತು ಅದನ್ನು ಸಂರಕ್ಷಿಸುವಂತೆ ಪ್ರೇರೇಪಿಸಬೇಕು ಎಂದು ತಿಳಿಸಿದರು. ಬಳಿಕ ಶಾಸಕರಾದ ಸಿ.ಆರ್. ಮಹೇಶ್ ಮತ್ತು ಉಮಾ ಥಾಮಸ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕೇರಳ ರಾಜ್ಯ ಬಿಜೆಪಿ ಉಪಾಧ್ಯಕ್ಷ ಡಾ. ಕೆ.ಎಸ್. ರಾಧಾಕೃಷ್ಣನ್, ಐಜಿ ಜಿ. ಲಕ್ಷ್ಮಣ್, ಕೇರಳ ಕಾನೂನು ಅಕಾಡೆಮಿ ನಿರ್ದೇಶಕ ನಾಗರಾಜ್ ನಾರಾಯಣನ್, ನಟ ದೇವನ್ ಮತ್ತು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಸಿಇಒ ಲಕ್ಷ್ಮಿ ಮೆನನ್ ಈ ಉಪಸ್ಥಿತರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕರ್ನಾಟಕದಲ್ಲಿ ಮತ್ತೆ ಮಳೆ ಆರ್ಭಟ; 8 ಜಿಲ್ಲೆಗಳಲ್ಲಿ Yellow alert, ಭೀಮಾನದಿ ಅಬ್ಬರಕ್ಕೆ 'ಉತ್ತರ' ತತ್ತರ!

ಕಲಬುರಗಿಯಲ್ಲಿ ಕುಂಭದ್ರೋಣ ಮಳೆ ಅಬ್ಬರ: ಹಲವು ಸೇತುವೆ ಜಲಾವೃತ; 2 ದಿನ ಶಾಲೆಗಳಿಗೆ ರಜೆ ಘೋಷಣೆ

4ನೇ ದಿನಕ್ಕೆ Ladakh ಕರ್ಫ್ಯೂ: Sonam Wangchuk ಜೋಧ್ ಪುರ ಜೈಲಿಗೆ!, ಪ್ರಚೋದನೆ ನೀಡಿದ್ದ ಕೌನ್ಸಿಲರ್ ಬಂಧನಕ್ಕೂ ಕ್ರಮ!

ಕೊನೆಗೂ ಈಡೇರಿದ 30 ವರ್ಷದ ಬೇಡಿಕೆ: ಬೆಂಗಳೂರು-ಮುಂಬೈ ನಡುವೆ ಹೊಸ ಸೂಪರ್‌ಫಾಸ್ಟ್ ರೈಲು ಘೋಷಣೆ; ತೇಜಸ್ವಿ ಸೂರ್ಯ

ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ: ಐವರು ದುರ್ಮರಣ- ಸಂಪೂರ್ಣ ನಜ್ಜುಗುಜ್ಜಾದ ಥಾರ್ ಕಾರು!

SCROLL FOR NEXT