ಲಡಾಖ್‌ನ ಲೇಹ್‌ನಲ್ಲಿ ಸೆಪ್ಟೆಂಬರ್ 29, 2025 ರಂದು ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಲೇಹ್ ಅಪೆಕ್ಸ್ ಬಾಡಿ (LAB) ಸಹ-ಅಧ್ಯಕ್ಷ ಚೆರಿಂಗ್ ಡೋರ್ಜಯ್ (ಮಧ್ಯದಲ್ಲಿ) ಮತ್ತು ಇತರ ಸದಸ್ಯರು ಮಾತನಾಡಿದರು. PTI Photo
ದೇಶ

ಸಹಜ ಸ್ಥಿತಿಗೆ ಮರಳುವವರೆಗೆ ಮಾತುಕತೆ ಇಲ್ಲ; ವಾಂಗ್‌ಚುಕ್ ಬೇಷರತ್ ಬಿಡುಗಡೆಗೆ ಕೆಡಿಎ ಆಗ್ರಹ

"ಲಡಾಖ್‌ನಲ್ಲಿ ಚಾಲ್ತಿಯಲ್ಲಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಶಾಂತಿ ಪುನಃಸ್ಥಾಪಿಸುವವರೆಗೆ ನಾವು ಯಾವುದೇ ಮಾತುಕತೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಸರ್ವಾನುಮತದಿಂದ ನಿರ್ಧರಿಸಿದ್ದೇವೆ".

ಲೇಹ್: ಲಡಾಖ್‌ನಲ್ಲಿ ಸಾಮಾನ್ಯ ಸ್ಥಿತಿ ಮರಳುವವರೆಗೆ ಗೃಹ ಸಚಿವಾಲಯದ ಉನ್ನತ ಮಟ್ಟದ ಸಮಿತಿಯೊಂದಿಗೆ ಯಾವುದೇ ಮಾತುಕತೆ ನಡೆಸುವುದಿಲ್ಲ ಎಂದು ಲೇಹ್ ಅಪೆಕ್ಸ್ ಸಂಸ್ಥೆ ಸೋಮವಾರ ಘೋಷಿಸಿದೆ.

"ಲಡಾಖ್‌ನಲ್ಲಿ ಚಾಲ್ತಿಯಲ್ಲಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಶಾಂತಿ ಪುನಃಸ್ಥಾಪಿಸುವವರೆಗೆ ನಾವು ಯಾವುದೇ ಮಾತುಕತೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಸರ್ವಾನುಮತದಿಂದ ನಿರ್ಧರಿಸಿದ್ದೇವೆ" ಎಂದು ಲೇಹ್ ಅಪೆಕ್ಸ್ ಸಂಸ್ಥೆಯ ಅಧ್ಯಕ್ಷ ಥುಪ್ಸ್ತಾನ್ ಚೆವಾಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

"ಅಲ್ಲಿರುವ ಭಯ, ದುಃಖ ಮತ್ತು ಕೋಪದ ವಾತಾವರಣವನ್ನು ಪರಿಹರಿಸಲು ಕ್ರಮ ತೆಗೆದುಕೊಳ್ಳುವಂತೆ ನಾವು ಗೃಹ ಸಚಿವಾಲಯ, ಲಡಾಖ್ ಆಡಳಿತವನ್ನು ಒತ್ತಾಯಿಸುತ್ತೇವೆ" ಎಂದು ಅವರು ಹೇಳಿದರು.

ಹಿಂಸಾಚಾರದ ನಂತರ ಬಂಧಿಸಲ್ಪಟ್ಟ ಹೋರಾಟಗಾರ ಸೋನಮ್ ವಾಂಗ್‌ಚುಕ್ ಮತ್ತು ಇತರರನ್ನು ತಕ್ಷಣ ಮತ್ತು ಬೇಷರತ್ತಾಗಿ ಬಿಡುಗಡೆ ಮಾಡಬೇಕೆಂದು ಕಾರ್ಗಿಲ್ ಡೆಮಾಕ್ರಟಿಕ್ ಅಲೈಯನ್ಸ್(ಕೆಡಿಎ) ಸೋಮವಾರ ಒತ್ತಾಯಿಸಿದೆ.

ಲಡಾಖ್ ರಾಜ್ಯತ್ವ ಮತ್ತು ಇತರ ಪ್ರಮುಖ ಬೇಡಿಕೆಗಳನ್ನು ಈಡೇರಿಸದಿರುವುದು ಹಿಮಾಲಯ ಪ್ರದೇಶದ ಜನರನ್ನು "ದೂರ ತಳ್ಳಿದಂತೆ" ಎಂದು ಕೆಡಿಎ ಹೇಳಿದೆ.

ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೆಡಿಎ ಸದಸ್ಯ ಸಜ್ಜದ್ ಕಾರ್ಗಿಲಿ, ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆ(ಎನ್‌ಎಸ್‌ಎ) ಅಡಿಯಲ್ಲಿ ಬಂಧಿಸಿ, ಜೋಧ್‌ಪುರ ಜೈಲಿನಲ್ಲಿ ಇರಿಸಲಾಗಿರುವ ವಾಂಗ್‌ಚುಕ್ ಮತ್ತು ಲೇಹ್‌ನಲ್ಲಿ ಬಂಧಿಸಲ್ಪಟ್ಟ ಇತರ ಯುವ ನಾಯಕರನ್ನು ಬೇಷರತ್ತಾಗಿ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾಂಗ್ರೆಸ್ ಸಚಿವ ಸಂಪುಟ ಭಿನ್ನಮತ ಶಮನ: ರಾಜೀನಾಮೆ ವಾಪಸ್ ಪಡೆದ ರಾಮಲಿಂಗಾ ರೆಡ್ಡಿ!

T20 Cricket: ನಾಯಕತ್ವದಿಂದ ಗೇಟ್ ಪಾಸ್ ಬಳಿಕ ಸೂರ್ಯಕುಮಾರ್ ಮೊದಲ ಪೋಸ್ಟ್ ವೈರಲ್!

ದಾವಣಗೆರೆ: ಪಂಚಮಸಾಲಿ ಮಠಕ್ಕೆ ಭಕ್ತರು ನೀಡಿದ್ದ 1 ಕೆ.ಜಿ ಚಿನ್ನಾಭರಣ ನಾಪತ್ತೆ, ಟ್ರಸ್ಟ್ ವಿರುದ್ಧ ಗಂಭೀರ ಆರೋಪ!

Karnataka CET Result 2026 Announced: ಬೆಂಗಳೂರಿನ ಆರ್ ವಿ ಕಾಲೇಜಿನ ತನಿಷಾ ಕಾರ್ತಿಕ್ ಮೊದಲ ಸ್ಥಾನ, 2,92,782 ಅಭ್ಯರ್ಥಿಗಳು ಪ್ರವೇಶಕ್ಕೆ ಅರ್ಹತೆ!

ನಮ್ಮ ದಯೆಯಿಂದ TVK ಸರ್ಕಾರ ಉಳಿದಿದೆ: ಶೀಘ್ರದಲ್ಲೇ ಬೀಳಿಸ್ತೀವಿ- DMK ಅಧ್ಯಕ್ಷ ಸ್ಟಾಲಿನ್!

SCROLL FOR NEXT